Actor Sudeep: ನಮ್ಮ ತಾಳ್ಮೆಗೂ ಮಿತಿ ಇದೆ! ಸಿಟ್ಟಿಗೆದ್ದ ಸುದೀಪ್ ಅಭಿಮಾನಿಗಳು

ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಪಡೆದಿರುವುದು ಸ್ಯಾಂಡಲ್‌ವುಡ್‌ಗೆ ಸದ್ಯ ಮರುಜೀವ ಬಂದಂತಾಗಿದೆ. ಸದ್ಯ ಭೈರತಿ ರಣಗಲ್ ಕೂಡ ಬಿಡುಗಡೆಗೆ ಸಜ್ಜಾಗಿದ್ದು ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಮತ್ತೊಂದು ಕಡೆ ದರ್ಶನ್ ತೂಗುದೀಪ್‌ರ ನವಗ್ರಹ ಮರುಬಿಡುಗಡೆಯಾಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಸುದೀಪ್ ಅಭಿಮಾನಿಗಳು ಮಾತ್ರ ನಿರಾಸೆಗೊಂಡಿದ್ದು, ಇದೀಗ ಕೋಪಗೊಂಡಿದ್ದಾರೆ.

ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮ್ಯಾಕ್ಸ್‌' ಟೀಸರ್ ಬಿಡುಗಡೆಯಾಗಿದ್ದು, ಒಂದು ಹಾಡನ್ನು ಕೂಡ ರಿಲೀಸ್ ಮಾಡಲಾಗಿದೆ. ದಸರಾ, ದೀಪಾವಳಿ ವೇಳೆಗೆ ಸಿನಿಮಾ ತೆರೆಗೆ ಬರಬಹುದು ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ದಸರಾ, ದೀಪಾವಳಿ ಎಲ್ಲಾ ಮುಗಿದು ಇದೀಗ 2024 ಕೂಡ ಮುಗಿಯುತ್ತಿದ್ದು, ಸಿನಿಮಾ ಬಿಡುಗಡೆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

Sudeep fans angry on Max Movie producer for this reason

ನಟ ಸುದೀಪ್ ಆಗಲಿ, ನಿರ್ಮಾಕಪರಾಗಲಿ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಕೊಡದೇ ಇರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಹಲವು ಕಾರಣಗಳಿಂದ ಮ್ಯಾಕ್ಸ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟದ ಹಿಟ್‌ ಸಿನಿಮಾ ಆಗಬಹುದು ಎಂದು ಕೂಡ ನಿರೀಕ್ಷೆ ಮಾಡಲಾಗಿತ್ತು, ಆದರೆ ಸಿನಿಮಾ ಬಿಡುಗಡೆಯ ಬಗ್ಗೆಯೇ ಯಾವುದೇ ಮಾಹಿತಿ ಇಲ್ಲದೇ ಇರುವುದು ಸಾಕಷ್ಟು ಅನುಮಾನಗಳಿಗೆ ಕೂಡ ಕಾರಣವಾಗಿದೆ.

ಮ್ಯಾಕ್ಸ್ ಬಿಡುಗಡೆ ಯಾವಾಗ?

ಸುದೀಪ್ ಅಭಿಮಾನಿಗಳು ಈಗ ಕೇಳುತ್ತಿರುವ ಒಂದೇ ಪ್ರಶ್ನೆ ಮ್ಯಾಕ್ಸ್ ಬಿಡುಗಡೆ ಯಾವಾಗ ಎಂದು. ಕನ್ನಡ ಚಿತ್ರರಂಗ ಈಗಾಗಲೇ ಪುನೀತ್ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ದರ್ಶನ್‌ ಕೂಡ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದು, ಚಿಕಿತ್ಸೆ ಪಡೆಯಲು ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದ್ದದ್ದು, ಪುನೀತ್, ದರ್ಶನ್ ಮತ್ತು ಸುದೀಪ್‌ರ ಸಿನಿಮಾಗಳು. ದರ್ಶನ್‌ ಇನ್ನು ಸಿನಿಮಾ ಯಾವಾಗ ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ, ಸುದೀಪ್‌ ಮಾಡಿರುವ ಸಿನಿಮಾ ಬಿಡುಗಡೆಯಾಗುತ್ತಿಲ್ಲ, ಜೊತೆಗೆ ಪರಭಾಷಾ ಸಿನಿಮಾಗಳ ಹಾವಳಿ ಹೆಚ್ಚುತ್ತಿದ್ದು ಕನ್ನಡ ಸಿನಿಮಾ ಅಭಿಮಾನಿಗಳು ಉತ್ತಮ ಸಿನಿಮಾಗೆ ಕಾಯುತ್ತಿದ್ದಾರೆ.

ಎಕ್ಸ್‌ನಲ್ಲಿ ಸುದೀಪ್ ಅಭಿಮಾನಿಗಳು ನಿರ್ಮಾಪಕರನ್ನು ಟ್ಯಾಗ್ ಮಾಡುತ್ತಿದ್ದು ಮ್ಯಾಕ್ಸ್ ಸಿನಿಮಾ ಬಿಡುಗಡೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಂದು (ಶನಿವಾರ) ಬಿಗ್ ಬಾಸ್ ವೇದಿಕೆಯಲ್ಲಿ ಮ್ಯಾಕ್ಸ್ ಸಿನಿಮಾ ಬಗ್ಗೆ ದೊಡ್ಡ ಅಪ್‌ಡೇಟ್ ಸಿಗಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+