ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ 'ಸೀತಾ ರಾಮ' ಪ್ರಿಯಾ: ಫೋಟೋ ಶೇರ್ ಮಾಡಿದ ನಟಿ
ಕಿರುತೆರೆ ಪ್ರೇಕ್ಷಕರ ಸದ್ಯದ ಮೆಚ್ಚಿನ ಧಾರಾವಾಹಿ ಸೀತಾ ರಾಮ. ಪ್ರಸಾರಕ್ಕೂ ಮೊದಲು ಹಾಡಿನಿಂದಲೇ ಜನಪ್ರಿಯತೆ ಪಡೆದ ಸೀತಾ ರಾಮ ಧಾರಾವಾಹಿ ತನ್ನ ವಿಭಿನ್ನ ಕಥೆ ಮೂಲಕ ಸದ್ಯ ಕನ್ನಡ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದೆ.
ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ-ರಾಮ ಹಾಗೂ ಸಿಹಿ ಪ್ರಾತಗಳಷ್ಟೇ ಪ್ರಿಯಾ ಮತ್ತು ಅಶೋಕ್ ಪಾತ್ರಗಳು ಕೂಡ ಮುಖ್ಯವಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸದ್ಯ ಧಾರಾವಾಹಿಯಲ್ಲಿ ಮಿಂಚುತ್ತಿರುವ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಗುಡ್‌ನ್ಯೂಸ್ ಕೊಟ್ಟಿದ್ದು, ನಿಜ ಜೀವನದಲ್ಲಿ ಕಮಿಟ್ ಆಗಿರುವ ಸಂಗತಿ ಹಂಚಿಕೊಂಡಿದ್ದಾರೆ.

ಮೇಘನಾ ಶಂಕರಪ್ಪ ಮುದ್ದಾದ ಲುಕ್‌ಗೆ ಅಪಾರ ಅಭಿಮಾನಿಗಳಿದ್ದು, ಬ್ಯಾಚುಲರ್ ಹುಡುಗಿಗೆ ಮನಸೋತವರು ಸಾಕಷ್ಟಿದ್ದರು. ಆದರೆ ಮೇಘನಾ ಶಂಕರಪ್ಪ, ವಿಶೇಷ ದಿನವಾದ ಇಂದು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ನಟಿ ಮೇಘನಾ ಶಂಕರಪ್ಪ ತನ್ನ ಬಾಯ್‌ಫ್ರೆಂಡ್ ಬರ್ತಡೇಗೆ ವಿಶ್ ಮಾಡಿ ಉಂಗುರ ಹಾಕಿರುವ ಕೈಗಳ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ಹುಡುಗನ ಜನ್ಮದಿನದ ಪ್ರಯುಕ್ತ ಇಬ್ಬರೂ ಒಂದೇ ರೀತಿಯ ಉಂಗುರ ಧರಿಸಿ ಕೈಮೇಲೆ ಕೈ ಇಟ್ಟ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಮೇಘನಾ ಶಂಕರಪ್ಪ ಹ್ಯಾಪಿ ಬರ್ತಡೇ ಎಂದು ರೆಡ್ ಹಾರ್ಟ್ ಹಾಕಿದ್ದಾರೆ. ಇದರಿಂದ ಮೇಘನಾ ನಿಜ ಜೀವನದಲ್ಲಿಯೂ ಕಮಿಟ್ ಆಗಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವುದು ಸಾಬೀತಾಗಿದೆ.

ಮೇಘನಾ ಶಂಕರಪ್ಪ ಫೋಟೋ ನೋಡಿದ ಅಭಿಮಾನಿಗಳು ಹಾಗೂ ಕಿರುತೆರೆ ಸ್ಟಾರ್‌ಗಳು ಕಮೆಂಟ್ ಮಾಡುತ್ತಿದ್ದು, ಶುಭಾಶಯ ತಿಳಿಸುತ್ತಿದ್ದಾರೆ. ಅಲ್ಲದೇ ಯಾರು ಅದು ಲಕ್ಕಿ ಹುಡುಗ ಎಂದು ಪ್ರಶ್ನಿಸುತ್ತಿದ್ದಾರೆ. ಸದ್ಯ ಕೈ ಫೋಟೋಗಳನ್ನು ಶೇರ್ ಮಾಡಿರುವ ಮೇಘನಾ ಶಂಕರಪ್ಪ ಸದ್ಯದಲ್ಲೇ ತಮ್ಮ ಹುಡುಗನ ಫೋಟೋ ಹಂಚಿಕೊಳ್ಳಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.












Click it and Unblock the Notifications