ಕನ್ನಡಿಗ ಯಶ್ + ಶಾರುಖ್ ಖಾನ್ = ಬಾಕ್ಸ್ ಆಫಿಸ್ ಉಡೀಸ್!
ನಟ ಯಶ್ ಅವರು ಯಾವ ಲೆವೆಲ್‌ಗೆ ಇದ್ದಾರೆ ಅಂದ್ರೆ, ಒಂದು ಮಾತು ಹೇಳಿದ್ರೆ ಅದನ್ನ ನಡೆಸಿಕೊಡದೆ ಮುಂದೆ ಹೋಗಲ್ಲ. ಈಗಲೂ ಅಷ್ಟೇ ಅದೇ ರೀತಿ ಹೆಜ್ಜೆ ಇಟ್ಟಿದ್ದಾರೆ. ಅತ್ತ ತಮ್ಮ ಮಾತನ್ನೂ ಉಳಿಸಿಕೊಂಡು, ಇತ್ತ ಕನ್ನಡತನವನ್ನೂ ಬೆಳೆಸಲು ಮುಂದಾಗಿದ್ದಾರೆ. ಅರೆರೆ ಏನಪ್ಪಾ ಅದು ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಸುದ್ದಿ ಅಂದ್ರಾ? ಸಂಪೂರ್ಣ ಮಾಹಿತಿ ತಿಳಿಯೋದಕ್ಕೆ ಮುಂದೆ ಓದಿ.
ರಾಕಿಂಗ್ ಸ್ಟಾರ್ ಯಶ್ ಮತ್ತು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಒಂದೇ ಸಿನಿಮಾ ಸ್ಕ್ರೀನ್ ಶೇರ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಈ ಬಗ್ಗೆ ಸುದ್ದಿಗಳೂ ಓಡಾಡಿ ಸೋಷಿಯಲ್ ಮೀಡಿಯಾದಲ್ಲಿ ಯಶ್ ವಿಷಯ ಟ್ರೆಂಡ್ ಆಗಿದೆ. ಆದರೆ ಅಸಲಿ ಕಹಾನಿಗೆ ನೀವು ಈ ಸ್ಟೋರಿ ಓದಲೇಬೇಕು. ಹಾಗೆಯೆ ನಟ ಯಶ್ & ಬಾಲಿವುಡ್ ಬಾದ್ ಷಾ ಎಂಬ ಬಿರುದು ಪಡೆದಿರುವ ಶಾರುಖ್ ಖಾನ್ ಒಂದಾಗಿ ಸಿನಿಮಾ ಮಾಡಿದರೆ ಎಷ್ಟು ಕೋಟಿ ಹಣ ದುಡಿಯಲಿದೆ ಆ ಸಿನಿಮಾ ಗೊತ್ತೆ? ಬನ್ನಿ ತಿಳಿಯೋಣ.

ಕನ್ನಡಿಗ ಯಶ್ + ಶಾರುಖ್ ಖಾನ್ =...
ಯಶ್ ಅಂದ್ರೆ ಒಂದು ಹವಾ ಇದೆ, ಹಾಗೇ ಯಶ್ ಕನ್ನಡ ಸಿನಿಮಾಗಳಿಗೆ ಹೊಸ ಗತ್ತನ್ನೂ ತಂದುಕೊಡುತ್ತಿದ್ದಾರೆ. ಯಾಕಂದ್ರೆ ಯಶ್ ಕೆಪಾಸಿಟಿ ಹಂಗಿದೆ ಅಂತಾರೆ ಅವರ ಅಭಿಮಾನಿಗಳು ಅದರಲ್ಲೂ ಬಾಲಿವುಡ್ ಬಾದ್ ಷಾ ಅಂತಾ ಬಿರುದು ಪಡೆದಿರುವ ಶಾರುಖ್ ಖಾನ್ ಅವರಿಗೂ, ಯಶ್ ಕಂಡರೆ ತುಂಬಾ ಇಷ್ಟವಂತೆ. ಈ ಕಾರಣಕ್ಕೆ ಶಾರುಖ್, ಯಶ್ ಜೊತೆ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಅದು ಏನೆಂದರೆ ಕನ್ನಡಿಗ ಯಶ್ + ಶಾರುಖ್ ಖಾನ್ = ಬಾಕ್ಸ್ ಆಫಿಸ್ ಉಡೀಸ್! ಅಂತಿದ್ದಾರೆ ಅಭಿಮಾನಿಗಳು.
3000 ಕೋಟಿ ರೂಪಾಯಿ ದುಡಿಯುತ್ತಾ?
ಹೌದು, ಇನ್ನೊಂದಷ್ಟು ಮಾಹಿತಿಗಳ ಪ್ರಕಾರ ಇಬ್ಬರೂ ಪ್ಯಾನ್ ವರ್ಲ್ಡ್ ಹೀರೋಗಳು ಈಗ 'ಟಾಕ್ಸಿಕ್' ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡೋದು ಪಕ್ಕಾ ಎನ್ನಲಾಗುತ್ತಿದೆ. ಹೀಗಾಗಿಯೆ ಬಾಕ್ಸ್ ಆಫಿಸ್ ಈಗಾಗಲೇ ಶೇಕ್ ಆಗಲು ಶುರುವಾಗಿದೆ. ಇನ್ನೇನು ಹೊಸ ಹೊಸ ದಾಖಲೆಗೆ ಯಶ್ ಮತ್ತು ಶಾರುಖ್ ಅವರು ನಾಂದಿ ಹಾಡಲಿದ್ದಾರೆ ಎಂಬ ಮಾತು ಓಡಾಡುತ್ತಿದೆ. ಈ ಮಧ್ಯೆ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನಟ ಶಾರುಖ್ ಖಾನ್ & ಯಶ್ ಅವರು ಸಿನಿಮಾ ಮಾಡಿದರೆ ಬಾಕ್ಸ್ ಆಫಿಸ್ ಕಲೆಕ್ಷನ್ 3000 ಕೋಟಿ ರೂಪಾಯಿಗು ಹೆಚ್ಚಾಗಿರುತ್ತೆ ಅಂತಿದ್ದಾರೆ.

ಹಾಲಿವುಡ್ ಸ್ಟಾರ್ ಆಗ್ತಾರಾ ಯಶ್?
ಯಶ್ ಅಂದ್ರೆ ಕರ್ನಾಟಕ ಮಾತ್ರವಲ್ಲ ಜಗತ್ತಿನಾದ್ಯಂತ ಹವಾ ಇದೆ. ಕನ್ನಡಿಗರ ಕೋಟೆಯಿಂದ ಹೋದ ಈ ಹೀರೋ ಈಗ ಹಾಲಿವುಡ್ ಲೆವೆಲ್‌ಗೆ ಬೆಳೆದು ನಿಂತಿದ್ದಾರೆ. ಈ ಮೂಲಕ ನಟ ಯಶ್ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತಾಗಿದೆ. 'ಕೆಜಿಎಫ್' ಮೂಲಕವೆ 'ಪ್ಯಾನ್ ಇಂಡಿಯಾ' ಸ್ಟಾರ್ ಆಗಿದ್ದ ಯಶ್ ಈಗ 'ಟಾಕ್ಸಿಕ್' ಮೂಲಕ ಹಾಲಿವುಡ್ ಸ್ಟಾರ್ ಆಗೋಕೆ ಸಜ್ಜಾಗಿದ್ದಾರೆ. ಆದರೆ, ಈ ಸಮಯದಲ್ಲಿ ಶಾರುಖ್ ಖಾನ್ ಜತೆಗೂ, ಯಶ್ ಸಿನಿಮಾ ಮಾಡ್ತಾರೆ ಅನ್ನೋದು ಹಲ್‌ಚಲ್ ಎಬ್ಬಿಸಿದೆ. ಹಾಗೇ ಈ ಇಬ್ಬರೂ ನಟರು 'ಟಾಕ್ಸಿಕ್' ಸಿನಿಮಾದಲ್ಲಿ ಒಟ್ಟಾಗಿ ನಟಿಸುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಅಧಿಕೃತ ಘೋಷಣೆ ಬಾಕಿ ಅಂತಿದ್ದಾರ ಫ್ಯಾನ್ಸ್.
ಒಟ್ನಲ್ಲಿ ರಾಕಿಭಾಯ್ ಹವಾ ಜೋರಾಗಿದೆ, ಹಾಗೇ ನಟ ಶಾರುಖ್ ಖಾನ್ ಕೂಡ ಯಶ್‌ಗೆ ಸಾಥ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ಅಭಿಮಾನಿ ಮನ ಮಿಡಿಯುತ್ತಿದೆ, ಒಂದು ಕಡೆ ಶಾರುಖ್ ಅಭಿಮಾನಿಗಳು ಕೂಡ, ಈ ಮಾತಿಗೆ ಫಿದಾ ಆಗಿದ್ದಾರೆ. ಹಾಗೇ ಇನ್ನೊಂದು ಕಡೆ ಯಶ್ ಅವರ ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದು ಸಂಚಲನ ಸೃಷ್ಟಿಯಾಗಿದೆ.












Click it and Unblock the Notifications