ಚಿಕ್ಕಣ್ಣ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ? ನಿರ್ಮಾಪಕ ಉಮಾಪತಿ ಹೇಳಿದ್ದೇನು?

ನಟ ಚಿಕ್ಕಣ್ಣ ಅಭಿನಯದ 'ಉಪಾಧ್ಯಕ್ಷ' ಸಿನಿಮಾ, ಎಷ್ಟು ಕೋಟಿ ದುಡಿದಿದೆ? ಎನ್ನುವ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿತ್ತು. ಒಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಕೆಲ ಸುದ್ದಿಗಳು ಓಡಾಡಿದ್ದವು. 'ಉಪಾಧ್ಯಕ್ಷ' ಸಿನಿಮಾ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಇದೀಗ ಆ ಬಗ್ಗೆ ಪರೋಕ್ಷವಾಗಿ ಉಪಾಧ್ಯಕ್ಷ ಚಿತ್ರದ ನಿರ್ಮಾಪಕರೇ ಮಾಹಿತಿ ನೀಡಿದ್ದಾರೆ!

ಅಂದಹಾಗೆ ನಟ ದರ್ಶನ್ ಅವರು ಹಾಗೂ ನಿರ್ಮಾಪಕ ಉಮಾಪತಿ ಅವರ ನಡುವೆ ಈಗ ಭಾರಿ ದೊಡ್ಡ ತಿಕ್ಕಾಟ ನಡೆಯುತ್ತಿದೆ. ಇದೇ ಸಮಯದಲ್ಲಿ ಅಕಸ್ಮಾತ್ ಆಗಿ 'ಉಪಾಧ್ಯಕ್ಷ' ಸಿನಿಮಾದ ಕಲೆಕ್ಷನ್ ರಿಪೋರ್ಟ್ ಹೊರಗೆ ಬಿತ್ತಾ? ಅನ್ನೋ ಅನುಮಾನ ಕೂಡ ಮೂಡಿದೆ. ಯಾಕಂದ್ರೆ ದರ್ಶನ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ, ನಿರ್ಮಾಪಕ ಉಮಾಪತಿ ಖುದ್ದಾಗಿ ಚಿಕ್ಕಣ್ಣನ ಸಿನಿಮಾ 'ಉಪಾಧ್ಯಕ್ಷ' ಗಳಿಸಿದ್ದು ಎಷ್ಟು ಕೋಟಿ ಅಂತಾ ಹೇಳಿದ್ರಾ? ಅನ್ನೋ ಚರ್ಚೆ ಶುರುವಾಗಿದೆ. ಹಾಗಾದ್ರೆ 'ಉಪಾಧ್ಯಕ್ಷ' ಸಿನಿಮಾ ಎಷ್ಟು ಕೋಟಿ ರೂಪಾಯಿಯನ್ನ ಗಳಿಸಿದೆ ಗೊತ್ತಾ?

Sandalwood Star Chikkanna Movie Upadhyaksha Collection Report

ಪ್ರೇಕ್ಷಕರಿಂದ ಸಿಕ್ಕಿದೆ ಫುಲ್ ಮಾರ್ಕ್ಸ್

ಚಿಕ್ಕಣ್ಣ ಎಷ್ಟೆಲ್ಲಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಹೀಗೆ ಪ್ರತಿ ಹಂತದಲ್ಲಿ ಚಿಕ್ಕಣ್ಣ ಕಷ್ಟ ಎದುರಿಸಿದ್ದ ಕಾರಣಕ್ಕೆ, ಇಂದು ಹೀರೋ ಆದ್ರೂ ಅವರು ಒಂಚೂರು ಬದಲಾಗಿಲ್ಲ. ಈ ನಟನ ಸಿನಿಮಾಗೆ ಕನ್ನಡ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇನ್ನು ಈ ಸಮಯದಲ್ಲೇ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ಅವರ ನಡುವೆ ಕಿರಿಕ್ ಬಲು ಜೋರಾಗಿದೆ. ಹೀಗಿದ್ದಾಗ ನಿರ್ಮಾಪಕ ಉಮಾಪತಿ ಪರೋಕ್ಷವಾಗಿ 'ಉಪಾಧ್ಯಕ್ಷ' ಗಳಿಸಿದ್ದು ಎಷ್ಟು ಕೋಟಿ ಅನ್ನೋದನ್ನ ಹೇಳಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ ಸುಮಾರು 10 ಕೋಟಿ ಕ್ರಾಸ್ ಆಗುತ್ತಿದೆ ಎನ್ನಲಾಗಿದೆ.

12-13 ಕೋಟಿ ರೂಪಾಯಿ ಗಳಿಕೆ?

ನಟ ಚಿಕ್ಕಣ್ಣ ಹೀರೋ ಆಗಿ ಅಭಿನಯ ಮಾಡಿದ 'ಉಪಾಧ್ಯಕ್ಷ' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಅದ್ಧೂರಿಯಾಗಿ ಕೋಟಿ ಕೋಟಿ ಗಳಿಸಿದೆ. ಈ ಸಮಯದಲ್ಲಿ ಚಿಕ್ಕಣ್ಣಗೆ ಕೂಡ ಬಂಪರ್ ಸಿಕ್ಕಿದೆ. ಉಮಾಪತಿ ಅವರು ಇದೀಗ ದರ್ಶನ್ ವಿಚಾರವಾಗಿ ಮಾತನಾಡುವಾಗ ಹೇಳಿರುವಂತೆ ನಟ, ಚಿಕ್ಕಣ್ಣ ಅವರ ಉಪಾಧ್ಯಕ್ಷ ಸಿನಿಮಾ, ಸುಮಾರು 12ರಿಂದ 13 ಕೋಟಿ ರೂಪಾಯಿ ಗಳಿಕೆ ಮಾಡಿದೆಯಾ? ಎಂಬ ಕುತೂಹಲವೂ ಮೂಡಿದೆ. ಆದರೆ ಈ ಬಗ್ಗೆ ಉಪಾಧ್ಯಕ್ಷ ಸಿನಿಮಾದ ನಿರ್ಮಾಪಕರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಚಿಕ್ಕಣ್ಣನ ಗ್ರ್ಯಾಂಡ್ ಎಂಟ್ರಿ ಹೇಗಿತ್ತು?

ಕನ್ನಡ ಸಿನಿಮಾ ಕ್ಷೇತ್ರಕ್ಕೆ ಚಿಕ್ಕಣ್ಣ 2011ರಲ್ಲಿ ಎಂಟ್ರಿ ಕೊಟ್ಟರು. ಕಿರಾತಕ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಬಂದರು. ನಂತರ ಚಿಕ್ಕಣ್ಣಗೂ ಸಾಲು ಸಾಲು ಆಫರ್ಸ್ ಬಂದವು. ನೋಡ ನೋಡುತ್ತಲೇ ದೊಡ್ಡದಾಗಿ ಕನ್ನಡ ಸಿನಿ ರಂಗದಲ್ಲಿ ಬಿಡುವೆ ಇಲ್ಲದ ನಟನಾಗಿ ಬೆಳೆದು ನಿಂತರು ಚಿಕ್ಕಣ್ಣ. ಈ ನಟ ಮೊದಲ ಬಾರಿ ಹೀರೋ ಆಗಿ ನಟಿಸಿದ್ದು ಉಪಾಧ್ಯಕ್ಷ ಮೂಲಕ ಅಬ್ಬರಿಸಿದ್ರು. ಇದೇ ಸಮಯದಲ್ಲಿ ಚಿಕ್ಕಣ್ಣ ಅವರ ಕಣ್ಣೀರಿನ ಕಥೆ ಕೂಡ ಜನರಿಗೆ ಭಾರಿ ನೋವು ನೀಡುತ್ತಿದೆ. ಜೊತೆಗೆ ಚಿಕ್ಕಣ್ಣನ ಬೆನ್ನಿಗೆ ನಿಂತಿದ್ದಾರೆ ಕನ್ನಡಿಗರು.

ಒಟ್ನಲ್ಲಿ ಬೇರೆ ಎಲ್ಲಾ ಏನೇ ಇರಲಿ, ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದ ನಟ ಚಿಕ್ಕಣ್ಣ ಇದೀಗ ದೊಡ್ಡ ಗೆಲುವು ಸಂಪಾದನೆ ಮಾಡಿದ್ದಾರೆ. ಅದರಲ್ಲೂ ಚಿಕ್ಕಣ್ಣ ಅವರ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ನಿರ್ಮಾಪಕರಿಗೆ ಕೂಡ ಚೆನ್ನಾಗಿ ದುಡ್ಡು ಬಂದಿದೆ. ಹೀಗೆ ಕಾಮಿಡಿ ಸ್ಟಾರ್ ಚಿಕ್ಕಣ್ಣ ಈಗ ಹೀರೋ ಆಗಿ ಅಬ್ಬರಿಸಿದ್ದಾರೆ. ಇದರ ಜೊತೆಗೆ ಚಿಕ್ಕಣ್ಣ ಜತೆ ನಟಿಸಿದ್ದ ಮಲೈಕಾ ವಸುಪಾಲ್ ಕೂಡ ಸಿನಿಮಾ ಕರಿಯರ್‌ನಲ್ಲಿ ಮಿಂಚುತ್ತಿದ್ದಾರೆ.

2011ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ

ಕನ್ನಡ ಸಿನಿಮಾ ಕ್ಷೇತ್ರಕ್ಕೆ ನಟ ಚಿಕ್ಕಣ್ಣ 2011ರಲ್ಲಿ ಎಂಟ್ರಿ ಕೊಟ್ಟರು. ಅವರು ಕಿರಾತಕ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಬಳಿಕ ಚಿಕ್ಕಣ್ಣಗೆ, ಸಾಲು ಸಾಲು ಆಫರ್ಸ್ ಬಂದವು. ನೋಡ ನೋಡುತ್ತಲೇ ದೊಡ್ಡದಾಗಿ, ಕನ್ನಡ ಸಿನಿ ರಂಗದಲ್ಲಿ ಬಿಡುವೆ ಇಲ್ಲದ ನಟನಾಗಿ ಬೆಳೆದು ನಿಂತರು ಚಿಕ್ಕಣ್ಣ. ಈ ನಟ ಮೊದಲ ಬಾರಿ ಹೀರೋ ಆಗಿ ನಟಿಸಿದ್ದು, 'ಉಪಾಧ್ಯಕ್ಷ' ಮೂಲಕ ಅಬ್ಬರಿಸಿದ್ದಾರೆ. ಇದೇ ಸಮಯದಲ್ಲಿ ಚಿಕ್ಕಣ್ಣ ಅವರ ಕಣ್ಣೀರಿನ ಕಥೆ ಕೂಡ ಜನರಿಗೆ ಭಾರಿ ನೋವು ನೀಡುತ್ತಿದೆ. ತಮ್ಮ ಜೀವನದಲ್ಲಿ 45 ರೂಪಾಯಿಗೆ ಪರದಾಡುತ್ತಿದ್ದ ನಟ ಚಿಕ್ಕಣ್ಣ ಇದೀಗ ಕೋಟಿ ಕೋಟಿ ಗಳಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+