Sanvi Sudeep: ಬಿಗ್‌ ಬಾಸ್ ರಜತ್ ಮೇಲೆ ಸಿಟ್ಟಾದ್ರಾ ಸಾನ್ವಿ ಸುದೀಪ್‌?

ಬಿಗ್ ಬಾಸ್ ಮುಗಿದ ಬಳಿಕ ನಟ ಸುದೀಪ್ ಸದ್ಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ (ಸಿಸಿಎಲ್) 2025ರಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿದ್ದು, ಸಿಸಿಎಲ್ ಮೊದಲ ಶನಿವಾರ (ಫೆಬ್ರವರಿ 8) ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರುದು ತುಂಬಿದ್ದರು. ಕಿಚ್ಚ ಸುದೀಪ್ ತಂಡಕ್ಕೆ ಬೆಂಬಲ ನೀಡಲು ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಕೂಡ ಆಗಮಿಸಿದ್ದರು.

ಕಿಚ್ಚ ಸುದೀಪ್‌ಗೆ ಪತ್ನಿ ಪ್ರಿಯಾ ಸುದೀಪ್ ಮತ್ತು ಮಗಳು ಸಾನ್ವಿ ಕೂಡ ಬೆಂಬಲ ನೀಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಮೊದಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಕರ್ನಾಟಕ ಬುಲ್ಡೋಜರ್ಸ್ ತೆಲುಗು ವಾರಿಯರ್ಸ್ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

this is why sanvi sudeep unhappy with bigg boss rajat during ccl 2025 match

ಕರ್ನಾಟಕ ಬುಲ್ಡೋಜರ್ಸ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಸುದೀಪ್ ಮಗಳು ಸಾನ್ವಿ ಬಿಗ್‌ ಬಾಸ್ ರನ್ನರ್ ಅಪ್‌ ರಜತ್‌ ವಿರುದ್ಧ ಬೇಸರಗೊಂಡ್ರಾ ಎನ್ನುವ ಅನುಮಾನ ಶುರುವಾಗಿದೆ. ರಜತ್ ವರ್ತನೆ ಹೇಗಿರುತ್ತದೆ ಎಂದು ಬಿಗ್‌ ಬಾಸ್‌ನಲ್ಲಿ ಈಗಾಗಲೇ ವೀಕ್ಷಕರು ನೋಡಿದ್ದಾರೆ.

ಸಾನ್ವಿ ಸುದೀಪ್ ಜೊತೆ ದೀಪಿಕಾ ದಾಸ್, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಫೋಟೊ ತೆಗೆಸಿಕೊಳ್ಳುವಾಗ ರಜತ್ ಹಿಂದಿನಿಂದ ಬಂದು ವಿಕ್ಟರಿ ಸಿಂಬಲ್ ತೋರಿಸಿದ್ದಾರೆ. ಇದನ್ನು ನೋಡಿದ ಸಾನ್ವಿ ಸುದೀಪ್‌ ನಿಮಗೇನ್ರಿ ಇಲ್ಲಿ ಕೆಲಸ ಎನ್ನುವಂತೆ ಪ್ರಶ್ನೆ ಮಾಡಿದ್ದಾರೆ. ರಜತ್ ಅಲ್ಲಿಂದ ಸ್ವಲ್ಪ ಮುಂದೆ ಬಂದಾಗ ಇನ್ನೊಬ್ಬರು ಬನ್ನಿ ಬ್ರೋ ಎಂದು ಕರೆದಿದ್ದು, ನಾನು ಸಾನ್ವಿ ಪಕ್ಕದಲ್ಲೇ ನಿಲ್ಲಬೇಕು ಆದ್ರೆ ಬೇಡ ಅಂತಾವ್ರೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.

ಕೊನೆಗೂ ರಜತ್ ಹೋಗಿ ಸಾನ್ವಿ ಹಿಂದೆ ನಿಂತು ಫೋಟೊಗೆ ಫೋಸ್ ಕೊಟ್ಟಿದ್ದಾರೆ. ಬಳಿಕ ಎಲ್ಲರೂ ಅಲ್ಲಿಂದ ಹೊರಟಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಹಲವು ಬಗೆಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ರಜತ್‌ ಎಲ್ಲಾ ಸಂದರ್ಭದಲ್ಲೂ ಒಂದೇ ತರ ಆಡುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಅದ್ವಿತಿ ಶೆಟ್ಟಿ, ಅಲ್ಲಿ ಅಂತಹದ್ದೇನೂ ಆಗಿಲ್ಲ, ರಜತ್ ನಮ್ಮನ್ನು ರೇಗಿಸಿದರು, ನಾವು ಅವರನ್ನು ರೇಗಿಸಿದೆವು ಇದೆಲ್ಲಾ ತಮಾಷೆಗಾಗಿ. ಅಲ್ಲಿದ್ದವರೆಲ್ಲಾ ಉತ್ತಮ ಸ್ನೇಹಿತರು. ಯಾರಿಗೂ ಬೇಜಾರಾಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+