ಅಂದು ದರ್ಶನ್ ಕಪಾಳಕ್ಕೆ ಹೊಡೆದಿದ್ದ ಈಕೆ ಇಂದು ಜನಪ್ರಿಯ ನಟಿ: ಯಾರೆಂದು ಗೆಸ್ ಮಾಡಿ!
ಬೆಂಗಳೂರು, ಆಗಸ್ಟ್ 17: ದರ್ಶನ್ ಸರ್ ಅಂದಿಗೂ ಇಂದಿಗೂ ಸಖತ್ ಫೇಮಸ್..ಅವರ ಜೊತೆ ನಟನೆ ಅಂದಾಗ ಬೇಡ ಅಂತಾ ಹೇಳಲು ಸಾಧ್ಯನೇ ಆಗಲಿಲ್ಲ..ದರ್ಶನ್ ಅವರ ಜೊತೆ ತುಂಬಾ ಆರಾಮಾಗಿ ನಟನೆ ಮಾಡಿದ್ದೆ. ಅದರಲ್ಲೂ ಅವರ ಕೆನ್ನೆಗೆ ಹೊಡೆಯುವ ಸೀನ್ ಕೂಡ ಮಾಡಿದ್ದೆ. ಅವರ ಜೊತೆ ನಟನೆ ಮಾಡಿರುವುದಕ್ಕೆ ಖುಷಿ ಇದೆ.. ಈ ರೀತಿ ತಮ್ಮ ನಟನೆಯ ಅನುಭವವನ್ನು ಹಂಚಿಕೊಂಡಿರುವುದು ಮತ್ಯಾರೂ ಅಲ್ಲ.. ಕಿರುತೆರೆಯಲ್ಲಿ ಜನಪ್ರಿಯತೆ ಪಡೆದು ಇತ್ತೀಚಿಗಷ್ಟೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಾನ್ಯಾ ಅಯ್ಯರ್.
ಗೌರಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿ ನಟಿಯಾಗಿ ಕಾಲಿಟ್ಟಿರುವ ಸಾನ್ಯಾ ಅಯ್ಯರ್, ನಟ ದರ್ಶನ್ ಜೊತೆಗೆ ತಾವು ಮೊದಲ ಬಾರಿಗೆ ನಟಿಸಿದ ಸಿನಿಮಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಫಿಲ್ಮೀ ಪ್ಯಾಕ್ ಕರ್ನಾಟಕದ ಜೊತೆ ಗೌರಿ ಚಿತ್ರದ ಸಂದರ್ಶನದಲ್ಲಿ ಮಾತನಾಡಿದ ಅವರು, ಗಜ ಸಿನಿಮಾ ಮಾಡುವಾಗ ನನಗೆ ನಟನೆಯ ತಲೆ-ಬುಡ ಅರ್ಥ ಆಗುತ್ತಿರಲಿಲ್ಲ. ಸುಮ್ಮನೆ ಆಟ ಆಡಿಕೊಂಡೇ ಆ್ಯಕ್ಟಿಂಗ್ ಮಾಡುತ್ತಿದ್ದೆ.

ನಟನೆ ಮಾಡುವ ಸಮಯದಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಬರುತ್ತಿರಲಿಲ್ಲ. ಆದರೆ ಅರ್ಥ ಆಗುತ್ತಿತ್ತು. ಹೇಳಿಕೊಟ್ಟ ಹಾಗೆ ಮಾಡುತ್ತಿದ್ದೆ. ಭಾವನೆಗೆ ಸರಿಯಾಗಿ ಏನೂ ಮಾಡುತ್ತಿರಲಿಲ್ಲ. ಕೇವಲ ನಟನೆ ಮಾಡುತ್ತಿದ್ದೆ ಅಷ್ಟೇ. ಆದರೆ ಆ ಪಾತ್ರ ತುಂಬಾ ಚೆನ್ನಾಗಿತ್ತು. ಹೀಗಾಗಿ ತುಂಬಾ ಖುಷಿಯಿಂದ ಮಾಡಿದ್ದೆ ಎಂದರು.
ಅವತ್ತಿನ ಕಾಲಕ್ಕೆ ಗಜ ಸಿನಿಮಾ ಹೀರೋ ದರ್ಶನ್ ಸರ್ ತುಂಬಾ ಫೇಮಸ್, ಈಗ ಅದಕ್ಕಿಂತ ಮೂರು ಪಟ್ಟು ಹೆಚ್ಚು ಫೇಮಸ್. ಆಗ ಅವರ ಜೊತೆ ನಟನೆ ಅಂದಾಗ ಖಂಡಿತವಾಗಿಯೂ ಇಲ್ಲ ಅಂತಾ ಹೇಳಲು ಆಗಲಿಲ್ಲ. ಹೀಗಾಗಿ ಮಾಡಿದೆ. ಪಾತ್ರನೂ ತುಂಬಾ ಚೆನ್ನಾಗಿತ್ತು. ದರ್ಶನ್ ಸರ್‌ಗೆ ಕಪಾಳಕ್ಕೆ ಹೊಡೆಯುವ ಸೀನ್ ಎಲ್ಲಾ ಇತ್ತು. ಅವಾಗ ಚಿಕ್ಕ ಹುಡುಗಿ ಅಲ್ವಾ.. ಯಾವ ಸೀನ್‌ಗೂ ಭಯ ಎಲ್ಲಾ ಆಗುತ್ತಿರಲಿಲ್ಲ. ನಟನೆ ಕಡೆ ನನಗೆ ಒಲವು ಜಾಸ್ತಿ ಇತ್ತು. ಹೀಗಾಗಿ ಆಟ ಆಡಿಕೊಂಡೇ ಗಜ ಸಿನಿಮಾದ ಶೂಟಿಂಗ್ ಮುಗಿಸಿದ್ದೆ. ಆ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿತ್ತು ಎಂದು ಹೇಳಿದರು.

ತಮ್ಮ ನಟನೆಯ ಪ್ರಯಾಣದ ಬಗ್ಗೆ ಮಾತನಾಡಿದ ಸಾನ್ಯಾ ಅಯ್ಯರ್, ನಾನು ಅರಸಿ ಧಾರಾವಾಹಿಯಲ್ಲಿ ಮಾಡಿರುವುದು ಕೆಲವರಿಗೆ ಗೊತ್ತೇ ಇಲ್ಲ. ಈಗ ಸಿನಿಮಾ ಮಾಡುತ್ತಿದ್ದೇನೆ. ಗೌರಿ ಚಿತ್ರದ ಮೂಲಕ ನಾಯಕಿ ನಟಿಯಾಗಿ ಚಿತ್ರರಂಗಕ್ಕೆ ಬರುತ್ತಿರುವುದು ತುಂಬಾ ಖುಷಿ ಇದೆ. ಪುಟ್ಟ ಗೌರಿ ನನಗೆ ತುಂಬಾ ದೊಡ್ಡ ಹೆಸರು ತಂದು ಕೊಟ್ಟಿತ್ತು. ಒಳ್ಳೆಯ ಮೆಚ್ಚುಗೆ ತಂದು ಕೊಟ್ಟಿತು. ಹಾಗೇಯೇ ಗೌರಿ ಸಿನಿಮಾದಲ್ಲಿ ನನ್ನನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಖಂಡಿತವಾಗಿಯೂ ಜನ ಮೆಚ್ಚಿಕೊಳ್ಳುತ್ತಾರೆ ಯಾಕೆಂದರೆ ಆ ಪಾತ್ರ ಅಷ್ಟೊಂದು ಚೆನ್ನಾಗಿದೆ. ಇದಾದ ಮೇಲೆ ನನಗೆ ಏನೇ ಮೆಚ್ಚುಗೆ ಸಿಕ್ಕಿದರು ನಾನು ಇಂದ್ರಜಿತ್ ಸರ್‌ಗೆ ಅರ್ಪಿಸಬೇಕಾಗುತ್ತದೆ. ಯಾಕೆಂದರೆ ಅವರೇ ಇದೆಲ್ಲದಕ್ಕೂ ಕಾರಣ ಎಂದರು.












Click it and Unblock the Notifications