ದರ್ಶನ್ ಮುಂದಿನ ಸಿನಿಮಾ ಹೆಸರು ‘ಪರಪ್ಪನ ಅಗ್ರಹಾರ’?

ದರ್ಶನ್ ಕೊಲೆ ಆರೋಪದಲ್ಲಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದು, ಈಗಾಗಲೇ ಕಳೆದ 12 ದಿನಗಳಿಂದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಹೀಗಿದ್ದಾಗ ಇಂದು ಪೊಲೀಸರ ಕಸ್ಟಡಿ ಅಂತ್ಯ ಆಗಿದ್ದು, ದರ್ಶನ್ & ಗ್ಯಾಂಗ್‌ನ ಕೋರ್ಟ್ ಎದುರು ಪೊಲೀಸರು ಹಾಜರುಪಡಿಸಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಅವರ ಮುಂದಿನ ಸಿನಿಮಾ ಯಾವುದು? ಅನ್ನೋ ಚರ್ಚೆಯು ಶುರುವಾಗಿದೆ.

ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್ ಈಗ 'ಪರಪ್ಪನ ಅಗ್ರಹಾರ' ಸೇರುವ ಟೈಂ ಹತ್ತಿರವಾಗಿದೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಅಮಾಯಕನ ಮರ್ಡರ್ ಕೇಸ್‌ನಲ್ಲಿ ದರ್ಶನ್ ಕೂಡ ಭಾಗಿ ಆಗಿದ್ದಾನೆ, ಕೊಲೆ ಆರೋಪದಲ್ಲಿ ದರ್ಶನ್‌ಗೆ ಕೂಡ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

This Is What Will Happen If Darshan Went To Parappana Agrahara

ಗಂಭೀರ ಆರೋಪ ಎದುರಿಸುತ್ತಿರುವ ನಟ ದರ್ಶನ್ ಇದೀಗ ಕೋರ್ಟ್ ಎದುರು ಹಾಜರಾಗಿ, ಇನ್ನೇನು 'ಪರಪ್ಪನ ಅಗ್ರಹಾರ' ಜೈಲಿಗೆ ಹೋಗುತ್ತಾನಾ? ಅಥವಾ ಮತ್ತೆ ಪೊಲೀಸ್ ಕಸ್ಟಡಿಗೆ ಹೋಗ್ತಾನಾ? ಅನ್ನೋದು ಗೊತ್ತಾಗಲಿದೆ. ಹೀಗಿದ್ದಾಗಲೇ ಮತ್ತೊಂದು ಭರ್ಜರಿ ಚರ್ಚೆ ಶುರು ಆಗಿದ್ದು, ದರ್ಶನ್ ಮುಂದಿನ ಸಿನಿಮಾದ ಹೆಸರು ಏನಾಗಿರಬಹದು? ಅನ್ನೋ ಚರ್ಚೆ ಇದೀಗ ನಡೆಯುತ್ತಿದೆ. ಹಾಗಾದ್ರೆ ದರ್ಶನ್ ಮುಂದಿನ ಸಿನಿಮಾ ಹೆಸರು ಏನು? ಮುಂದೆ ಓದಿ.

ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?

ಹೌದು, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ, ನಟ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ಕೆಲವರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಕೂಡ ನಡೆಯುತ್ತಿದೆ.

118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?

ದರ್ಶನ್ & ಗ್ಯಾಂಗ್ ವಿರುದ್ಧ ಕೇಳಿಬಂದ ಕೊಲೆ ಆರೋಪ ಹಿನ್ನೆಲೆ ಕರ್ನಾಟಕ ಪೊಲೀಸರು ಈಗ ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕನ್ನಡ ನಾಡಿನ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು ಯಾವುದೇ ರೀತಿ ಒತ್ತಡಗಳಿಗೂ ಮಣಿಯಬೇಡಿ ಎಂದಿದ್ದಾರೆ. ಹೀಗೆ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+