‘ಸಿಗರೇಟು ಸೇದಬೇಡ ಅಪ್ಪ’ ಎಂದಿದ್ದ ಹುಡುಗಿ ಈಗ ಹಾಟ್, ಹಾಟ್!
ಯಾವುದೇ ಸಿನಿಮಾ ನೋಡುವ ಮೊದಲು ನಿಮಗೆ ಥಿಯೇಟರ್ ಸ್ಕ್ರೀನ್ ಮೇಲೆ ಗುಟ್ಕಾ & ಸಿಗರೇಟ್ ಬಗ್ಗೆ ಜಾಹೀರಾತು ಬರುತ್ತೆ. ಅದ್ರಲ್ಲೂ 'ಸಿಗರೇಟು ಸೇದಬೇಡಿ' ಎಂಬ ಸಂದೇಶ ಇರುವ ಜಾಹೀರಾತು ತುಂಬಾನೆ ಫೇಮಸ್, 'ಈ ಪಟ್ಟಣಕ್ಕೆ ಏನಾಗಿದೆ?' ಎಂಬ ಜಾಹೀರಾತು ಸಿಕ್ಕಾಪಟ್ಟೆ ಫೇಮಸ್. ಇದೇ ರೀತಿ ಧೂಮಪಾನದ ಬಗ್ಗೆ ಹಳೆಯ ಜಾಹೀರಾತಿನಲ್ಲಿ ನಟನೆ ಮಾಡಿದ್ದ ಪುಟಾಣಿ ಹುಡುಗಿ ಈಗ ಗ್ಲಾಮರ್ ಗೊಂಬೆಯಂತೆ ಆಗಿದ್ದಾಳೆ!
ಹೌದು ಪ್ರತಿ ಸಿನಿಮಾಗಳ ಆರಂಭದಲ್ಲೇ ನೋ ಸ್ಮೋಕಿಂಗ್ ಜಾಹೀರಾತು ಪ್ರದರ್ಶನ ಆಗುವಾಗ ಅಪ್ಪ & ಮಗಳು ಪ್ರತ್ಯಕ್ಷ್ಯರಾಗುತ್ತಾರೆ. ಸಿನಿಮಾ ಮಂದಿರಕ್ಕೆ ಹೋಗಿರುವ ಪ್ರತಿಯೊಬ್ಬರೂ, ಈ ಜಾಹೀರಾತು ನೋಡಿರುತ್ತಾರೆ. ಜಾಹೀರಾತಿನಲ್ಲಿ ತಂದೆ ಮತ್ತು ಮಗಳನ್ನು ಕೇಂದ್ರವಾಗಿಸಿ, ಧೂಮಪಾನ ಮಾಡಬೇಡಿ. ಇದರಿಂದಾಗಿ ನಿಮ್ಮ ಮಕ್ಕಳು & ಹೆಂಡತಿಗೂ ಸಮಸ್ಯೆ ಎಂಬಂತೆ, ಆಡ್ ನೀಡಲಾಗುತ್ತದೆ. ನೋ ಸ್ಮೋಕಿಂಗ್ ಜಾಹೀರಾತು ಮೂಲಕ ಜಾಗೃತಿ ಮೂಡಿಸಲಾಗುತ್ತೆ. ಅದರಲ್ಲೂ ಈ ಜಾಹೀರಾತಿನಲ್ಲಿ ಪುಟ್ಟ ಹುಡುಗಿಯನ್ನು ನೋಡಿರುತ್ತೀರಿ. ಆದ್ರೆ ಇದೇ ಪುಟ್ಟ ಬಾಲಕಿ ಈಗ ಹೆಂಗ್ ಆಗಿದ್ದಾರೆ ಗೊತ್ತೆ?

'ಸಿಗರೇಟು ಹುಡುಗಿ' ಈಗ ಗ್ಲಾಮರಸ್!
ಯೆಸ್, ಸಿಗರೇಟು ಜಾಹೀರಾತಿನ ಪುಟಾಣಿ ಹುಡುಗಿ ಇದೀಗ ಗ್ಲಾಮರಸ್ ಗೊಂಬೆ ಆಗಿದ್ದಾರೆ. ಸಿಮ್ರಾನ್ ನಾಟೇಕರ್ ಹೆಸರಿನ ಈಕೆ, ಈಗ ಬಾಲಿವುಡ್‌ನಲ್ಲಿ ಕೂಡ ಮಿಂಚು ಹರಿಸುತ್ತಿದ್ದಾಳೆ. ಆದರೆ ಇದೇ ಬಾಲಕಿ ಹಿಂದೆ ಸಿಗರೇಟು ಜಾಹೀರಾತು ಮಾಡಿದ್ದರು. ಆಗ ಆಕೆಗೆ ಕೇವಲ 6 ವರ್ಷ ವಯಸ್ಸು ಆಗಿತ್ತು. ಹೀಗೆ ಬಾಲನಟಿ ಆಗಿದ್ದ ಸಿಮ್ರಾನ್ ನಾಟೇಕರ್, ಫುಲ್ ಚೇಂಜ್ ಆಗಿದ್ದು ಈಗ ಪಡ್ಡೆ ಹುಡುಗರ ಫೇವರಿಟ್ ಕೂಡ ಆಗಿದ್ದಾರೆ.
ಸಿಗರೇಟು ಜಾಹೀರಾತು ಸಂಚಲನ
ಅಷ್ಟಕ್ಕೂ ಸಿಗರೇಟು ವಿರುದ್ಧ ಜಾಹೀರಾತು ಸಿಕ್ಕಾಪಟ್ಟೆ ಫೇಮಸ್ ಆಗಿತ್ತು ಸಿಮ್ರಾನ್ ನಾಟೇಕರ್ ನಟನೆಗೆ ಕೂಡ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅಂದಹಾಗೆ ಅಪ್ಪನು ಧೂಮಪಾನ ಮಾಡುವ ವೇಳೆ ಮಗಳು ತಂದೆ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ. ಧೂಮಪಾನ ಮಾಡುತ್ತಾ ಪದೇ, ಪದೇ ಕೆಮ್ಮುವ ತಂದೆಯನ್ನೇ ದಿಟ್ಟಿಸಿ ನೋಡುತ್ತಾಳೆ. ಆಗ ಟಿವಿಯಲ್ಲಿ ಒಂದು ಜಾಹೀರಾತು ಬಂದು ಧೂಮಪಾನ ಸಮಸ್ಯೆಗಳನ್ನ ತಿಳಿಸುತ್ತದೆ. ಆ ಕ್ಷಣದಲ್ಲೇ, ಮಗಳ ಮುಖ ನೋಡುವ ತಂದೆ ಸ್ಮೋಕಿಂಗ್‌ಗೆ ಅಂದ್ರೆ ಸಿಗರೇಟಿಗೆ ಗುಡ್‌ಬೈ ಹೇಳುತ್ತಾನೆ. ಈ ಮೂಲಕ ಧೂಮಪಾನ ಕೆಟ್ಟದ್ದು ಎಂಬ ಸಂದೇಶ ನೀಡಲಾಗುತ್ತದೆ.
ಆ ಹುಡುಗಿ ಹಿಂಗ್ ಆಗಿದ್ದಾಳಾ?
ಹೀಗೆ ಸಿಗರೇಟು ಜಾಹೀರಾತಿನ ಮೂಲಕ ಗಮನ ಸೆಳೆದಿದ್ದ ಪುಟಾಣಿ ಬಾಲಕಿ ಇದೀಗ ಫುಲ್ ಬ್ಯುಸಿಯಾಗಿ, ನಟನೆಯಲ್ಲಿ ಸಂಪೂರ್ಣ ಜೀವನ ತೊಡಗಿಸಿಕೊಂಡಿದ್ದಾರೆ. ನಟಿ ಸಿಮ್ರಾನ್‌ಗೆ ಸಾಲು ಸಾಲು ಆಫರ್ಸ್ ಬರುತ್ತಿವೆ. ಟಿವಿ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ನಾಟೇಕರ್ ಬೋಲ್ಡ್ ಅವತಾರ ಸಹ ನೆಟ್ಟಿಗರನ್ನು ಸೆಳೆಯುತ್ತಿವೆ. ಹಾಗೇ ಆ ಹುಡುಗಿ ಇದೀಗ, ಹಿಂಗ್ ಆಗಿದ್ದಾಳಾ? ಅಂತಾ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಆ ಬಾಲಕಿ ನಟನೆಗೆ ಕೂಡ ಫಿದಾ ಆಗಿದ್ದಾರೆ.

ಅಂದಹಾಗೆ ಸಿಮ್ರಾನ್ ನಾಟೇಕರ್ 1997ರ ಡಿಸೆಂಬರ್ 12 ರಂದು ಮುಂಬೈನಲ್ಲಿ ಜನಿಸಿದರು. ತಮ್ಮ 6ನೇ ವಯಸ್ಸಿನಲ್ಲೇ ಬಾಲ ನಟಿಯಾಗಿ ನೋ ಸ್ಮೋಕಿಂಗ್ ಜಾಹೀರಾತು ಮಾಡಿದ್ರು. ಆ ನಂತರ ವಿವಿಧ ದೇಶದಲ್ಲೂ ಸಿಮ್ರಾನ್ ನಾಟೇಕರ್ ಫುಲ್ ಫೇಮಸ್ ಆಗಿ ಹೋದರು. ಅದು ಆಕೆಗೆ ಮತ್ತಷ್ಟು ಅವಕಾಶ ಸಿಗುವಂತೆ ಮಾಡಿತ್ತು. ಇದಾದ ಬಳಿಕ ಹಲವು ಜಾಹೀರಾತುಗಳ ಮೂಲಕ ಮಿಂಚಿದ್ದರು ಸಿಮ್ರಾನ್ ನಾಟೇಕರ್. ಈಗ ಸಿನಿಮಾ ಲೈಫ್‌ನಲ್ಲಿ ಫುಲ್ ಬ್ಯುಸಿಯಾಗಿ ಗಮನ ಸೆಳೆಯುತ್ತಿದ್ದಾರೆ.
ಒಟ್ನಲ್ಲಿ ಜೀವನ ಹೇಗೆಲ್ಲಾ ಬದಲಾಗುತ್ತೋ ಗೊತ್ತಿಲ್ಲ. ಆದರೆ ಶ್ರದ್ಧೆ ಇದ್ದರೆ, ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಅನ್ನೋದಕ್ಕೆ ಸಿಮ್ರಾನ್ ನಾಟೇಕರ್ ಉದಾಹರಣೆಯಾಗಿ ನಿಲ್ಲುತ್ತಾರೆ. ಬಾಲನಟಿ ಈಗ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದು, ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಗಳಿಸಿಕೊಂಡಿದ್ದಾರೆ.












Click it and Unblock the Notifications