ಚಿಕ್ಕಣ್ಣ ಹೀರೋ ಆಗುವಾಗ ಕಾಲು ಎಳೆದವರೇ ಈಗ ಕಾಲ್‌ಶೀಟ್ ಕೇಳುತ್ತಿದ್ದಾರೆ!

ಚಿಕ್ಕಣ್ಣ ಈಗ ಫುಲ್ ಟೈಂ ಹೀರೋ, ಕಾಮಿಡಿ ನಟನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ಈ ನಟ ಇದೀಗ ಹೀರೋ ಆಗಿ ಮಿಂಚುತ್ತಿದ್ದಾರೆ. ಆದರೆ ಇದೇ ಚಿಕ್ಕಣ್ಣ ಅವರು ತಾವು ಹೀರೋ ಆಗಲು ಹೊರಟಾಗ ಆರಂಭದಲ್ಲಿ ಎಂತಹ ಚಾಲೆಂಜ್ ಎದುರಿಸಿದ್ದರು ಗೊತ್ತಾ? ಚಿಕ್ಕಣ್ಣ ಬಗ್ಗೆ ಯಾರೆಲ್ಲಾ ಕಾಮಿಡಿ ಮಾಡಿ ನಕ್ಕಿದ್ದರು ಗೊತ್ತಾ? ಅಂದು ಕಾಲು ಎಳೆದವರೇ ಈಗ ನಮಗೆ ಕಾಲ್‌ಶೀಟ್ ಬೇಕು ಅಂತಾ ಚಿಕ್ಕಣ್ಣ ಅವರ ಬಳಿ ಕೇಳಿದ್ದು ಏಕೆ? ಬನ್ನಿ ತಿಳಿಯೋಣ.

ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಸಮಸ್ಯೆಗಳು ಇರುತ್ತವೆ. ಹೀಗಾಗಿ ಇಲ್ಲಿ ಬೆಳೆದು ನಿಂತು ಸಕ್ಸಸ್ ಆಗೋದು ತುಂಬಾನೆ ಕಷ್ಟ. ಸಾಕಷ್ಟು ಸವಾಲು ಎದುರಿಸಿ ಗೆಲುವು ಪಡೆಯಬೇಕು. ಅಕಸ್ಮಾತ್ ಸ್ವಲ್ಪ ಹೆಚ್ಚುಕಮ್ಮಿ ಆದರೂ ಕೋಟಿ ಕೋಟಿ ಹಣ ಕಳೆದುಕೊಂಡು, ಬೀದಿಪಾಲು ಆಗೋದು ಗ್ಯಾರಂಟಿ. ಇದೇ ಕಾರಣಕ್ಕೆ ಬಣ್ಣದ ಲೋಕ ಅಂದ್ರೆ ಸಿನಿಮಾ ಲೋಕದಲ್ಲಿ ಭಾರಿ ಸವಾಲುಗಳು ಇರುತ್ತವೆ. ಹೀಗಿದ್ದಾಗ ನಟ ಚಿಕ್ಕಣ್ಣ ಸಾಕಷ್ಟು ಸವಾಲು ಎದುರಿಸಿ, ಇದೀಗ ದೊಡ್ಡ ಹೀರೋ ಆಗಿದ್ದಾರೆ. ಆದರೆ ಚಿಕ್ಕಣ್ಣ ಹೀರೋ ಆಗುತ್ತಿದ್ದೀನಿ ಅಂತಾ ಹೇಳಿದ್ದಾಗ, ಯಾರೆಲ್ಲಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಗೊತ್ತಾ? ಹಾಗೇ ಚಿಕ್ಕಣ್ಣಗೆ ಬೆಂಬಲ ನೀಡಿದ ಕನ್ನಡದ ಹೀರೋಗಳು ಯಾರು ಯಾರು? ಅವರೇ ಹೇಳಿದ್ದಾರೆ ಬನ್ನಿ ತಿಳಿಯೋಣ.

Sandalwood Star Chikkanna Tells That Who Are All Supported Him

ಚಿಕ್ಕಣ್ಣ ಅವರ ಕಾಲ್‌ಶೀಟ್ ಬೇಡುತ್ತಿದ್ದಾರೆ!

ಚಿಕ್ಕಣ್ಣ ಈಗ ಫುಲ್ ವೈರಲ್, ಕಾಮಿಡಿ ನಟನೊಬ್ಬ ಇದೀಗ ಕನ್ನಡದ ಯಶಸ್ವಿ ಹೀರೋ ಸಾಲಿಗೆ ಬಂದು ನಿಂತಿದ್ದಾರೆ. ಆದರೆ ಚಿಕ್ಕಣ್ಣ ತಾವು 'ಉಪಾಧ್ಯಕ್ಷ' ಸಿನಿಮಾದ ಮೂಲಕ, ತಾವು ಹೀರೋ ಆಗಲು ಹೊರಟಾಗ ಸಾಕಷ್ಟು ಚಾಲೆಂಜ್ ಎದುರಿಸಿದ್ದರಂತೆ. ನಟ ಚಿಕ್ಕಣ್ಣ, ನಾನು ಹೀರೋ ಆಗ್ತಾ ಇದ್ದೀನಿ ಅಂದಾಗ ಕಾಲು ಎಳೆದವರೆ ಜಾಸ್ತಿಯಂತೆ. ಆದರೆ ಎಲ್ಲರ ಕಾಲು ಎಳೆಯುತ್ತೆ ಕಾಲ ಅನ್ನೋ ರೀತಿ, ಅಂದು ಚಿಕ್ಕಣ್ಣ ಅವರ ಕಾಲು ಎಳೆದ ಕೆಲವರು ಈಗ ಅದೇ ಚಿಕ್ಕಣ್ಣ ಅವರ ಕಾಲ್‌ಶೀಟ್ ಬೇಕು ಅಂತಾ ಬೇಡುತ್ತಿದ್ದಾರಂತೆ.

ಹೀಗಾಗಿ ಕನ್ನಡಿಗರಿಗೆ ನಟ ಚಿಕ್ಕಣ್ಣ ಧನ್ಯವಾದವನ್ನ ಅರ್ಪಿಸಿದ್ದಾರೆ. 'ಉಪಾಧ್ಯಕ್ಷ' ಸಿನಿಮಾ ಗೆಲ್ಲಿಸಿದ್ದಕ್ಕೆ ನಟ ಚಿಕ್ಕಣ್ಣ ತುಂಬಾ ಖುಷಿಯಾಗಿದ್ದಾರೆ. ಹಾಗಾದರೆ 'ಉಪಾಧ್ಯಕ್ಷ' ಸಿನಿಮಾಗೆ ಚಿಕ್ಕಣ್ಣ ಹೀರೋ ಆಗಲು ಹೋದಾಗ, ಕನ್ನಡದ ಯಾವ ಯಾವ ಹೀರೋಗಳು ಸಪೋರ್ಟ್ ಮಾಡಿದ್ದರು ಗೊತ್ತಾ? ಅದನ್ನ ಖುದ್ದು ನಟ ಚಿಕ್ಕಣ್ಣ ಅವರೇ ಮನಸ್ಸು ತುಂಬಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿಗೆ ಮುಂದೆ ಓದೋಣ ಬನ್ನಿ.

ಚಿಕ್ಕಣ್ಣ ಬೆನ್ನಿಗೆ ನಿಂತ ಕನ್ನಡ ಚಿತ್ರರಂಗ!

ಅಂದಹಾಗೆ ಒಬ್ಬ ಕಾಮಿಡಿ ಸ್ಟಾರ್, ಹೀರೋ ಪಟ್ಟಕ್ಕೆ ಹೋಗುವಾಗ ಸವಾಲುಗಳು ಇದ್ದೇ ಇರುತ್ತವೆ. ಹಾಗೇ ಅಡ್ಡಿ ಮಾಡುವ ಕೆಲವರು ಕೂಡ ಇದ್ದೇ ಇರುತ್ತಾರೆ. ಹೀಗಿದ್ದಾಗ ಕೂಡ ನಟ ಚಿಕ್ಕಣ್ಣಗೆ ಹಲವಾರು ಹೀರೋಗಳು ಸಪೋರ್ಟ್ ಮಾಡಿದ್ದರಂತೆ. ಈ ಪೈಕಿ ಕನ್ನಡಿಗರ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ನಟ ದರ್ಶನ್, ಸುದೀಪ್, ಯಶ್, ಧ್ರುವ ಸೇರಿ, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಶ್, ಧನ್ವೀರ್, ಹಾಗೇ ಅನೇಕರು ನಟ ಚಿಕ್ಕಣ್ಣಗೆ ಬೆಂಬಲ ನೀಡಿದ್ದರಂತೆ. ಇವರೆಲ್ಲರ ಸಪೋರ್ಟ್‌ಗೆ ಚಿಕ್ಕಣ್ಣ ಖುಷಿಯಾಗಿದ್ದಾರೆ. ಹಾಗಾದರೆ ಈವರೆಗೂ ಚಿಕ್ಕಣ್ಣ ಹೀರೋ ಆಗಿರುವ ಮೊದಲ ಸಿನಿಮಾ 'ಉಪಾಧ್ಯಕ್ಷ' ಎಷ್ಟು ಕೋಟಿ ರೂಪಾಯಿ ಗಳಿಸಿದೆ ಗೊತ್ತಾ? ಮುಂದೆ ಓದಿ.

Sandalwood Star Chikkanna Tells That Who Are All Supported Him

ಈಗ 'ಉಪಾಧ್ಯಕ್ಷ' ಸಿನಿಮಾ ಮೂಲಕ ಚಿಕ್ಕಣ್ಣಗೆ ಹುರುಪು ಸಿಕ್ಕಿದೆ. 10 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆಯಂತೆ ಈ ಸಿನಿಮಾ. ಆದರೂ ಉಪಾಧ್ಯಕ್ಷ ಕಲೆಕ್ಷನ್ ಕುರಿತಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಿದ್ದರೂ ನಟ ಚಿಕ್ಕಣ್ಣಗೆ 'ಉಪಾಧ್ಯಕ್ಷ' ಸಿನಿಮಾ ನಟನೆಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಕೋಟಿ ಕೋಟಿ ರೂಪಾಯಿನ ಗಳಿಸಿರುವ ಬಗ್ಗೆ ಚರ್ಚೆ ಕೂಡ ಬಲು ಜೋರಾಗಿ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+