ಶಾರುಖ್ ಖಾನ್ ಮನೆಯ ಮುಂದೆ ಜನಜಂಗುಳಿ, ಕಾರಣ ತಿಳಿಯಿರಿ!

ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ 'ಡಂಕಿ' ಸಿನಿಮಾ ಮೂಲಕ ಮತ್ತೆ ಗಲುವಿನ ನಗೆ ಬೀರಿದ್ದಾರೆ. ಅದರಲ್ಲೂ ನಟ ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಇದು ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಹೀಗಾಗಿ ದಿಢೀರ್ ಕಿಂಗ್ ಖಾನ್ ಅಭಿಮಾನಿಗಳು ಮಾಡಿದ್ದು ಏನು ಗೊತ್ತಾ? ವಾಣಿಜ್ಯ ನಗರಿ ಮುಂಬೈನ, ಶಾರುಖ್ ಖಾನ್ ಮನೆ ಎದುರು ನಡೆದಿದ್ದು ಏನು? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಅಷ್ಟಕ್ಕೂ, ಶಾರುಖ್ ಖಾನ್ ನಟಿಸಿರುವ ಡಂಕಿ ಗೆಲುವಿನ ಓಟ ಮುಂದುವರೆದಿದೆ. ಡಿಸೆಂಬರ್ 21 ರಂದು ಜಗತ್ತಿನ ವಿವಿಧೆಡೆ ರಿಲೀಸ್ ಆಗಿದ್ದ ಈ ಸಿನಿಮಾ, ಉತ್ತಮ ಪ್ರದರ್ಶನ ಕಾಣುತ್ತಿದೆ. ಡಂಕಿ ಸಿನಿಮಾಗೆ ಪ್ರೇಕ್ಷಕ ತೋರಿಸುತ್ತಿರುವ ಪ್ರೀತಿಗೆ ಕಿಂಗ್ ಖಾನ್ ಫಿದಾ ಆಗಿದ್ದಾರೆ. ಈ ಹಿನ್ನೆಲೆ ತಮ್ಮ ಮುಂಬೈ ನಿವಾಸ 'ಮನ್ನತ್' ಎದುರು ಬಂದಿದ್ದ ಅಭಿಮಾನಿಗಳಿಗೆ ಶಾರುಖ್ ದರ್ಶನ ಕೊಟ್ಟಿದ್ದಾರೆ. ಹಾಗೇ ಈ ವೇಳೆ ತಮ್ಮ ಸಿಗ್ನೇಚರ್ ಶೈಲಿ ಪೋಸ್ ಕೊಟ್ಟಿದ್ದಾರೆ. ಈ ಮೂಲಕ ಸಹಸ್ರಾರು ಅಭಿಮಾನಿಗಳಿಗೆ ಕಿಂಗ್ ಖಾನ್ ಅಭಿನಂದನೆ ತಿಳಿಸಿದ್ದಾರೆ.

Shah Rukh Khan Meets His Fans Near His House At Mumbai

ನಿರೀಕ್ಷೆಗಳು ನಿಜವಾಗಿ ಹೋದವು

ಇನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಿರುವ, ಡಂಕಿ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮಾನ್ ಇರಾನಿ ನಟಿಸಿದ್ದಾರೆ. ಈ ಮೂಲಕ ಒಂದು ಸಿಂಪಲ್ ಕಥೆಯ ತಮಾಷೆಯಾಗಿ ಅಷ್ಟೇ ಭಾವನಾತ್ಮಕವಾಗಿ ರಾಜ್‌ಕುಮಾರ್ ಹಿರಾನಿ ಹೇಳಿ ಗೆದ್ದಿದ್ದಾರೆ. ಶಾರುಖ್ ಖಾನ್ ಅವರು ಹಿರಾನಿ ಜೊತೆಗೆ ಕೈಜೋಡಿಸುತ್ತಿದ್ದಾರೆ, ಎನ್ನುವ ಸುದ್ದಿ ರಿವೀಲ್ ಆದ ನಂತರ ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ಈಗ ಎಲ್ಲಾ ನಿರೀಕ್ಷೆಗಳು ನಿಜವಾಗಿದ್ದು, ಗಲ್ಲಾ ಪೆಟ್ಟಿಗೆ ಅಖಾಡದಲ್ಲಿ ಗೆದ್ದು ಬೀಗಿದೆ.

ಸಾಲು ಸಾಲು ಗೆಲುವಿನ ಸಿಹಿ

'ಜೀರೊ' ಸಿನಿಮಾ ಸೋಲಿನ ಬಳಿಕ ಸ್ವಲ್ಪ ದಿನ ತೆರೆ ಹಿಂದೆ ಇದ್ದ ನಟ ಶಾರುಖ್ ಖಾನ್ ಈ ವರ್ಷ 'ಪಠಾಣ್' ಆಗಿ ಖಡಕ್ ಕಂಬ್ಯಾಕ್ ಮಾಡಿದ್ರು. ಈ ಚಿತ್ರ ಸಾವಿರ ಕೋಟಿ ಕಲೆಕ್ಷನ್ ಗಡಿ ದಾಟಿತ್ತು. ಆ ನಂತರ ಬಂದಿದ್ದ ಜವಾನ್ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಿನಿಮಾ ಕೂಡ 1000 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಹೀಗಾಗಿ 'ಡಂಕಿ' ಸಿನಿಮಾ ಬಗ್ಗೆ ಸಹಜವಾಗಿ ಕ್ರೇಜ್ ಹೆಚ್ಚಾಗಿತ್ತು. ಈ ಎಲ್ಲಾ ನಿರೀಕ್ಷೆ ನಿಜವಾಗಿ, ಶಾರುಖ್ ಖಾನ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

Shah Rukh Khan Meets His Fans Near His House At Mumbai

ಒಟ್ನಲ್ಲಿ ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ. ಇನ್ನೇನು 2023 ಮುಗಿದೇ ಹೋಗುತ್ತಿದೆ ಎನ್ನುವಾಗ ಈ ಮೂಲಕ ಸರ್ಪ್ರೈಸ್ ಪಡೆದಿದ್ದಾರೆ ಶಾರುಖ್‌ರ ಅಭಿಮಾನಿಗಳು. ಇದೀಗ ಮತ್ತೆ ಸಾಲು ಸಾಲು ರಜೆಗಳು ಬರಲಿದ್ದು, ಡಂಕಿ ಸಿನಿಮಾ ಮತ್ತೆ ಬಾಕ್ಸ್ ಆಫಿಸ್‌ನಲ್ಲಿ ಅಬ್ಬರಿಸುವ ಮುನ್ಸೂಚನೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+