Puneeth Rajkumar: ಅಪ್ಪು ಫ್ಯಾನ್ಸ್‌ಗೆ ಡಬಲ್ ಸರ್‌ಪ್ರೈಸ್, ಪತ್ನಿ ಅಶ್ವಿನಿ ಮಹತ್ವದ ನಿರ್ಧಾರ
ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಅದ್ಧೂರಿಯಾಗಿ ನೆರವೇರಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಪೂಜಿಸಿ ದೇವರಂತೆ ಆರಾಧಿಸಿದ್ದಾರೆ. ಜೊತೆಗಿರದ ಜೀವ ಎಂದೆಂದಿಗೂ ಜೀವಂತ, ನಗುವಿನ ಒಡೆಯ ಎಂದೆಲ್ಲ ಘೋಷಣೆಗಳನ್ನು ಕೂಗಿ ಸ್ಮರಿಸಿದ್ದಾರೆ. ಆದರೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಸಂಭ್ರಮದ ಹೊತ್ತಿನಲ್ಲೇ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ಅಭಿಮಾನಿಗಳಿಗಾಗಿ ಮಹತ್ವದ ಹೆಜ್ಜೆ ಇಟ್ಟಿರುವ ಅಶ್ವಿನಿ ಅವರು ಪುನೀತ್ ಅವರು ಸದಾ ನೆನಪಲ್ಲೇ ಇರುವಂತಹ ಕೆಲಸಕ್ಕೆ ಕೈಹಾಕಿದ್ದಾರೆ. ಅದೇನು ಅನ್ನೋದನ್ನ ಅವರೇ ಹೇಳಿದ್ದಾರೆ ಮುಂದೆ ಓದಿ..
ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರು ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ. ಇದು ಭಾರತದ ಇತಿಹಾಸದಲ್ಲೇ ಮೊದಲ ಪ್ರಯತ್ನ ಎಂದೂ ಕುತೂಹಲ ಮೂಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸದಾ ನಾವು ನೀವೆಲ್ಲರೂ ಇರಬೇಕು ಎನ್ನುವ ಉದ್ದೇಶದೊಂದಿಗೆ ಈ ಮಹತ್ತರ ಕಾರ್ಯಕ್ಕೆ ಕೈಹಾಕಿರುವುದಾಗಿ ಅವರು ತಿಳಿಸಿದ್ದಾರೆ. ಇಷ್ಟಕ್ಕೂ ಏನು ಸರ್‌ಪ್ರೈಸ್ ಅಂತೀರಾ?

ಭಾರತದಲ್ಲೇ ಪ್ರಪ್ರಥಮ ಬಾರಿಗೆ ಅಭಿಮಾನಿಗಳಿಗಾಗಿ ಒಂದು ಆಪ್ ಸಿದ್ಧಪಡಿಸಲಾಗುತ್ತಿದೆ. ಇದರ ಹೆಸರು ಪಿಆರ್‌ಕೆ ಸ್ಟಾರ್ ಫ್ಯಾನ್‌ಡಮ್ ಆಪ್ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದಾರೆ. ಇದು ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ. ಒಂದು ಅಧಿಕೃತ ಅಪ್ಲಿಕೇಶನ್‌ನೊಂದಿಗೆ ಮತ್ತೆ ನಾವೆಲ್ಲ ಡಾ.ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕನೆಕ್ಟ್ ಆಗೋಣ. ನಾವೆಲ್ಲರೂ ಒಟ್ಟಾಗಿ ಮತ್ತೆ ಸಂಭ್ರಮಿಸುವ, ಸುಮಧುರ ನೆನಪುಗಳನ್ನು ಸವಿಯುವ ಹಾಗೂ ಅಪ್ಪುವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸ್ಥಳವೇ ಈ ಪಿ.ಆರ್.ಕೆ. ಆ್ಯಪ್ ಎಂದು ರಿವೀಲ್ ಮಾಡಿದ್ದಾರೆ.
ಅಶ್ವಿನಿ ಅವರು ಹೇಳಿದ್ದೇನು?:
ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ನಮ್ಮ ಮೇಲಿಟ್ಟಿರುವ ನಂಬಿಕೆ, ಪ್ರೀತಿ, ಗೌರವವೇ ಅಪ್ಪು ಇನ್ನೂ ನಮ್ಮೊಂದಿಗೆ ಇದ್ದಾರೆ ಅನ್ನುವುದಕ್ಕೆ ಸಾಕ್ಷಿ. ನಿಮ್ಮೆಲ್ಲರ ನಗುವಿನಲ್ಲೇ ನಾನೂ ಅಪ್ಪು ಅವರನ್ನು ಕಾಣುತ್ತಿದ್ದೇನೆ. ಪ್ರತಿ ದಿನವೂ ನಮಗೆ ಅಪ್ಪು ಅವರನ್ನು ಸಂಭ್ರಮಿಸುವ ಆಸೆ. ಪ್ರತಿ ಕ್ಷಣವೂ ಅಪ್ಪು ಅವರನ್ನು ನೋಡುವ ಆಸೆ. ನಿಮ್ಮ ನಗುವಿನ ಒಡೆಯನನ್ನು ಮರೆಯಾದರೂ ಮರೆಯಲು ಸಾಧ್ಯವಿಲ್ಲ, ನಿಮಗಾಗಿ ಕಾದಿದೆ ಒಂದು ಗುಡ್‌ನ್ಯೂಸ್. ಇದು ಅಪ್ಪು ಹೆಸರಿನಲ್ಲಿ ಇದೊಂದು ದಿಟ್ಟ ಹೆಜ್ಜೆ. ಪಿಆರ್‌ಕೆ ಸ್ಟಾರ್ ಫ್ಯಾನ್‌ಡಮ್ ಆಪ್ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ. ಅಪ್ಪು ಸದಾ ಜೀವಂತ ಎಂದು ವಿಡಿಯೋದಲ್ಲಿ ಅಶ್ವಿನಿ ಪುನೀತ್ ಹೇಳಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ಮೊಬೈಲ್ ಆಪ್ ಮಾತ್ರವಲ್ಲದೆ ಡಬಲ್ ಧಮಾಕಾ ಸರ್‌ಪ್ರೈಸ್ ಕೂಡ ಇದೆ. ಪುನೀತ್ ರಾಜ್‌ಕುಮಾರ್ ಅವರ ಜೀವನಚರಿತ್ರೆಯ ಪುಸ್ತಕವನ್ನು ಕೂಡ ಶೀಘ್ರದಲ್ಲೇ ಹೊರತರಲಾಗುತ್ತಿದೆ. ಇದಕ್ಕೆ "ಅಪ್ಪು" ಎಂಬ ಶೀರ್ಷಿಕೆ ಇಡಲಾಗಿದೆ. ಶೀಘ್ರದಲ್ಲೇ ಇದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಿಹಿ ವಿಚಾರ ಹಂಚಿಕೊಂಡಿದ್ದಾರೆ.












Click it and Unblock the Notifications