Actress Mahalakshmi: ಈ ‘ಲೆಜೆಂಡ್’ ನಟಿಯ ನೆನಪು ನಿಮಗಿದೆಯಾ?
ಹತ್ತಾರು ಹಿಟ್ ಕನ್ನಡ ಸಿನಿಮಾಗಳನ್ನು ನೀಡಿ ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ಆಗಿದ್ದ ಹಿರಿಯ ನಟಿ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ಈ ಗ್ಯಾಪ್‌ನ ಬಳಿಕ ಆ ನಟಿ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಹಾಗೇ ಮತ್ತೆ ಕನ್ನಡಿಗರಿಗೆ ತಮ್ಮ ನಟನೆಯ ಮೂಲಕ ಹತ್ತಿರವಾಗಲು ಸಿದ್ಧವಾಗಿದ್ದಾರೆ. ಹಾಗಾದರೆ ಆ ನಟಿ ಯಾರು?
ಹೌದು ದಶಕಗಳ ಹಿಂದೆ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದ ಮಹಾಲಕ್ಷ್ಮೀ ಒಂದಷ್ಟು ವರ್ಷ ಚಿತ್ರರಂಗದಿಂದ ದೂರ ಇದ್ದರು. ಆದ್ರೆ ಈಗ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲು ಈ ನಟಿ ಸಿದ್ಧವಾಗಿದ್ದಾರೆ. 'TRP ರಾಮ' ಎಂಬ ಟೈಟಲ್ ಅಡಿ ಲಾಂಚ್ ಆಗುತ್ತಿರುವ ಚಿತ್ರದ ಮೂಲಕ ನಟಿ ಮಹಾಲಕ್ಷ್ಮೀ ಕೂಡ ಕಂಬ್ಯಾಕ್ ಮಾಡುತ್ತಿದ್ದಾರೆ. ರವಿಪ್ರಸಾದ್ ನಟನೆಯ ಜೊತೆ ನಿರ್ದೇಶನ ಮಾಡಿರುವ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಹಾಗೇ ಟ್ರೇಲರ್ ರಿಲೀಸ್ ಸಮಾರಂಭದಲ್ಲಿ ನಟಿ ಮಹಾಲಕ್ಷ್ಮೀ ಮಾತನಾಡಿ ಸಂತಸ ಹಂಚಿಕೊಂಡಿದ್ದಾರೆ.

ಸಿನಿಮಾ ಬಗ್ಗೆ ಮಹಾಲಕ್ಷ್ಮೀ ಹೇಳಿದ್ದೇನು?
ಹಿರಿಯ ನಟಿ ಮಹಾಲಕ್ಷ್ಮೀ ಮಾತನಾಡಿ, ಎಲ್ಲಾ ಭಾಷೆಯಲ್ಲಿ ಎಲ್ಲಾ ಹೀರೋಗಳ ಜೊತೆಗೂ ಸಿನಿಮಾ ಮಾಡಿದ್ದೆ ಎಂದು ತಮ್ಮ ಹಳೆಯ ದಿನಗಳನ್ನ ಮೆಲುಕು ಹಾಕಿದ್ರು. ಎಲ್ಲಾ ಟೀಂ ವರ್ಕ್. ನಮ್ಮ ಮನೆಯಲ್ಲಿ ಲಾಫಿಂಗ್ ಬುದ್ಧ ಇಟ್ಕೊಂಡು ನಗುತ್ತಾ ಇರುವುದು ಸಾಕಾಗಲ್ಲ. 3 ಕೋತಿ ನೆನಪು ಇದೆಯಲ್ಲ? ಕೆಟ್ಟದನ್ನ ಕೇಳಬಾರದು, ಕೆಟ್ಟದನ್ನ ನೋಡಬಾರದು, ಕೆಟ್ಟದ್ದು ಮಾಡಬಾರದು. ಅದನ್ನ ನಿಮ್ಮ ಮಕ್ಕಳಿಗೆ ನೆನಪಿಸಿ ಅವರ ಜೀವನ ಚೆನ್ನಾಗಿರುತ್ತದೆ ಅಂತಾ ಇದೇ ವೇಳೆ ಸಲಹೆ ನೀಡಿದರು.

ಇದು ಸಿನಿಮಾ ಅಲ್ಲ.. ಜೀವನ..
ಈ ಮೌಲ್ಯ ಹೇಳಿಕೊಡುವುದೇ 'TRP ರಾಮ' ಚಿತ್ರದ ಉದ್ದೇಶ, ಎಂಟರ್‌ಟೈನ್ಮೆಂಟ್ ಇದೆ. ಕ್ವಾಲಿಟಿ ಇದೆ, ನೀತಿಯೂ ಇದೆ. ಆ ನೀತಿ ನಮ್ಮ ಜನರೇಷನ್‌ಗೆ ಸಿಗಬೇಕಿದೆ. ನಮ್ಮ ಸರ್ಕಾರ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಿದೆ. ಆದ್ರೆ ಅದನ್ನು ಫಾಲೋ ಮಾಡಲು ಆಗುತ್ತಿಲ್ಲ. 'TRP ರಾಮ' ಕೇವಲ ಸಿನಿಮಾವಲ್ಲ, ಅದೊಂದು ಜೀವನ ಎಂದು ನಟಿ ಮಹಾಲಕ್ಷ್ಮೀ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಕಲಾವಿದ ಓಂ ಸಾಯಿ ಪ್ರಕಾಶ್ ಮಾತನಾಡಿ, ನೈಜ ಘಟನೆ ನಾವು ತೆಗೆದುಕೊಂಡಾಗ ಅದು ಹೃದಯಕ್ಕೆ ಹತ್ತಿರವಾಗುತ್ತೆ. ಟ್ರೇಲರ್ ನೋಡುವಾಗ ನೋವು ಅನಿಸಿತು. ಸಮಾಜದಲ್ಲಿ ಹೆಣ್ಣನ್ನು ಬೇರೆ ರೀತಿ ನೋಡುವ ಸನ್ನಿವೇಶವಿದೆ. ಸರ್ಕಾರ ಎಷ್ಟು ಕಾನೂನು ಮಾಡುತ್ತಿದ್ದೆ. ಆದರೂ ರಾಕ್ಷಸ ಮನಸ್ಸು ತಡೆಯುತ್ತಿಲ್ಲ. ಈ ಘಟನೆ ಹೆಚ್ಚಾಗುತ್ತಿವೆ ಎಂದರು. ಅಶುತೋಶ್ ಪಿಕ್ಚರ್ಸ್ ಬ್ಯಾನರ್ ನಡಿ TRP ರಾಮ ಚಿತ್ರ ನಿರ್ಮಾಣವಾಗುತ್ತಿದೆ. ಇನ್ನು ರವಿಪ್ರಸಾದ್ ನಟಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಮಹಾಲಕ್ಷ್ಮೀ ಪೋಷಕ ಪಾತ್ರದಲ್ಲಿ, ಪತ್ರಕರ್ತೆಯಾಗಿ ಸ್ಪರ್ಶಯಾಗಿ ನಟಿಸಿದ್ದಾರೆ. ರಾಜ್ ಗುರು ಹೊಸಕೋಟೆ ಸಂಗೀತ ಸುನಿಲ್ ಕಶ್ಯಪ್ ಸಂಕಲನ, ಗುರುಪ್ರಸಾದ್ ಛಾಯಾಗ್ರಹಣ, ರಾಕೇಶ್ ಆಚಾರ್ಯ ಬಿಜಿಎಂ ಈ ಸಿನಿಮಾಗೆ ಇದೆ.












Click it and Unblock the Notifications