ದೇಹದ ಆ ಭಾಗ ಕಾಣುವಂತೆ ಬಟ್ಟೆ ಹಾಕಬೇಕು: ಖ್ಯಾತ ರಿಯಾಲಿಟಿ ಶೋ ಸ್ಪರ್ಧಿ ಗಂಭೀರ ಆರೋಪ
ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಗೆ ದೊಡ್ಡ ವೀಕ್ಷಕ ಬಳಗವೇ ಇದೆ. ಈಗಂತೂ ಹಲವು ರಿಯಾಲಿಟಿ ಶೋಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ ರಿಯಾಲಿಟಿ ಶೋಗಳು ಹೇಗೆ ಕಾರ್ಯನಿರ್ವಹಿಸುತ್ತವೆ? ಹಾಗೂ ಅಲ್ಲಿ ಏನೆಲ್ಲ ನಡೆಯುತ್ತೆ ಎಂಬ ವಿಚಾರಗಳು ಅಷ್ಟಾಗಿ ಪ್ರೇಕ್ಷಕರಿಗೆ ಗೊತ್ತಾಗಲ್ಲ. ಏಕೆಂದರೆ ವೇದಿಕೆ ಮುಂದೆ ನಡೆಯುವುದು ಮಾತ್ರವೇ ಎಲ್ಲರಿಗೂ ತಿಳಿಯುತ್ತೆ. ಇದೀಗ ಖ್ಯಾತ ರಿಯಾಲಿಟಿ ಶೋ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಈ ರಿಯಾಲಿಟಿ ಶೋ ಸ್ಪರ್ಧಿಯೇ ಈ ವಿಚಾರಗಳನ್ನು ರಿವೀಲ್ ಮಾಡಿದ್ದು, ದೊಡ್ಡ ಸಂಚಲನವೇ ಸೃಷ್ಟಿಸಿದೆ.
ತೆಲುಗು ಜನಪ್ರಿಯ ರಿಯಾಲಿಟಿ ಶೋ ಪಾಡುತಾ ತೀಯಗಾ ಹಾಗೂ ಅದರ ತೀರ್ಪುಗಾರರ ಮೇಲೆ ಸ್ಪರ್ಧಿಯೊಬ್ಬರು ಶಾಕಿಂಗ್ ಆರೋಪಗಳನ್ನು ಮಾಡಿದ್ದಾರೆ. ಈ ಸಂಗೀತ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ಖ್ಯಾತ ಸಂಗೀತ ಸಂಯೋಜಕ ಎಂ.ಎಂ.ಕೀರವಾಣಿ, ಹಿನ್ನೆಲೆ ಗಾಯಕಿ ಸುನೀತಾ ಮತ್ತು ಗೀತರಚನೆಕಾರ ಚಂದ್ರಬೋಸ್ ವಿರುದ್ಧ ಇದೇ ಶೋನ ಸ್ಪರ್ಧಿಯಾಗಿರುವ ಗಾಯಕಿ ಪ್ರವಸ್ತಿ ಆರಾಧ್ಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಈ ರಿಯಾಲಿಟಿ ಶೋ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ತೀವ್ರ ಅನ್ಯಾಯ, ಪಕ್ಷಪಾತ ಮತ್ತು ಅವಮಾನವನ್ನು ಎದುರಿಸಿರುವುದಾಗಿ ಪ್ರವಸ್ತಿ ಆರಾಧ್ಯ ವಿಡಿಯೋದಲ್ಲಿ ಹೇಳಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ತೀರ್ಪುಗಾರರು ಪಕ್ಷಪಾತದ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೀರವಾಣಿ ಸಂಯೋಜಿಸಿದ ಹಾಡು ಹಾಡಿದ ಸ್ಪರ್ಧಿಗಳಿಗೆ ಹೆಚ್ಚಿನ ಅಂಕ ನೀಡಲಾಗಿದೆ. ಈ ವಿಧಾನವು ಇತರ ಸ್ಪರ್ಧಿಗಳ ಪ್ರತಿಭೆಗೆ ಮಾರಕ, ಇದು ಅನ್ಯಾಯ ಎಂದು ಟೀಕಿಸಿದ್ದಾರೆ.
ಕಾರ್ಯಕ್ರಮದ ಸೆಟ್‌ನಲ್ಲೂ ನನಗೆ ಭಾರಿ ಅವಮಾನವಾಗಿದೆ. ನಾನು ಜೀವನೋಪಾಯಕ್ಕಾಗಿ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಹಾಡುತ್ತೇನೆ. ಇದೇ ವಿಚಾರವಾಗಿ ನನ್ನನ್ನು ಕೀಳಾಗಿ ಕಾಣುವಂತೆ ಮಾಡಿದ್ದಾರೆ. ತೀರ್ಪುಗಾರರು ನನ್ನ ವೃತ್ತಿಯನ್ನು ಅಪಹಾಸ್ಯ ಮಾಡಿದ್ದಾರೆ, ತನ್ನನ್ನು ಕೀಳಾಗಿ ಕಾಣುವಂತೆ ಮಾಡಿದ್ದಾರೆ ಎಂದು ಪ್ರವಸ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಸೆಟ್‌ನಲ್ಲಿ ತನ್ನನ್ನು ಬಾಡಿ ಶೇಮಿಂಗ್ ಮಾಡ್ತಾರೆ. ನನ್ನ ದೇಹದ ಆಕಾರದ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ರಿಯಾಲಿಟಿ ಶೋ ಪ್ರೊಡಕ್ಷನ್‌ನವರು ಸೊಂಟದವರೆಗೆ ಸೀರೆಯುಟ್ಟು, ಹೊಕ್ಕಳ ಕಾಣಿಸುವಂತೆ ಎಕ್ಸ್‌ಪೋಸ್ ಮಾಡುವಂತೆ ಒತ್ತಾಯಿಸುತ್ತಾರೆ ಎಂದೂ ಗಾಯಕಿ ಪ್ರವಾಸಿ ಗಂಭೀರ ಆರೋಪ ಮಾಡಿದ್ದಾರೆ.

ಈ ಪ್ರೊಡಕ್ಷನ್ ಅತ್ಯಂತ ಕೆಟ್ಟದಾಗಿದೆ. ಅವರು ನಮಗೆ ಡ್ರೆಸ್‌ಗಳನ್ನು ಕೊಟ್ಟು ಸೊಂಟದ ಕೆಳಗೆ ಸೀರೆಯನ್ನು ಉಡಬೇಕು ಎಂದು ಹೇಳುತ್ತಾರೆ. ಇನ್ನು ಕಾಸ್ಟ್ಯೂಮ್ ಡಿಸೈನರ್ "ನಿಮ್ಮ ದೇಹಕ್ಕೆ ಇನ್ನೇನು ಕೊಡಬಹುದು" ಎಂದು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ್ದ. ಅವರ ಮಾತುಗಳಿಂದಾಗಿ ನಾನು ನನ್ನ ಆತ್ಮವಿಶ್ವಾಸ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದಾರೆ.
ಪ್ರವಸ್ತಿ ಆರಾಧ್ಯ ಹಿನ್ನೆಲೆ ಏನು?
ಪ್ರವಸ್ತಿ ಆರಾಧ್ಯ ಒಬ್ಬ ಭಾರತೀಯ ಗಾಯಕಿ. ಅವರು ವಿವಿಧ ತೆಲುಗು ಮತ್ತು ತಮಿಳು ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿದರು, ಬಹು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.












Click it and Unblock the Notifications