Sanvi Sudeep: ತಾಯಿಯ ಜನ್ಮದಿನಕ್ಕೆ ಮಗಳು ಸಾನ್ವಿ ಸುದೀಪ್ ಕಡೆಯಿಂದ ಸ್ಪೆಷಲ್‌ ವಿಶ್: ಅತ್ತಿಗೆ ಎಂದ ಕಿಚ್ಚನ ಫ್ಯಾನ್ಸ್

ಬೆಂಗಳೂರು, ಜನವರಿ 07: 'ಮ್ಯಾಕ್ಸ್' ಸಿನಿಮಾ ಭರ್ಜರಿ ಪ್ರದರ್ಶನದ ಯಶಸ್ಸಿನಲ್ಲಿರುವ ಕಿಚ್ಚ ಸುದೀಪ್ ಅವರಿಗೆ ಸೋಮವಾರ (ಜ.06) ಮತ್ತೊಂದು ವಿಶೇಷ ದಿನವಾಗಿತ್ತು. ಯಾಕೆಂದರೆ ಅಂದು ಪತ್ನಿ ಪ್ರಿಯಾ ಸುದೀಪ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಈ ವೇಳೆ ಮಗಳು ಸಾನ್ವಿ ಸುದೀಪ್ ಅವರು ತಾಯಿಗೆ ವಿಶೇಷವಾಗಿ ಶುಭಾಷಯ ಕೋರಿದ್ದಾರೆ. ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 'ತಾಯಿಗಿಂತ ಸುಂದರ ಮತ್ಯಾರು ಇಲ್ಲ' ಎಂದು ಹೇಳಿದ್ದಾರೆ.

ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ನೆನ್ನೆ ಸೋಮವಾರ ಮನೆಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಅಮ್ಮನ ಬರ್ತ್‌ಡೆ ಗೆ ಮಗಳು ಸಾನ್ವಿ ಸುದೀಪ್ ಅವರು ಸುಂದರ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ವಿಶೇಷವಾಗಿ ಶುಭ ಹಾರೈಸಿದ್ದಾರೆ.

Sanvi Sudeep has Special Wished to Her Mother Priya Sudeep Know More

ತಮ್ಮ ಕೆನ್ನೆಗೆ ಮುತ್ತಿಡುವ ಅಮ್ಮನ ಫೋಟೋ ಶೇರ್ ಮಾಡಿಕೊಂಡಿರುವ ಶಾನ್ವಿ ಸುದೀಪ್ ಅವರು, ಪೋಸ್ಟ್ ಕೆಳಗೆ ಲೈನ್ಸ್ ಬರೆದು ತಾಯಿಯ ಜನ್ಮದಿನಕ್ಕೆ ವಿಶ್ ಮಾಡಿದ್ದಾರೆ. 'ಅಮ್ಮನಿಗಿಂತ ಸುಂದರ ಯಾರೂ ಇಲ್ಲ..ಬರ್ತ್‌ಡೆ ಗರ್ಲ್‌..ಹ್ಯಾಪಿ ಬರ್ತಡೇ ಅಮ್ಮ.. ಐ ಲವ್ ಯೂ' ಅಂತ ಬರೆದು ಶುಭ ಕೋರಿದ್ದಾರೆ.

ಅತ್ತಿಗೆಗೆ ಶುಭಕೋರಿದ ಕಿಚ್ಚನ ಫ್ಯಾನ್ಸ್

ಈ ಫೋಸ್ಟ್‌ಗೆ ಕಿಚ್ಚನ ಅಭಿಮಾನಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಗಂಟೆಗಳಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಲೈಕ್ಸ್‌ಗಳು ಬಂದಿವೆ. ಕಾಮೆಂಟ್‌ಗಳಲ್ಲಿ ಮತ್ತೊಂದು ವಿಶೇಷತೆ ಕಾಣಬಹುದಾಗಿದೆ. ಕಿಚ್ಚನ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ 'ವಿಶ್ ಯು ಹ್ಯಾಪಿ ಬರ್ತ್‌ಡೆ ಅತ್ತಿಗೆ, ಹುಟ್ಟು ಹಬ್ಬದ ಶುಭಾಷಯಗಳು ಮೇಡಂ' ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.

Sanvi Sudeep has Special Wished to Her Mother Priya Sudeep Know More

ನಟ ಸುದೀಪ್ ಅವರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫ್ಯಾಮಿಲಿಗೆ ಹೆಚ್ಚು ಗೌರವ ಕೊಡುತ್ತಾರೆ. ಆ ಕಾರಣದಿಂದಲೇ ಅವರ ಬಾಸ್ ಹೆಂಡತಿಯನ್ನು ಅತ್ತಿಗೆ ಎಂದು ಕರೆದಿದ್ದಾರೆ.

ತಾಯಿಯ ಫೋಟೋ ಗಿಫ್ಟ್: ಕಿಚ್ಚ ಭಾವುಕ

ಇತ್ತೀಚೆಗಷ್ಟೇ ಸುದೀಪ್ ಅವರ ತಾಯಿ ತೀರಿಕೊಂಡರು. ಅವರ ಅಗಲಿಕೆ ನೋವು ಕಿಚ್ಚನಲ್ಲಿದೆ. ಅಮ್ಮ ನನ್ನ ಅಹಂ ಎನ್ನುವ ಕಿಚ್ಚ ಸುದೀಪ್ ತಾಯಿಯನ್ನು ಹೆಚ್ಚಾಗಿಯೇ ಪ್ರೀತಿಸುತ್ತಿದ್ದರು. ತಾಯಿಯ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಕಿಚ್ಚ ನಿತ್ಯವು ತಾಯಿಯನ್ನು ನೆನಪಿಸಿಕೊಳ್ಳುತ್ತಲೇ ಇದ್ದಾರೆ. ಅವರ 'ಮ್ಯಾಕ್ಸ್' ಸಿನಿಮಾ ಯಶಸ್ವಿ ಪ್ರದರ್ಶನ ಕಂಡು ಮುನ್ನುಗ್ಗುತ್ತಿದೆ. 'ಮ್ಯಾಕ್ಸ್' ಸಂದರ್ಶನಗಳಲ್ಲಿ ಕಿಚ್ಚನಿಗೆ ತಾಯಿ ಫೋಟೋ ಗಿಫ್ಟ್ ರೂಪದಲ್ಲಿ ನೀಡಲಾಗಿದೆ. ಇದನ್ನು ಕಂಡು ಕಿಚ್ಚ ಭಾವುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+