Vaishnavi Gowda: ಸೀತಮ್ಮಗೆ ಕಿಡಿಗೇಡಿಗಳ ಕಾಟ: ನಟಿ ಫೋಟೋ ಕಂಡು ಫ್ಯಾನ್ಸ್ ಫುಲ್ ಶಾಕ್
ಆಲಿಯಾ ಭಟ್, ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೇರಿದಂತೆ ಬಾಲಿವುಡ್ ನಟಿಯರನ್ನು ಕಾಡುತ್ತಿದ್ದ ಡೀಪ್‌ಫೇಕ್ ಕಾಟ ಇದೀಗ ಕನ್ನಡ ನಟಿಯರ ಬೆನ್ನು ಬಿದ್ದಿದ್ದು, ಕಿರುತೆರೆ ನಟಿ ವೈಷ್ಣವಿ ಗೌಡ ಅವರ ಡೀಪ್ ಫೇಕ್ ಫೋಟೋವನ್ನು ವೈರಲ್ ಮಾಡಲಾಗಿದೆ.
ವೈಷ್ಣವಿ ಗೌಡ ಈ ಹಿಂದೆ ಧರಿಸಿದ್ದ ಕೆಂಪು ಬಣ್ಣದ ಗೌನ್ ಬಟ್ಟೆಯ ಫೋಟೋವನ್ನು ಎಡಿಟ್ ಮಾಡಿರುವ ಕಿಡಿಗೇಡಿಗಳು ಫೋಟೋವನ್ನು ಹರಿಬಿಟ್ಟಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಅಕ್ಟೋಬರ್ 2023ರಲ್ಲಿ ಜೀ ಕುಟುಂಬ ಅವಾರ್ಡ್ ಸಮಯದಲ್ಲಿ ವೈಷ್ಣವಿ ಗೌಡ ಕೆಂಪು ಬಣ್ಣದ ಗೌನ್ ಧರಿಸಿದ್ದರು. ಈ ವೇಳೆ ತೆಗೆದ ಫೋಟೋಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿದ್ದರು. ಇದೀಗ ಅದೇ ಫೋಟೋಗಳನ್ನು ಕೆಟ್ಟದಾಗಿ ಎಡಿಟ್ ಮಾಡಿರುವ ಕಿಡಿಗೇಡಿಗಳು ಡೀಪ್‌ಫೇಕ್ ಮೂಲಕ ವೈಷ್ಣವಿ ಗೌಡ ಎಕ್ಸ್‌ಪೋಸ್ ಆಗಿ ಬಟ್ಟೆ ಹಾಕಿರುವಂತೆ ಬಿಂಬಿಸಿ ಫೋಟೋ ವೈರಲ್ ಮಾಡಿದ್ದಾರೆ.
ಅಷ್ಟೇ ಅಲ್ಲದೇ ವೈಷ್ಣವಿ ಗೌಡ ಎಂಬ ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಆರೋಪಿಗಳು ಎಡಿಟ್ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವೈಷ್ಣವಿ ಗೌಡ ಎಂಬ ಫೇಸ್‌ಬುಕ್ ಖಾತೆಯಿಂದಲೇ ಫೋಟೋಗಳು ಶೇರ್ ಆದ ಕಾರಣ ವೈಷ್ಣವಿ ಅವರೇ ಈ ಫೋಟೋಗಳನ್ನು ಹಾಕಿದ್ದಾರೆ ಎಂದು ತಿಳಿದ ಕೆಲವರು, ಈ ರೀತಿ ಫೋಟೋಗಳನ್ನು ಹಾಕಬೇಡಿ ಜನರಿಗೆ ನಿಮ್ಮ ಮೇಲೆ ಗೌರವ ಇದೆ.

ಇಂತಹ ಬಟ್ಟೆ ಧರಿಸಿ ಅಂತಹ ಒಳ್ಳೆ ಪಾತ್ರ ಮಾಡುತ್ತಿರುವ ನಿಮ್ಮ ನಡತೆಗೆ ಭಂಗ ತಂದುಕೊಳ್ಳಬೇಡಿ. ಸೀತಮ್ಮ ಹೀಗೆಲ್ಲಾ ಫೋಟೋಗಳನ್ನು ಹಾಕಬೇಡಿ, ಧಾರಾವಾಹಿಯಲ್ಲಿ ಸೀತಮ್ಮ ಗೌರಮ್ಮ, ಇಲ್ಲಿ ಹಿಂಗೆ ಅಂತೆಲ್ಲಾ ಜನರು ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಇದು ವೈಷ್ಣವಿ ಗೌಡ ಅವ ಡೀಪ್‌ಫೇಕ್ ಫೋಟೋ, ನಕಲಿ ಫೇಸ್‌ಬುಕ್ ಖಾತೆ ಎಂದು ತಿಳಿದಿರುವವರು ನಟಿಯನ್ನು ಈ ರೀತಿ ಕೆಟ್ಟದಾಗಿ ಬಿಂಬಿಸಿ ಒಂದು ಹೆಣ್ಣಿನ ಮಾನಹರಣ ಮಾಡಿದಂತೆ. ಇಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ವೈಷ್ಣವಿ ಗೌಡ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ಯ ತಿಳಿದು ಬರುತ್ತಿದ್ದಂತೆ ಸದ್ಯ ವೈಷ್ಣವಿ ಗೌಡ ಅವರ ಅಸಲಿ ಫೋಟೋ ಹಾಗೂ ಡೀಪ್‌ಫೇಕ್ ಫೋಟೋ ಎರಡನ್ನೂ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ.












Click it and Unblock the Notifications