Toxic: ಟಾಕ್ಸಿಕ್ ನೀವೆಲ್ಲ ಅಂದುಕೊಂಡಂತೆ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ: ಕೊನೆಗೂ ಸೀಕ್ರೇಟ್‌ ರಿವೀಲ್‌ ಮಾಡಿದ ನಟ ಯಶ್

ನಟ ಯಶ್ ಅಭಿನಯದ "ಟಾಕ್ಸಿಕ್" ಚಿತ್ರವು ಜೂನ್ ತಿಂಗಳಿನಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಇತ್ತೀಚೆಗೆ ಸಿನಿಮಾಕಾನ್ 2026 (CinemaCon 2026) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ಚಿತ್ರದ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಟಾಕ್ಸಿಕ್ ಎನ್ನುವುದು ಕೇವಲ ಹೊಡೆದಾಟದ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ ಎಂದು ಅಸಲಿ ಸೀಕ್ರೇಟ್‌ ರಿವೀಲ್‌ ಮಾಡಿದ್ದಾರೆ.

ಟಾಕ್ಸಿಕ್‌ ಚಿತ್ರದ ಕುರಿತು ಮಾತನಾಡುತ್ತಾ, "ಮೇಲ್ನೋಟಕ್ಕೆ ಇದು ಆಕ್ಷನ್ ತುಂಬಿದ ಗ್ಯಾಂಗ್‌ಸ್ಟರ್ ಚಿತ್ರದಂತೆ ಕಂಡರೂ, ಕಥೆಯ ಒಳಗೆ ಆಳವಾದ ಮಾನಸಿಕ ಪದರಗಳಿವೆ. ಮನುಷ್ಯನ ಜೀವನದ ಆಸಕ್ತಿದಾಯಕ ಮತ್ತು ಪ್ರತಿಯೊಬ್ಬರೂ ಸಂಬಂಧಿಸಿಕೊಳ್ಳಬಹುದಾದ ಸೂಕ್ಷ್ಮ ಅಂಶಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ" ಎಂದು ಯಶ್ ವಿವರಿಸಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಈ ಗ್ಯಾಂಗ್‌ಸ್ಟರ್ ಕಥೆಗೆ ವಿಭಿನ್ನ ಆಯಾಮ ನೀಡಿದ್ದಾರೆ ಎಂದು ಅವರು ಮೆಚ್ಚುಗೆಯೂ ವ್ಯಕ್ತಪಡಿಸಿದ್ದಾರೆ.

Toxic

ನೆಗೆಟಿವ್‌ ಪಾತ್ರ ಮಾಡುವ ಸವಾಲು

ಈ ಚಿತ್ರದಲ್ಲಿ ಯಶ್ ಅವರು ಕೊಂಚ ನೆಗೆಟಿವ್ ಛಾಯೆಯಿರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರು ಹೇಳುತ್ತಾ, ನೆಗೆಟಿವ್ ಛಾಯೆಯ ಪಾತ್ರಗಳನ್ನು ನಿರ್ವಹಿಸುವಾಗ ಯಾವುದೇ ಮಿತಿಗಳಿರುವುದಿಲ್ಲ. ನಟನಾಗಿ ಇದು ನನಗೆ ಹೆಚ್ಚಿನ ಸವಾಲು ಮತ್ತು ಉತ್ಸಾಹ ನೀಡುತ್ತದೆ. ಚಿತ್ರದಲ್ಲಿ ಹಲವು ಶೇಡ್‌ಗಳಿರುವ ಪಾತ್ರಗಳಿದ್ದು, ದಕ್ಷಿಣ ಮತ್ತು ಉತ್ತರ ಭಾರತದ ಹಲವು ದಿಗ್ಗಜ ನಟರು ಈ ಸಿನಿಮಾದಲ್ಲಿ ಒಂದಾಗಿದ್ದಾರೆ ಎಂದಿದ್ದಾರೆ.

ಕೇವಲ ಫೈಟಿಂಗ್ ಮತ್ತು ಸಾಹಸ ದೃಶ್ಯಗಳಿಗೆ ಸಿನಿಮಾ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈ ಸಿನಿಮಾ ಪ್ರೇಕ್ಷಕರಿಗೆ ಕೇವಲ ದೃಶ್ಯ ವೈಭವವನ್ನಷ್ಟೇ ನೀಡುವುದಿಲ್ಲ, ಬದಲಿಗೆ ಅವರ ಮನಸ್ಥಿತಿಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಇದು ಪ್ರೇಕ್ಷಕರನ್ನು ಯೋಚಿಸುವಂತೆ ಮಾಡುವಂತಹ ಕಥಾಹಂದರ ಹೊಂದಿದೆ ಎಂದು ವಿವರಿಸಿದ್ದಾರೆ. ಚಿತ್ರದ ಗುಣಮಟ್ಟದ ಬಗ್ಗೆ ಮಾತನಾಡುತ್ತಾ, ವಿಶ್ವದ ಅತ್ಯುತ್ತಮ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ವಿನ್ಯಾಸ ಮತ್ತು ತಾಂತ್ರಿಕತೆಯಲ್ಲಿ 'ಟಾಕ್ಸಿಕ್' ಹೊಸ ಮಾನದಂಡಗಳನ್ನು ಸೃಷ್ಟಿಸಲಿದೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.

Ramayana:
Ramayana: "ರಾಮಾಯಣ" ಮೊದಲ ಭಾಗ ನೋಡಲು ಕಾಯುತ್ತಿರುವ ಯಶ್‌ ಅಭಿಮಾನಿಗಳಿಗೆ ನಿರಾಸೆ

ಇಂಗ್ಲಿಷ್‌ನಲ್ಲೂ 'ಟಾಕ್ಸಿಕ್' ಸದ್ದು

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಕುರಿತು ಅಭಿಮಾನಿಗಳಿಗೆ ಅತಿದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಈ ಚಿತ್ರವನ್ನು ಕೇವಲ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ, ಮೊದಲ ಬಾರಿಗೆ ಇಂಗ್ಲಿಷ್‌ ಭಾಷೆಯಲ್ಲೂ ಚಿತ್ರೀಕರಿಸಲಾಗಿದೆ ಎಂದು ಯಶ್ ತಿಳಿಸಿದ್ದಾರೆ. ಇದು ಸಿನಿಮಾ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದೆ.

ಟಾಕ್ಸಿಕ್ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ. ಇದು ಕೇವಲ ಸಾಧಾರಣ ಆಕ್ಷನ್ ಅಥವಾ ಗ್ಯಾಂಗ್‌ಸ್ಟರ್ ಸಿನಿಮಾ ಅಲ್ಲ. ಮೇಲ್ನೋಟಕ್ಕೆ ಇದು ಆಕ್ಷನ್ ಚಿತ್ರದಂತೆ ಕಂಡರೂ, ಇದರ ಕಥೆಯಲ್ಲಿ ಆಳವಾದ ವೈವಿಧ್ಯಮಯ ಪದರಗಳಿವೆ. ಮನುಷ್ಯನ ಜೀವನದ ಮನೋವಿಜ್ಞಾನದ ಆಸಕ್ತಿದಾಯಕ ಅಂಶಗಳನ್ನು ಈ ಸಿನಿಮಾ ಒಳಗೊಂಡಿದೆ ಎಂದು ಯಶ್ ಹೇಳಿದ್ದಾರೆ. ಚಿತ್ರದಲ್ಲಿನ ಪಾತ್ರಗಳು ಮತ್ತು ಸನ್ನಿವೇಶಗಳು ಪ್ರತಿಯೊಬ್ಬರಿಗೂ ಹತ್ತಿರವಾಗುತ್ತವೆ. ಸಾಮಾನ್ಯ ಜನರು ತಮ್ಮ ಜೀವನದೊಂದಿಗೆ ಹೋಲಿಸಿಕೊಳ್ಳಬಹುದಾದ ಅಥವಾ ಕನೆಕ್ಟ್ ಮಾಡಿಕೊಳ್ಳಬಹುದಾದ ಹಲವು ಅಂಶಗಳು ಈ ಆಕ್ಷನ್ ಥ್ರಿಲ್ಲರ್‌ನಲ್ಲಿದೆ ಎಂದಿದ್ದಾರೆ.

ಇರಾನ್-ಅಮೆರಿಕ ನಡುವಿನ ಸಂಘರ್ಷದ ಕಾರಣದಿಂದಾಗಿ ಈ ಹಿಂದೆ ಚಿತ್ರದ ಚಿತ್ರೀಕರಣ ಮತ್ತು ಬಿಡುಗಡೆ ವಿಳಂಬವಾಗಿತ್ತು. ಇದರಿಂದಾಗಿ ಸಿನಿಮಾ ಮತ್ತೆ ಮುಂದೂಡಲ್ಪಡಬಹುದು ಎಂಬ ವದಂತಿಗಳಿದ್ದವು. ಆದರೆ, ಸದ್ಯದ ಮಾಹಿತಿಯ ಪ್ರಕಾರ ಚಿತ್ರವು ಜೂನ್ ತಿಂಗಳಿನಲ್ಲೇ ಅದ್ಧೂರಿಯಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+