ತಮಿಳು ಸಿನಿಮಾದಲ್ಲಿ ಶಿವರಾಜ್‌ಕುಮಾರ್, ಟ್ರೆಂಡ್ ಆಗ್ತಿದ್ದಾರೆ ಹ್ಯಾಟ್ರಿಕ್ ಹೀರೋ!
ನಟ ಶಿವರಾಜ್‌ಕುಮಾರ್ ಯಾವುದೇ ಪಾತ್ರಕ್ಕೂ ಸೈ ಅನ್ನುವಂತೆ ನಟನೆ ಮಾಡುತ್ತಾರೆ. ಈ ನಟ ದೇಶಾದ್ಯಂತ ದೊಡ್ಡ ಹೆಸರು ಗಳಿಸಿದ್ದಾರೆ. ಹತ್ತಾರು ವರ್ಷ ಕಾಲ ಕನ್ನಡಿಗರ ಮನಸ್ಸನ್ನ ಗೆದ್ದಿದ್ದ ನಟ ಶಿವರಾಜ್‌ಕುಮಾರ್ ಅವರು ಈಗ ತಮಿಳು ಸಿನಿಮಾ ರಂಗದಲ್ಲೂ ಹಲ್‌ಚಲ್ ಎಬ್ಬಿಸಿದ್ದಾರೆ. ಹೀಗಿದ್ದಾಗ ನಟ ಶಿವಣ್ಣ ಅಭಿನಯಿಸಿರುವ 2ನೇ ತಮಿಳು ಸಿನಿಮಾ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಇದೇ ಸಮಯದಲ್ಲಿ ಹ್ಯಾಟ್ರಿಕ್ ಹೀರೋ ಟ್ರೆಂಡ್‌ನಲ್ಲಿ ಇದ್ದಾರೆ.
ಕ್ಯಾಪ್ಟನ್ ಮಿಲ್ಲರ್ ಪ್ಯಾನ್ ಇಂಡಿಯಾ ಸಿನ್ಮಾ ಆಗಿದ್ದು ಕನ್ನಡ, ತಮಿಳು, ತೆಲುಗು, ಹಿಂದಿ ಹೀಗೆ ಎಲ್ಲ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಅರುಣ್ ಮಾಥೇಶ್ವರನ್ ಸಿನಿಮಾ ನಿರ್ದೇಶಿಸಿದ್ದರೆ, ಧನುಷ್ ಅವರು ಹೊಸ ಅವತಾರದಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ತೆರೆದುಕೊಳ್ಳುವ ಕಥೆ ಆಗಿದೆ 'ಕ್ಯಾಪ್ಟನ್ ಮಿಲ್ಲರ್'. ಹೀಗಾಗಿ ಸಂಕ್ರಾಂತಿಗೆ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಜೋರಾಗಿದೆ. ಅದ್ರಲ್ಲೂ ನಟ ಶಿವಣ್ಣ ಅವರ ಹೆಸರು ಎಲ್ಲೆಲ್ಲೂ ರಾರಾಜಿಸುತ್ತಿದೆ.

ಮಾವನ ಬಳಿಕ ಅಳಿಯನ ಸಿನಿಮಾ!
ಹ್ಯಾಟ್ರಿಕ್ ಹೀರೋ ಮತ್ತು ಸೆಂಚ್ಯುರಿ ಸ್ಟಾರ್ ಶಿವರಾಜ್‌ಕುಮಾರ್ ಅವ್ರು ಜಗತ್ತಿನಾದ್ಯಂತ ತಮ್ಮ ಅಬ್ಬರ ತೋರಿಸುತ್ತಿದ್ದಾರೆ. ಶಿವಣ್ಣ ಅವರ ಸಿನಿಮಾ ಕ್ರೇಜ್ ನೋಡಿದ ಭಾರತೀಯರು ಸಖತ್, ಅಂದ್ರೆ ಸಖತ್ ಫಿದಾ ಆಗಿದ್ದಾರೆ. ಅದರಲ್ಲೂ ಕೆಲವೇ ತಿಂಗಳ ಹಿಂದಷ್ಟೇ ರಿಲೀಸ್ ಆಗಿದ್ದ ನಟ ರಜನಿಕಾಂತ್ ಅವರ ತಮಿಳು ಸಿನಿಮಾ 'ಜೈಲರ್' ಅಂಗಳದಲ್ಲಿ ಶಿವಣ್ಣ ಮಿಂಚಿದ್ರು, ಇದೀಗ ರಜನಿಕಾಂತ್ ಅವರ ಅಳಿಯ ಧನುಷ್ ಸಿನಿಮಾದಲ್ಲಿ ಭರ್ಜರಿ ಸದ್ದು ಮಾಡ್ತಿದ್ದಾರೆ.
ಧನುಷ್ + ಶಿವಣ್ಣ ಕಾಂಬಿನೇಷನ್!
ಅಂದಹಾಗೆ, ಮೊದಲೇ ಹೇಳಿದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಇತ್ತೀಚೆಗೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್‌ರ ಸಿನಿಮಾದಲ್ಲಿ ನಟಿಸಿದ್ದರು. 'ಜೈಲರ್' ಸಿನಿಮಾದಲ್ಲಿ, ನಟ ಶಿವಣ್ಣ ಮಿಂಚು ಹರಿಸಿದ್ದರು. ಮಾವನ ನಂತರ, ಅಳಿಯನ ಸಿನಿಮಾದಲ್ಲೂ ಮಿಂಚಲು ನಟ ಶಿವಣ್ಣ ಸಿದ್ಧವಾಗಿ ನಿಂತಿದ್ದಾರೆ. ಶಿವಣ್ಣ, ತಮಿಳು ನಟ ಧನುಷ್ ಕಾಂಬಿನೇಷನ್‌ನ 'ಕ್ಯಾಪ್ಟನ್ ಮಿಲ್ಲರ್' ಹಾಡುಗಳು ವೈರಲ್ ಆಗುತ್ತಿವೆ. ಅದರಲ್ಲೂ ಈರಪ್ಪನು ಸಾಂಗ್‌ನಲ್ಲಿ, ಧನುಷ್ & ಶಿವಣ್ಣ ಸಖತ್ ಸ್ಟೆಪ್ ಹಾಕಿದ್ದಾರೆ.

ಹೀಗೆ ಎಲ್ಲೆಲ್ಲೂ ಸೌಂಡ್ ಮಾಡುತ್ತಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಹೊಸ ಇತಿಹಾಸವನ್ನು ನಿರ್ಮಿಸುವ ಸೂಚನೆ ನೀಡುತ್ತಿದೆ. ಈಗಾಗಲೇ ಸಿನಿಮಾ ರಿಲೀಸ್‌ಗೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಹಾಗೇ, ಅಭಿಮಾನಿಗಳು ಕೂಡ ಸಿನಿಮಾ ಕಣ್ತುಂಬಿಕೊಳ್ಳಲು ಇದೀಗ ಕಾಯುತ್ತಿದ್ದಾರೆ.












Click it and Unblock the Notifications