ಆ ಘಟನೆಯಿಂದ ನೋವಾಗಿ ಚಿತ್ರರಂಗ ತೊರೆದೆ: 'ಸವಾರಿ' ನಟಿಗೆ ಕೆಟ್ಟ ಅನುಭವ

"ಸವಾರಿ" ಸಿನಿಮಾ ಮೂಲಕ ನಟಿ ಕಮಲಿನೀ ಮುಖರ್ಜಿ (Kamalinee Mukherjee) ಅವರು ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ತಮ್ಮ ಮೊದಲ ಸಿನಿಮಾದಲ್ಲೇ ಅವರು ತಮ್ಮ ಅಭಿನಯದ ಮೂಲಕ ಕರ್ನಾಟಕದ ಮನೆಮಾತಾದರು. ಇಂದಿಗೂ ಅವರನ್ನು ಕನ್ನಡ ಪ್ರೇಕ್ಷಕರು ಸವಾರಿ ನಟಿ ಎಂದೇ ಗುರುತಿಸುತ್ತಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಾಲಿವುಡ್‌ ಸೇರಿಂದತೆ ಬಹುಭಾಷೆಗಳಲ್ಲಿ ಮುಖರ್ಜಿ ಮಿಂಚಿದ್ದಾರೆ. ಹೀಗಿದ್ದರೂ ಅವರು ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದರು. ಇದಕ್ಕೆ ಕಾರಣವೇನು ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ಒಂದು ಘಟನೆಯೇ ಈ ನಿರ್ಧಾರಕ್ಕೆ ಕಾರಣ ಎಂಬ ಶಾಕಿಂಗ್‌ ವಿಚಾರ ಹಂಚಿಕೊಂಡಿದ್ದಾರೆ.

ನಟಿ ಕಮಲಿನೀ ಸುಮಾರು ಒಂದು ದಶಕದಿಂದಲೂ ಚಿತ್ರರಂಗದಿಂದ ದೂರ ಉಳಿದರು. ಹಲವು ಭಾಷೆಗಳಲ್ಲಿ ಸಿನಿಮಾ ಮಾಡಿ ಜನಪ್ರಿಯತೆ ಪಡೆದರೂ ಈ ನಿರ್ಧಾರ ಮಾಡಿದ್ದೇಕೆ ಎಂದು ಅವರ ಅಭಿಮಾನಿಗಳು ಕಂಗಾಲಾಗಿದ್ದರು. ಬಳಿಕ ಅವರು ಕೂಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇತ್ತೀಚಿನ ಸಂದರ್ಶನದಲ್ಲಿ ಈ ನಿರ್ಧಾರಕ್ಕೆ ಬಲವಾದ ಕಾರಣ ಕೂಡ ವಿವರಿಸಿದ್ದಾರೆ. ಆ ಒಂದು ಸಿನಿಮಾದ ಶೂಟಿಂಗ್ ಅನುಭವ ಅದ್ಭುತವಾಗಿದ್ದರೂ, ನನ್ನ ಪಾತ್ರವನ್ನು ಅಂತಿಮವಾಗಿ ಪರದೆಯ ಮೇಲೆ ಹೇಗೆ ತೋರಿಸಿದರು ಎಂಬುದನ್ನ ನೋಡಿ ತುಂಬಾ ನೋವಾಯಿತು ಎಂದಿದ್ದಾರೆ.

savari-actress-kamalinee-mukherjee-reveals-bad-experience-made-her-quit-films

ನಟ ಚಿರಂಜೀವಿ ಪುತ್ರ ರಾಮ್‌ಚರಣ್‌ ಹಾಗೂ ಕಾಜಲ್‌ ಅವರ "ಗೋವಿಂದುಡು ಅಂದರಿವಾಡೆಲೆ" ಸಿನಿಮಾದಲ್ಲಿ ಕಮಲಿನೀ ನಟಿಸಿದ್ದರು. ನಂತರ ಅವರು ತೆಲುಗು ಚಿತ್ರಗಳಿಂದ ಹಿಂದೆ ಸರಿದಿದ್ದರು. 'ಸಿಬ್ಬಂದಿಯ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಿಲ್ಲ. ನನ್ನ ಎಲ್ಲ ಸಹ-ನಟರು, ಸೆಟ್‌ನಲ್ಲಿದ್ದ ಜನರು ನನಗೆ ಬೆಂಬಲ ನೀಡಿದ್ದರು. ಆದರೆ ನನ್ನ ಪಾತ್ರವು ಅಂತಿಮವಾಗಿ ಹೇಗೆ ಬಂತು ಎಂಬುದು ನನಗೆ ಇಷ್ಟವಾಗಲಿಲ್ಲ. ಇದರಿಂದ ನನಗೆ ತುಂಬಾ ನೋವಾಗಿ ನಾನು ಸ್ವಲ್ಪ ಸಮಯದವರೆಗೆ ತೆಲುಗು ಚಿತ್ರಗಳಿಂದ ದೂರ ಉಳಿದೆ' ಎಂದು ಹೇಳಿದ್ದಾರೆ.

ನನ್ನ ಪಾತ್ರ ಅಂದುಕೊಂಡಂತೆ ಇರಲಿಲ್ಲ

'ಸಿನಿಮಾ ಪ್ರೊಡಕ್ಷನ್‌ನಲ್ಲಿ ಇಂತಹ ಸನ್ನಿವೇಶಗಳು ಸಂಭವಿಸುತ್ತವೆ ಎಂದಿದ್ದರು. ಅಲ್ಲಿ ಒಂದು ದೃಶ್ಯವನ್ನು ಚಿತ್ರೀಕರಿಸುವಾಗ ಚೆನ್ನಾಗಿ ಕಾಣಿಸಬಹುದು. ಆದರೆ ಕೆಲವೊಮ್ಮೆ ಅದು ಅಂತಿಮವಾಗಿ ಬದಲಾಗುತ್ತದೆ. ಕೆಲವೊಮ್ಮೆ ಇದು ನಿಮ್ಮ ಸೀನ್‌ ಎಂದು ಭಾವಿಸುತ್ತೀರಿ. ಇದು ಅತ್ಯುತ್ತಮ ವಿಷಯವೆಂದು ಅನಿಸಬಹುದು. ನಂತರ ನೀವು ಹಿಂತಿರುಗಿ ನೋಡಿದಾಗ ಅದು ನೀವು ಮಾಡಿದ ರೀತಿಯಲ್ಲಿ ಬರಲಿಲ್ಲ ಎಂದಾಗ ಅದು ನನಗೆ ನೋವುಂಟು ಮಾಡಿತು ಎಂದಿದ್ದಾರೆ. ನನಗೆ ಯಾರ ಮೇಲೂ ದ್ವೇಷವಿಲ್ಲ, ಗಲಾಟೆ ಇಲ್ಲ' ಎಂದಿದ್ದಾರೆ.

'ಈ ಒಂದು ಕಾರಣದಿಂದಲೇ ನಾನು ತೆಲುಗು ಚಿತ್ರಗಳಿಂದ ಹಿಂದೆ ಸರಿದು ಬೇರೆ ಭಾಷೆಗಳಲ್ಲಿ ಪ್ರಯತ್ನಿಸಬೇಕು ಎಂದು ಭಾವಿಸಿದೆ' ಎಂದಿದ್ದಾರೆ ಕಮಲಿನೀ. ಗೋವಿಂದುಡು ಅಂದರಿವಾಡೆಲೆ ತೆಲುಗಿನಲ್ಲಿ ಅವರ ಕೊನೆಯ ಚಿತ್ರವಾಯಿತು. ಅದರಲ್ಲಿ ಕಮಿಲಿನೀ ಅವರು ಚಿತ್ರಾ ಎಂಬ ಪಾತ್ರ ಮಾಡಿದ್ದರು. 2016ರಲ್ಲಿ ಅವರು ತಮಿಳು ಚಿತ್ರ ಇರೈವಿ ಮತ್ತು ಮಲಯಾಳಂ ಚಿತ್ರ ಪುಲಿಮುರುಗನ್‌ನಲ್ಲಿ ನಟಿಸಿ ಬ್ರೇಕ್‌ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+