ಸುಧಾರಾಣಿ ಮೇಡಂ ಈ ಸೀರಿಯಲ್ ಬಿಟ್ಬಿಡಿ ಪ್ಲೀಸ್ ಅಂತಿರೋದೇಕೆ ಪ್ರೇಕ್ಷಕರು
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟಿ ಎಂದೇ ಖ್ಯಾತಿ ಗಳಿಸಿರುವ ಹಾಗೂ ಹಲವು ಹಿಟ್ ಮೂವಿಗಳನ್ನು ನೀಡಿರುವ ಸುಧಾರಾಣಿ ಅವರು ಇದೀಗ ಕಿರುತೆರೆಯಲ್ಲೂ ಅಭಿನಯಿಸುತ್ತಿದ್ದಾರೆ. ಕನ್ನಡದ ಪ್ರಮುಖ ಚಾನೆಲ್‌ವೊಂದರ ಧಾರಾವಾಹಿಯಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಸಿನಿಮಾದಂತೆ ಸೀರಿಯಲ್‌ನಲ್ಲೂ ಸುಧಾರಾಣಿ ಅವರದ್ದು ಅದ್ಭುತ ನಟನೆ. ತಾಯಿ ಪಾತ್ರದಲ್ಲಿ ಈ ಸೀರಿಯಲ್‌ನಲ್ಲಿ ಅವರು ಮಿಂಚುತ್ತಿದ್ದಾರೆ. ಆದರೆ, ಆ ಸೀರಿಯಲ್‌ನಲ್ಲಿ ಬದಲಾಗುತ್ತಿರುವ ಪಾತ್ರದ ಸನ್ನಿವೇಶಕ್ಕೆ ಕನ್ನಡದ ಪ್ರೇಕ್ಷಕರು ತೀವ್ರ ಅಸಮಾಧಾನ ತೋರಿದ್ದು, ಸುಧಾರಾಣಿ ಮೇಡಂ ಈ ಸೀರಿಯಲ್ ಮಾಡೋದು ಬಿಟ್ಬಿಡಿ ಅಂತಿದ್ದಾರೆ.
ಸಾಮಾನ್ಯವಾಗಿ ಕೆಲವು ಸೀರಿಯಲ್‌ಗಳಲ್ಲಿ ಕೆಲವು ಸನ್ನಿವೇಶವನ್ನು ವೈಭವೀಕರಿಸುವುದು, ಅತಿಶಯೋಕ್ತಿ ಎನ್ನುವಂತೆ ತೋರಿಸುವುದು ಇದೆ. ಆದರೆ, ಸುಧಾರಾಣಿ ಅವರು ಅಭಿನಯಿಸುತ್ತಿರುವ ಸೀರಿಯಲ್‌ನಲ್ಲಿ ಸುಧಾರಾಣಿ ಅವರು ಅಭಿನಯಿಸುತ್ತಿರುವ ಪಾತ್ರಧಾರಿ ಪ್ರೆಗ್ನೆಂಟ್ ಆಗಿದ್ದಾರೆ ಎಂದು ತೋರಿಸಲಾಗಿದೆ. ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸೀರಿಯಲ್‌ನಲ್ಲಿ ಸುಧಾರಾಣಿ ಅವರಿಗೆ ಪ್ರಮುಖ ಪಾತ್ರ ನೀಡಲಾಗಿದೆ. ಹಿರಿಯ ವಯಸ್ಸಿನ ಈ ಪಾತ್ರದಲ್ಲಿ ನಿರ್ದೇಶಕರು ಈ ರೀತಿಯ ಪ್ರಯೋಗವನ್ನು ಮಾಡಬಾರದಿತ್ತು. ಈ ಸೀರಿಯಲ್ ನೋಡಲು ಚೆನ್ನಾಗಿತ್ತು. ಈ ರೀತಿಯ ತಿರುವು ಈ ಸೀರಿಯಲ್‌ಗೆ ಬೇಕಾಗಿರಲಿಲ್ಲ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸತೀಶ್ ಎನ್ನುವವರು ಒಂದೊಳ್ಳೆ ರೀತಿಯಲ್ಲಿ ಸಾಗುತ್ತಿದ್ದ ಈ ಸೀರಿಯಲ್ ಅನ್ನು ಈ ಮಟ್ಟಿಗೆ ಕುಲಗೆಡಿಸಿದ್ದಿರಾ.. ಎರಡನೇ ಮದುವೆಯನ್ನು ಒಪ್ಪುವ. ಆದರೆ, ಮಕ್ಕಳಿಗೆ ಮಕ್ಕಳಾಗುವ ಮೊದಲು ಇವರಿಗೆ ಮಕ್ಕಳು ಅಂದ್ರೆ ಏನರ್ಥ ಎಂದು ಪ್ರಶ್ನೆ ಮಾಡಿದ್ದಾರೆ.
ಮೊಮ್ಮಕ್ಕಳ ಜೊತೆ ಆಟ ಆಡುವ ವಯಸ್ಸಿನಲ್ಲಿ ಮೂರು ತಿಂಗಳಂತೆ ಯಾರು ಈ ರೀತಿಯ ಸೀರಿಯಲ್ ನೋಡಬೇಕು ಎಂದು ಜನ ಪ್ರಶ್ನೆ ಮಾಡಿದ್ದಾರೆ.
ದಾರಿ ತಪ್ಪಿದ ಸೀರಿಯಲ್
ಪ್ರಮುಖ ಚಾನೆಲ್‌ವೊಂದರಲ್ಲಿ ಈ ಸೀರಿಯಲ್ ಬರುತ್ತಿದೆ. ಆದರೆ, ಈ ಸೀರಿಯಲ್ ಈ ಹಿಂದೆ ತುಂಬಾ ಚೆನ್ನಾಗಿ ಇತ್ತು. ಈಗ ಸೀರಿಯಲ್ ತನ್ನ ಒರಿಜಿನಾಲಿಟಿ ಕಳೆದುಕೊಳ್ಳುತ್ತಿದೆ ಎಂದು ಜನ ದೂರಿದ್ದಾರೆ. ಸುಧಾರಾಣಿ ಅವರು ಈ ರೀತಿಯ ಟರ್ನಿಂಗ್‌ಗೆ ಹೇಗೆ ಒಪ್ಪಿಕೊಂಡರು ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಮನೆ ಮಂದಿ ಕುಳಿತು ಈ ಸೀರಿಯಲ್ ಅನ್ನು ನೋಡಲು ಸಾಧ್ಯವಾಗುತ್ತಿಲ್ಲ, ನಮಗೆಲ್ಲ ಮುಜುಗರವಾಗುತ್ತಿದೆ ಎಂದು ಪ್ರೇಕ್ಷಕರು ಅಸಹನೆ ಹೊರಹಾಕಿದ್ದಾರೆ. ಎಂತಹ ಸೀರಿಯಲ್ ಇದು. ಮಕ್ಕಳಿಗೆ ಮಗು ಆಗಲಿಲ್ಲ. ಈಗ ಈ ರೀತಿಯ ತಿರುವು. ಅವರ ವಯಸ್ಸಿಗಾದರೂ ಮರ್ಯಾದೆ ಬೇಡವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಈ ಸೀರಿಯಲ್ ಈಗ ಟ್ರೋಲ್ ಸಹ ಆಗುತ್ತಿದೆ.

ಸುಧಾರಾಣಿ ಮೇಡಂ ಈ ಸೀರಿಯಲ್ ಬೇಡ
ಸುಧಾರಾಣಿ ಮೇಡಂ ಅವರೇ ಈ ರೀತಿಯ ಪಾತ್ರ ನಿಮಗೆ ಹೊಂದಾಣಿಕೆಯಾಗುವುದಿಲ್ಲ. ದಯವಿಟ್ಟು ಈ ಸೀರಿಯಲ್‌ನಿಂದ ಹೊರಗೆ ಬನ್ನಿ ಎಂದು ಅವರ ಕೆಲವು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಈ ರೀತಿಯ ತಿರುವು ಈ ಸೀರಿಯಲ್‌ಗೆ ಈಗ ಅವಶ್ಯವಿರಲಿಲ್ಲ. ನೀವು ಹೇಗೆ ಈ ರೀತಿಯ ಕೆಟ್ಟ ಟರ್ನಿಂಗ್‌ಗೆ ಒಪ್ಪಿಕೊಂಡಿರಿ ಎಂದೂ ಕೇಳುತ್ತಿದ್ದಾರೆ. ಇನ್ನೊಂದು ರೀತಿಯಲ್ಲೂ ಸೀರಿಯಲ್‌ನ ಬಗ್ಗೆ ಚರ್ಚೆ ನಡೆದಿದೆ. ಇದರಲ್ಲಿ ತಪ್ಪೇನು ಇಲ್ಲ. ಇಬ್ಬರು ದಂಪತಿಗಳ ದಾಂಪತ್ಯ ಜೀವನ ಎಂದ ಮೇಲೆ ಅದರಲ್ಲಿ ಅಸಹ್ಯ ಎನ್ನುವಂತದ್ದು ಏನು ಇಲ್ಲ ಎಂದೂ ಸಹ ಕೆಲವರು ಸಮರ್ಥನೆ ಮಾಡಿಕೊಂಡಿದ್ದಾರೆ.












Click it and Unblock the Notifications