Darshan-Sudeep: Bossism ಕಾಲ ಮುಗೀತು. Maximum Mass ಕಾಲ ಶುರುವಾಯ್ತು: ದಚ್ಚು-ಕಿಚ್ಚನ ನಡುವೆ ಕಿಚ್ಚು ಹಚ್ಚಿದ ಕೇಕ್

ಬೆಂಗಳೂರು,ಡಿಸೆಂಬರ್‌ 26: ನಟ ಕಿಚ್ಚ ಸುದೀಪ್​ ಅಭಿನಯದ ಮ್ಯಾಕ್ಸ್​ ಚಿತ್ರ ಬಿಡುಗಡೆಗೊಂಡಿದೆ. ತೆರೆಗೆ ಬಂದ ಮ್ಯಾಕ್ಸ್ ಕನ್ನಡಿಗರಿಗೆ ಮ್ಯಾಕ್ಸಿಮಮ್ ಮನರಂಜನೆಯನ್ನು ನೀಡುತ್ತಿದ್ದು, ಬಾಕ್ಸಾಫೀಸ್‌ನಲ್ಲಿ ಮ್ಯಾಕ್ಸಿಮಮ್ ಸದ್ದು ಮಾಡುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ 930 ಸ್ಕ್ರೀನ್‌ಗಳಲ್ಲಿ ತೆರೆಗೆ ಬಂದ ಮ್ಯಾಕ್ಸ್ ಮೊದಲ ದಿನ ಹತ್ ಹತ್ರ 09 ಕೋಟಿ ಹಣವನ್ನು ದೋಚಿದೆ. ಆ ಪೈಕಿ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿಯೇ ಮೊದಲ ದಿನವೇ ಹನ್ನೆರಡು ಲಕ್ಷವನ್ನು ಮ್ಯಾಕ್ಸ್ ದೋಚಿದೆ

ಮ್ಯಾಕ್ಸ್ ಚಿತ್ರ ವಿಮರ್ಶಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮೊದಲ ದಿನವೇ ಭರ್ಜರಿ ಹಣವನ್ನ ದೋಚಿರುವ ಮ್ಯಾಕ್ಸ್ ಚಿತ್ರ ದಾಖಲೆ ಮಾಡಿದೆ. ಮ್ಯಾಕ್ಸ್‌ ಚಿತ್ರದ ಅಬ್ಬರದ ನಡುವೆ ನಟ ಕಿಚ್ಚ ಸುದೀಪ್‌ ಹಾಗೂ ನಟ ಫ್ಯಾನ್ಸ್​ ನಡುವೆ ಕೇಕ್​ ವಾರ್​ ಶುರುವಾಗಿದೆ.

The Writing On The Cake That Sparked A Firestorm Among Darshan Fans

ಮೊದಲ ದಿನವೇ ಮ್ಯಾಕ್ಸ್ ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಂಡಿದ್ದು, ಕಿಚ್ಚ ಸುದೀಪ್ ಅವರು ಪತ್ನಿ ಪ್ರಿಯಾ ಜೊತೆ 'ಮ್ಯಾಕ್ಸ್' ಸಕ್ಸಸ್ ಸೆಲೆಬ್ರೇಟ್ ಮಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಸುದೀಪ್ ಆಪ್ತ ಪ್ರದೀಪ್ ಸೇರಿದಂತೆ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಸುದೀಪ್ ಕಟ್ ಮಾಡಿದ ಕೇಕ್ ಮೇಲೆ ಬರೆದಿರುವ ಬರಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಪತ್ನಿ ಪ್ರಿಯಾ ಜೊತೆ ಸುದೀಪ್ 'ಮ್ಯಾಕ್ಸ್' ಸಕ್ಸಸ್ ಸೆಲೆಬ್ರೇಟ್ ಮಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಸುದೀಪ್ ಆಪ್ತ ಪ್ರದೀಪ್ ಸೇರಿದಂತೆ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಸುದೀಪ್ ಕಟ್ ಮಾಡಿದ ಕೇಕ್ ಮೇಲೆ ಬರೆದಿರುವ ಬರಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.

'ಮ್ಯಾಕ್ಸ್' ಸಕ್ಸಸ್ ಸೆಲೆಬ್ರೇಟ್ ಮಾಡುವಾಗ ಸುದೀಪ್‌ ಕಟ್‌ ಮಾಡಿದ ಕೇಕ್ ಮೇಲೆ ಬರೆದಿರುವ ಬರವನ್ನ ಮುಖ್ಯವಾಗಿ ದರ್ಶನ್ ಅಭಿಮಾನಿಗಳು ಈ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ಇಬ್ಬರು ನಟರ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. " ನಟ ಪ್ರದೀಪ್ Bossism ಕಾಲ ಮುಗೀತು. Maximum Mass ಕಾಲ ಶುರುವಾಯ್ತು" ಎಂದು ಬರೆದಿರುವ ಕೇಕ್ ತಂದು ಸುದೀಪ್ ಅವರಿಂದ ಕಟ್ ಮಾಡಿಸಿದ್ದಾರೆ. ಆದರೆ ಇದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪರೋಕ್ಷವಾಗಿ ನಮ್ಮ ನೆಚ್ಚಿನ ನಟ ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಇಂತಾದೊಂದು ಬರಹ ಬರೆಸಿದ್ದಾರೆ ಎಂದು ಕೆಲ ಅಭಿಮಾನಿಗಳು ಗರಂ ಆಗಿದ್ದಾರೆ.

ನಟ ಪ್ರದೀಪ್‌ ಹೇಳಿದ್ದೇನು?

ಮೊದಲಿಗೆ ಕ್ರಿಸ್‌ ಮಸ್‌ ಹಬ್ಬಕ್ಕೆ ಶುಭಕೋರಿರುವ ನಟ ಪ್ರದೀಪ್‌ ಅವರು, ಕ್ರಿಸ್‌ ಮಸ್‌ ಹಬ್ಬದಂದು ಕಿಚ್ಚ ಸುದೀಪ್‌ ಅವರ ಮ್ಯಾಕ್ಸ್‌ ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂದು ತಿಳಿಸಿದ್ದಾರೆ. ಮ್ಯಾಕ್ಸ್‌ ಚಿತ್ರದ ಸೆಲೆಬ್ರೆಶನ್‌ ಗಾಗಿ ಒಂದು ಕೇಕ್‌ ತೆಗೆದುಕೊಂಡು ಹೋಗಿದ್ದೆ, ಆ ಕೇಕ್‌ ಮೇಲೆ ಬರೆದ ಬರಹ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಕೇಕ್‌ ಮೇಲೆ ಬರ್ದಿದ್ದು, ಯಾವ ನಟನೆಗೂ ಸಹ ನಾನು ಹೋಲಿಕೆ ಮಾಡಿ ಬರೆದ ಬರಹ ಅಲ್ಲ, ಮ್ಯಾಕ್ಸ್‌ ಚಿತ್ರದಲ್ಲಿ ಬರುವ ಡೈಲಗ್‌ ಅನ್ನು ನಾನು ಅಲ್ಲಿ ಬರೆಸಿದ್ದು, ಪ್ರತಿಯೊಬ್ಬ ನಾಯಕ ನಟನಿಗೂ ಅಪಾರ ಅಭಿಮಾನಿಗಳು ಇರುತ್ತಾರೆ. ನಮ್ಮ ಇಷ್ಟದ ನಟನಿಗೆ ಪ್ರತಿಯೊಬ್ಬ ಅಭಿಮಾನಿಯೂ ತಮಗೆ ಇಷ್ಟ ಬಂದ ರೀತಿ ಕರೆಯುತ್ತಾರೆ ಎಂದು ನಟ ಪ್ರದೀಪ್‌ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+