Dr. Shiva Rajkumar: ಶಿವಣ್ಣ ಸರ್ಜರಿಗೆ ಸಿದ್ಧತೆ, ಕನ್ನಡಿಗರ ಅಭಿಮಾನ ಅಂದ್ರೆ ಇದು ಅಂತಿದ್ದಾರೆ ಜನ!
ಶಿವಣ್ಣ ಕನ್ನಡಿಗರ ಪ್ರೀತಿಯ ನಟ ಮಾತ್ರವಲ್ಲ, ಎಷ್ಟೋ ಜನರಿಗೆ ಅಣ್ಣ... ಅದೆಷ್ಟೋ ಜನರ ಬೆನ್ನಿಗೆ ನಿಂತ ರಕ್ಷಕ... ಲೆಕ್ಕವಿಲ್ಲದಷ್ಟು ಜನ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯಲು ಸಹಾಯ ಮಾಡಿದ ಸ್ಟಾರ್ ಅಂದ್ರೆ ಅದು ಡಾ. ಶಿವರಾಜ್‌ಕುಮಾರ್ ಅವರು ಅಂದ್ರೆ ತಪ್ಪಾಗಲಾರದು. ಆದರೆ ಶಿವಣ್ಣ ಅವರು ಇದೀಗ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೋಟಿ ಕೋಟಿ ಅಭಿಮಾನಿಗಳ ಎದೆಯಲ್ಲಿ ಆತಂಕ ಶುರುವಾಗಿದೆ.
ಇನ್ನೇನು ಕೆಲ ನಿಮಿಷಗಳಲ್ಲಿ ಡಾ. ಶಿವರಾಜ್‌ಕುಮಾರ್ ಅವರಿಗೆ ಅಮೆರಿಕದಲ್ಲಿ ಸರ್ಜರಿ ಅಂದ್ರೆ ಆಪರೇಷನ್ ಆಗಲಿದೆ. ಕೋಟ್ಯಂತರ ಕನ್ನಡಿಗರು ಮಾತ್ರವಲ್ಲ ಇಡೀ ಇಂಡಿಯಾ ಪೂರ್ತಿ ಡಾ. ಶಿವರಾಜ್‌ಕುಮಾರ್ ಅವರಿಗೆ ಹತ್ತಾರು ಕೋಟಿ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗ ಶಿವಣ್ಣನ ಗಂಭೀರ ಆರೋಗ್ಯ ಸಮಸ್ಯೆ ವಿಚಾರದಲ್ಲಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ಇದೀಗ ಎಲ್ಲವೂ ಸುಸೂತ್ರವಾಗಿ ನಡೆದು ಶಿವಣ್ಣ ಆರೋಗ್ಯಕರವಾಗಿ ಕನ್ನಡ ನಾಡಿಗೆ ಮರಳಿ ಬರಲಿ ಅಂತಾ ದೇವರ ಮೊರೆ ಹೋಗಿದ್ದಾರೆ ಅಭಿಮಾನಿಗಳು...

ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ....
ಶಿವಣ್ಣ ಅವರು ಈಗಾಗಲೇ ಅಮೆರಿಕ ತಲುಪಿದ್ದಾರೆ, ಡಿಸೆಂಬರ್ 24 ಅಂದ್ರೆ ಇವತ್ತು ನಟ ಡಾ. ಶಿವರಾಜ್‌ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ. ಫ್ಲೋರಿಡಾ ರಾಜ್ಯದ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಸರ್ಜರಿ ನಡೆಸಲು ಎಲ್ಲಾ ಸಿದ್ಧತೆನ ಮಾಡಿಕೊಳ್ಳಲಾಗಿದ್ದು, ಇನ್ನು ಕೆಲವೇ ನಿಮಿಷಗಳಲ್ಲಿ ಆಪರೇಷನ್ ಶುರುವಾಗಲಿದೆ.
ಹೀಗೆ ಡಾಕ್ಟರ್ ಮುರುಗೇಶ್ ಅವರ ನೇತೃತ್ವದಲ್ಲಿ ಈ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂಬ ಮಾಹಿತಿ ಇದ್ದು, ಶಿವರಾಜ್‌ಕುಮಾರ್ ಅವರಿಗೆ ಸರ್ಜರಿ ಯಶಸ್ವಿಯಾಗಿ ನಡೆದು & ನಟ ಶಿವಣ್ಣ ಅವರು ಆರೋಗ್ಯಕರವಾಗಿ ಬೆಂಗಳೂರಿಗೆ ಮರಳಿ ಬರಲಿ ಅಂತಾ ಪೂಜೆ ಶುರುವಾಗಿದೆ. ಅಭಿಮಾನಿಗಳು ಈ ಮೂಲಕ ತಮ್ಮ ಆತಂಕದಿಂದ ದೂರವಾಗಲು ದೇವರ ಮೊರೆ ಹೋಗಿದ್ದಾರೆ. ಅಲ್ಲದೇ, ದೊಡ್ಮನೆ ದೊಡ್ಮಗನ ಆರೋಗ್ಯಕ್ಕಾಗಿ ಪ್ರಾರ್ಥನೆ ನಡೆಸುತ್ತಿದ್ದಾರೆ.
ಕನ್ನಡ ನಾಡಿನ ಜನರ ಪ್ರಾರ್ಥನೆ
ಕರ್ನಾಟಕದ ವಿವಿಧ ಜಿಲ್ಲೆ & ತಾಲೂಕು ಕೇಂದ್ರಗಳು ಸೇರಿದಂತೆ ಹಳ್ಳಿಗಳಲ್ಲಿ ಕೂಡ ಇದೀಗ ಡಾ. ಶಿವರಾಜ್‌ಕುಮಾರ್ ಅವರ ಸರ್ಜರಿ ಯಶಸ್ಸಿಗೆ ವಿಶೇಷ ಪೂಜೆ & ಹೋಮ ನಡೆಯುತ್ತಿದೆ. ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಶಿವಣ್ಣ ಅವರ ಆರೋಗ್ಯ ಸುಧಾರಣೆ ಅಭಿಮಾನಿಗಳಿಗೆ ಕೂಡ ಮುಖ್ಯವಾಗಿದ್ದು, ತಮ್ಮ ನೆಚ್ಚಿನ ನಟನ ಉತ್ತಮ ಆರೋಗ್ಯಕ್ಕೆ ಈಗ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಬೆಂಗಳೂರಿನಲ್ಲೂ ವಿವಿಧ ಏರಿಯಾದ ಜನ ಶಿವಣ್ಣನಿಗಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ.












Click it and Unblock the Notifications