ಮುರುಗ ಮಾಸ್ಟರ್ರಿಂದ ದೂರ ಆದ್ರಾ ಪತ್ನಿ: ಸ್ಪಷ್ಟನೆ ಕೊಟ್ಟ ನಟಿ ಇಶಿತಾ
ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ವಿವ್ ಆಗಿರುವ ಕಿರುತೆರೆಯ ಜನಪ್ರಿಯ ನಟಿ ಇಶಿತಾ ವರ್ಷಾ ಹಾಗೂ ಪತಿ ಮುರುಗ ಮಾಸ್ಟರ್ ಇಬ್ಬರ ನಡುವೆ ಯಾವುದು ಸರಿ ಇಲ್ಲ ಎಂದು ಚರ್ಚೆಯಾಗುತ್ತಿದೆ. ಅಗ್ನಿ ಸಾಕ್ಷಿಯ ಮಾಯಾ ಪಾತ್ರದ ಜನಪ್ರಿಯ ನಟಿ ಇಶಿತಾ ಅವರು ಮಾಯಾ ಪಾತ್ರದ ಮೂಲಕ ಬಹು ವರ್ಷಗಳ ಕಾಲ ಕರುನಾಡ ವೀಕ್ಷಕರನ್ನು ರಂಜಿಸಿದ್ದಾರೆ. ಇಶಿತಾ ಅವರು ಅಗ್ನಿಸಾಕ್ಷಿ ಹಾಗೂ ಅಮೃತಧಾರೆಯಲ್ಲಿ ನಟಿಸಿದ್ದಾರೆ. ಇದೀಗ ಭಾರೀ ಚರ್ಚೆಗೆ ಕಾರಣವಾಗಿರುವುದು ಮಾಸ್ಟರ್ ಮುರುಗ ಹಾಗೂ ಇಶಿತಾ ಅವರ ದಾಂಪತ್ಯದ ವಿಚಾರ.
ಸತತ 7 ವರ್ಷಗಳ ಕಾಲ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿರುವ ಇಶಿತಾ ಅವರು ಅಗ್ನಿಸಾಕ್ಷಿ ಮುಕ್ತಾಯದ ನಂತರ ಡ್ಯಾನ್ಸರ್ ಮುರಗ ಮಾಸ್ಟರ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದರು. ಮುರುಗ ಮಾಸ್ಟರ್ ಹಾಗೂ ಇಶಿತಾ ಅವರು ಎಂಟು ವರ್ಷಗಳ ಪ್ರೀತಿಸಿ ಅದ್ದೂರಿಯಾಗಿ ಮದುವೆಯಾಗಿದ್ದರು. ಸಖತ್ ಆ್ಯಕ್ವಿವ್ ಆಗಿರುವ ಈ ಜೋಡಿ ರಾಜಾರಾಣಿ ಶೋ ಮೂಲಕ ಈ ಜೋಡಿ ಸಖತ್ ಫೇಮಸ್ ಆಯ್ತು. ಮುರುಗನಿಗೆ ಮನೆ ಮನೆ ಮುರು ಅಂತ ತಮಾಷೆ ಮಾಡುತ್ತಾ ಎಲ್ಲರೂ ಕಾಲ್ ಎಳಿತಿದ್ರು.

ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾ ಖಾತೆ ಮೂಲಕ ತಿಳಿದ್ತಿದ್ರು. ಜೊತೆಗಿನ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡ್ತಿದ್ರು. ಫ್ರೆಂಡ್ಸ್, ಫ್ಯಾಮಿಲಿ ಹಾಗೂ ಪ್ರವಾಸದ ವಿಡಿಯೋ ಹಾಗೂ ಫೋಟೋಗಳನ್ನ ಯಾವಾಗಲೂ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳೋದನ್ನ ನಿಲ್ಲಿಸಿಬಿಟ್ರು. ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ ಎಂದು ಅಭಿಮಾನಿಗಳಿಗೆ ತೀವ್ರ ಗೊಂದಲ ಮೂಡಿಸಿದೆ.
ಈ ಸೂಪರ್ ಜೋಡಿ ಯಾಕೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಯಾಕೆ ನೀವಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲಾ? ದೂರ ಆಗಿದ್ದೀರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇತಿಶಾ ಅವರು ಯಾವುದೇ ಫೋಟೋ ಹಾಗೂ ವಿಡಿಯೋವನ್ನು ಶೇರ್ ಮಾಡಿದ್ರೆ ಎಲ್ಲಿ ಮುರುಗ? ಎಲ್ಲಿ ಇತಿಶಾ ಎಂದು ಅಭಿಮಾನಿಗಳು ಹಲವು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ.
ಸಿರಿಯಲ್ ಹಾಗೂ ಟ್ರಾವಲ್ ಫೋಟೋಗ್ರಾಫಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಇಶಿತಾ ಅವರು ಇತ್ತಿಚ್ಚೇಗೆ ಪತಿ ಮುರುಗ ಮಾಸ್ಟರ್ ಜೊತೆಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತೀಲ್ಲ. ಹೀಗಾಗಿ ಇಶಿತಾ ಹಾಗೂ ಮುರುಗ ಮಾಸ್ಟರ್ ವಿಚ್ಛೇದನ ಆಗ್ತಿದ್ಯಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಸು ಗುಸು ನಡೀತಾನೆ ಇತ್ತು. ಆದರೆ, ಈ ಎಲ್ಲಾ ಗೊಂದಲಕ್ಕೆ ನಟಿ ಇಶಿತಾ ಅವರು ಉತ್ತರ ಕೊಟ್ಟಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರೋ ಇಶಿತಾ, ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ. ನಮ್ಮ ವೈಯಕ್ತಿಕ ಬದುಕನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸೋ ಅಗತ್ಯ ಇಲ್ಲ. ನಮ್ಮ ಪ್ರೈವೆಸಿಯನ್ನು ನೀವು ಗೌರವಿಸ್ತೀರ ಅನ್ಕೊಂಡಿದ್ದೀವಿ. ನಿಮಗೆ ಅವರ ಡ್ಯಾನ್ಸ್, ಮುರಗನ ಕೆಲಸದ ಬಗ್ಗೆ ಅಪ್ಡೇಟ್ ಬೇಕು ಅಂದ್ರೇ ಅವರ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿ ಎಂದು ನಟಿ ಇಶಿತಾ ಹೇಳಿದ್ದಾರೆ.












Click it and Unblock the Notifications