ನನ್ನ ಮತ್ತು ದೊಡ್ಡಣ್ಣ ಮಧ್ಯೆ ಕುತಂತ್ರ ಮಾಡಿದ್ದೇ ಸಾಧುಕೋಕಿಲ: ಟೆನ್ನಿಸ್‌ ಕೃಷ್ಣ

ಬೆಂಗಳೂರು, ಆಗಸ್ಟ್‌ 29 ನನ್ನ ಮತ್ತು ದೊಡ್ಡಣ್ಣ ಜೋಡಿ ಬಿದ್ದು ಹೋಗಿದೆ. ನಾವೀಗ ಬೇರೆ ಬೇರೆ ಆಗಿ ಬಿಟ್ಟಿದ್ದೇವೆ. ನಾವಿಬ್ಬರು ಪರಸ್ಪರ ಏನೂ ಜಗಳ ಆಡಿಲ್ಲ. ಇದೆಲ್ಲಾ ಕುತಂತ್ರ. ಕುತಂತ್ರದಿಂದ ನಾವು ದೂರಾಗಿದ್ದೇವೆ. ಬೇರೆಯವರು ಪಾತ್ರ ಮಾಡಿದವರು ಕುತಂತ್ರ ಮಾಡಿದರು. ಅದು ಯಾರು ಎಂದು ಎಲ್ಲರಿಗೂ ಗೊತ್ತೇ ಇದೆ. ಅವರ ಹೆಸರು ಎಲ್ಲರಿಗೂ ಗೊತ್ತಿದೆ ಮತ್ತೆ ಯಾಕೆ ಹೇಳುವುದು ಎಂದ ಹಿರಿಯ ನಟ ಟೆನ್ನಿಸ್‌ ಕೃಷ್ಣ, ಇದೇ ಸಾಧು ಕೋಕಿಲ ಎನ್ನುವ ಮೂಲಕ ತಾವು ಮತ್ತು ದೊಡ್ಡಣ್ಣ ದೂರಾಗಲು ಹಾಸ್ಯ ನಟ ಸಾಧು ಕೋಕಿಲ ಕಾರಣ ಎಂದು ನೇರವಾಗಿ ಹೇಳಿದ್ದಾರೆ.

ಸುದ್ದಿ ಮನೆ ಯೂಟ್ಯೂಬ್‌ ಚಾನೆಲ್ ಜೊತೆ ಮಾತನಾಡಿದ ಅವರು, 'ಅವರು ಹೀರೋ ಮಾಡುವಾಗ ನಾನು ಬೇಕಾಗಿತ್ತು. ನಾನು ಮಾಡಬೇಕಾದ ಸಿನಿಮಾವನ್ನು ಅವರು ಮಾಡಿದರು. ಆದರೂ ನನಗೆ ಸಂತೋಷ. ತಿಮ್ಮರಾಯ ಸಾಧು ಕೋಕಿಲ ಜೊತೆ ಕಾಂಬೀನೇಷನ್‌ ನಾನೇ ಮಾಡಬೇಕು ಎಂದಯ ನಿರ್ದೇಶಕರು ಕರೆ ಮಾಡಿದ್ದರು. ಆ ಸಮಯದಲ್ಲಿ ನನ್ನ ಡೇಟ್‌ ಇರಲಿಲ್ಲ. ಮತ್ತೆ ನಿರ್ದೇಶಕರು ನಾನಿದ್ದ ಕಡೆಯೇ ಹುಡುಕಿಕೊಂಡು ಬಂದಿದ್ದರು.

Senior Actor Tennis Krishna Has Expressed Sadness About Sadhu Kokila

ಆ ಮೇಲೆ ನಾನು ಆ ಪಾತ್ರ ಮಾಡುತ್ತೇನೆ ಎಂದು ಒಪ್ಪಿಕೊಂಡೆ. ನಿರ್ದೇಶಕರಿಗಾಗಿ ಒಪ್ಪಿಕೊಂಡು ಮಾಡಿದೆ. ಅದಾದ ನಂತರ ಟೆನ್ನಿಸ್‌ ಕೃಷ್ಣ ಬೇಡವಾ..?. ನಾನು ಬ್ಯೂಸಿಯಾಗಿದ್ದ ಸಮಯದಲ್ಲಿ ಆತ ಅಂದರೆ ಸಾಧು ಕೋಕಿಲ ಯಾವುದೋ ಒಂದು ಕಾರ್ಯಕ್ರಮಕ್ಕೆ ಅಣ್ಣಾ ಈ ರೀತಿ ಒಂದು ಕಾರ್ಯಕ್ರಮಕ್ಕೆ ಗೆಸ್ಟ್‌ ಆಗಿ ಬರಬೇಕು ಎಂದು ಕೇಳಿಕೊಂಡಿದ್ದ. ನಾನು ಶೂಟಿಂಗ್‌ ಮುಗಿಸಿಕೊಂಡು ಸಂಜೆ ಆ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೇನೆ' ಎಂದರು.

'ಸ್ವಲ್ಪ ವರ್ಷಗಳು ಆದ ಮೇಲೆ ಆತ ಒಂದು ಮಟ್ಟಕ್ಕೆ ಬೆಳೆದಿದ್ದ ನಾನು ಒಂದು ದಿನ ಆತನನ್ನು ಹುಡುಕಿಕೊಂಡು ಹೋದೆ. ಶೂಟಿಂಗ್ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಒಂದು ಕಾರ್ಯಕ್ರಮಕ್ಕೆ ಬರಬೇಕು ಅಂತಾ ಕೇಳಿಕೊಂಡೆ. ಆಯ್ತು ಬರುತ್ತೇನೆ ಅಂತಾ ಹೇಳಿದರು. ಆದರೆ ಮಾರನೇ ದಿನದಿಂದ ಫೋನೇ ತೆಗೆಯುತ್ತಿರಲಿಲ್ಲ. ಬಳಿಕ ದಾವಣಗೆರೆಯಲ್ಲಿ ಒಂದು ಕಾರ್ಯಕ್ರಮ ಮಾಡಿ ಬುಲೆಟ್‌ ಪ್ರಕಾಶ್‌ ಅವರನ್ನು ಅತಿಥಿಯಾಗಿ ಕರೆದೆ. ಹೆಚ್ಚಿನ ಹಣ ಕೇಳಿದ್ದರೂ ಒಪ್ಪಿದೆ. ನಾನು ಬುಲೆಟ್‌ ಪ್ರಕಾಶ್‌ ಬರುತ್ತಾರೆ ಅಂತಾ ಪೋಸ್ಟ್‌ರ್‌ ಹಾಕಿಸಿದ್ದೆ ಆದರೆ ಅವರು ಬರಲೇ ಇಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

Senior Actor Tennis Krishna Has Expressed Sadness About Sadhu Kokila

'ಆ ಕಾರ್ಯಕ್ರಮ ಮುಗಿದ ಮೇಲೆ ನಾನು ವಿಮಾನ ನಿಲ್ದಾಣದಲ್ಲಿ ಹೋಗುವಾಗ ಅಲ್ಲಿ ಒಬ್ಬರು ಹೇಳಿದರು ಬುಲೆಟ್‌ ಪ್ರಕಾಶ್‌ ಹಾಗೂ ಸಾಧು ಕೋಕಿಲ ದುಬೈ ಹೋಗಿದ್ದಾರೆ ಎಂದರು. ಇಬ್ಬರು ಒಟ್ಟು ಸೇರಿ ದುಬೈಗೋ ಎಲ್ಲೋ ಹೋಗಿದ್ದಾರೆ. ಇದಾ ಮಾನವೀಯತೆ. ಅವರದ್ದವರು ಮಾಡಿಕೊಳ್ಳಲಿ ನಮ್ಮ ಪಾತ್ರಗಳನ್ನು ಯಾಕೆ ಬದಲಿಸಬೇಕು' ಎಂದು ಸಾಧು ಕೋಕಿಲ ಮೇಲಿನ ಬೇಸರವನ್ನು ಟೆನ್ನಿಸ್‌ ಕೃಷ್ಣ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+