‘ಫ್ರೆಂಡ್ಸ್‌’ ನಟ ಇನ್ನಿಲ್ಲ, ಕಣ್ಣೀರು ಹಾಕಿದ ಅಭಿಮಾನಿಗಳು & ಗಣ್ಯರು

ಜಗತ್ತಲ್ಲಿ ಸಿನಿಮಾ ನಟರಿಗೆ ಹುಟ್ಟಿಕೊಳ್ಳುವಷ್ಟು ಅಭಿಮಾನಿಗಳು ಯಾರಿಗೂ ಇರುವುದಿಲ್ಲ. ಅದ್ರಲ್ಲೂ ಜನಪ್ರಿಯ ಸಿನಿಮಾದ, ಜನಪ್ರಿಯ ಪಾತ್ರಗಳನ್ನು ನಿರ್ವಹಿಸಿದ ನಟರಿಗೆ ರಾತ್ರೋ ರಾತ್ರಿ ಕೋಟಿ ಕೋಟಿ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಹೀಗೆ ಒಬ್ಬ ನಟ ಇಡಿ ಜಗತ್ತು ಗೆಲ್ಲಲು ಒಂದೇ ಒಂದು ಸಕ್ಸಸ್ ಸಾಕು. ಇಂತಿಪ್ಪ 'ಫ್ರೆಂಡ್ಸ್‌' ನಟ ಹಾಗೂ ಕೋಟ್ಯಂತರ ಫ್ಯಾನ್ಸ್‌ಗೆ ಫೇವರಿಟ್ ಆಗಿದ್ದ ವ್ಯಕ್ತಿ ಇಂದು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ.

ಹೌದು, ಅಮೆರಿಕದ ಜನಪ್ರಿಯ ಟಿವಿ ಕಾರ್ಯಕ್ರಮ 'ಫ್ರೆಂಡ್ಸ್‌' ಮೂಲಕ ಮಿಂಚಿದ್ದ ನಟನಿಗೆ ಇಂದು ಅಕಾಲಿಕ ಸಾವು ಬಂದು ಎರಗಿದೆ. ಫ್ರೆಂಡ್ಸ್‌ ಟಿವಿ ಶೋನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ಮ್ಯಾಥ್ಯೂ ಪೆರ್ರಿ ಇಂದು ಸಾವಿಗೀಡಾಗಿದ್ದು, ಮ್ಯಾಥ್ಯೂ ಪೆರ್ರಿ ತಮ್ಮ ಮನೆಯಲ್ಲಿ ಹಾಟ್‌ ಟಬ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಹೀಗೆ, ಪೆರ್ರಿ ಅವರನ್ನು ಬದುಕಿಸಲು ಯತ್ನಿಸಿದರೂ ಫಲ ನೀಡಲಿಲ್ಲ ಎಂದು ತಿಳಿದುಬಂದಿದೆ. ಮತ್ತೊಂದು ಕಡೆ ಈ ಸುದ್ದಿ ಜಗತ್ತಿನ ಮೂಲೆ ಮೂಲೆಯಲ್ಲೂ ಸಂಚಲನ ಸೃಷ್ಟಿಸಿದೆ.

This Is How The World Is Reacted About The Matthew Perry

ಸಾವಿಗೆ ಕಾರಣ ಏನು?

ಮ್ಯಾಥ್ಯೂ ಪೆರ್ರಿ ಸಾವಿನ ಬಗ್ಗೆ ಹಲವು ಅನುಮಾನವು ಮೂಡಿದ್ದರೂ, ಹಾಟ್ ಟಬ್‌ನಲ್ಲೇ ಅವರು ಮುಳುಗಿ ಕೊನೆಯುಸಿರು ಎಳೆದಿರಬಹುದು ಎಂಬ ಡೌಟ್ ಕಾಡುತ್ತಿದೆ. ತನಿಖೆಯ ನಂತರವೇ ಸತ್ಯ ಹೊರಬೀಳಲಿದೆ, ಹೀಗಾಗಿ ತನಿಖೆ ಪೂರ್ಣವಾಗುವ ತನಕ ಕಾಯಬೇಕಿದೆ. ಆದರೆ ಹೀಗೆ ತಮ್ಮ ನೆಚ್ಚಿನ ನಟ ಅಸುನೀಗಿರುವ ಹೊತ್ತಲ್ಲೇ, ಅಭಿಮಾನಿಗಳು ಮ್ಯಾಥ್ಯೂ ಪೆರ್ರಿ ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ್ದ ಇನ್‌ಸ್ಟಾಗ್ರಾಂ ಪೋಸ್ಟ್ ಬಗ್ಗೆ ಭಾವುಕರಾಗಿ ಚರ್ಚೆ ಮಾಡುತ್ತಿದ್ದಾರೆ.

ಮ್ಯಾಥ್ಯೂ ಪೆರ್ರಿ ಫೇಮಸ್ ಆಗಿದ್ದೇಗೆ?

ಅಷ್ಟಕ್ಕೂ ಡೇವಿಡ್ ಕ್ರೇನ್ ಮತ್ತು ಮಾರ್ಟಾ ಕೌಫ್‌ಮನ್‌ ಸಾರಥ್ಯದಲ್ಲಿ ಮೂಡಿಬಂದ ಫ್ರೆಂಡ್ಸ್‌ ಟೆಲಿವಿಶನ್ ಶೋ ಮೂಲಕ ಎಲ್ಲೋ ಇದ್ದ ಮ್ಯಾಥ್ಯೂ ಪೆರ್ರಿ, ಇನ್ನೆಲ್ಲಿಗೋ ಹೋಗಿಬಿಟ್ರು. 1994ರಲ್ಲಿ ಪ್ರಾರಂಭವಾಗಿ 2004ರಲ್ಲಿ ಕೊನೆಗೊಂಡಿತ್ತು ಈ ಶೋ. 10 ಸೀಸನ್‌ ಹಾಗೂ 236 ಎಪಿಸೋಡ್‌ನಲ್ಲಿ ಈ ಕಾರ್ಯಕ್ರಮವು ಪ್ರಸಾರವಾಗಿತ್ತು. ಇಷ್ಟೇ ಆಗಿದ್ದರೆ ಮ್ಯಾಥ್ಯೂ ಪೆರ್ರಿಗೆ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಳ್ಳುತ್ತಿತ್ತೋ, ಇಲ್ಲವೋ ಗೊತ್ತಿಲ್ಲ. ಆದ್ರೆ ಇಡೀ ಟಿವಿ ಇತಿಹಾಸದಲ್ಲಿಯೇ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಈ ಶೋ ಪಾತ್ರವಾಗಿತ್ತು.

ಒಟ್ನಲ್ಲಿ ಮ್ಯಾಥ್ಯೂ ಪೆರ್ರಿ ಈಗ, ಕೋಟ್ಯಂತರ ಫ್ಯಾನ್ಸ್‌ನ ಜಗತ್ತಿನ ಮೂಲೆ ಮೂಲೆಯಲ್ಲೂ ಒಬ್ಬಂಟಿ ಮಾಡಿ ಹೋಗಿದ್ದಾರೆ. ಹಾಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋಗೆ ಈ ಮ್ಯಾಥ್ಯೂ ಪೆರ್ರಿ ಅತ್ಯಂತ ಆಪ್ತ ಗೆಳೆಯರಾಗಿದ್ರು. ಹೀಗಾಗಿ ಜಸ್ಟಿನ್‌ ಟ್ರುಡೊ ಕೂಡ ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ. ಇದೆಲ್ಲಾ ಏನೇ ಇರಲಿ, ಮ್ಯಾಥ್ಯೂ ಪೆರ್ರಿ ಆತ್ಮಕ್ಕೆ ಶಾಂತಿ ಸಿಗಲಿ. ಹಾಗೇ ಮ್ಯಾಥ್ಯೂ ಪೆರ್ರಿ ಮತ್ತೊಮ್ಮೆ ಹುಟ್ಟಿಬರಲಿ ಅದು ಕಲಾವಿದನಾಗಿ ಎಂಬುದೇ ಅವರ ಅಭಿಮಾನಿ ಬಳಗದ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+