ಅಂದದ ಅದಿತಿಗೆ ಚೆಂದದ ಸೀಮಂತ: ನೋಡ ನೋಡ ಎಷ್ಟು ಚೆಂದ!
ಅದಿತಿ ಪ್ರಭುದೇವ ಅಂದ್ರೆ ಕೋಟ್ಯಂತರ ಅಭಿಮಾನಿಗಳ ಪಾಲಿನ ಫೇವರಿಟ್ ನಟಿ. ಅದಿತಿಗೆ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯದಲ್ಲೂ ಭರ್ಜರಿ ಫ್ಯಾನ್ಸ್ ಇದ್ದಾರೆ. ಹೀಗೆ ಕನ್ನಡ ಸಿನಿ ರಂಗದಲ್ಲಿ ಭರ್ಜರಿ ಸದ್ದು ಮಾಡಿದ್ದ ನಟಿ ಅದಿತಿ ಪ್ರಭುದೇವಗೆ ಕೆಲ ವರ್ಷಗಳ ಹಿಂದಷ್ಟೇ ಮದುವೆ ಆಗಿತ್ತು, ಈಗ ಅದಿತಿ ಪ್ರಭುದೇವ ಫ್ಯಾಮಿಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದು ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ.
ಹೌದು 2022 ರ ನವೆಂಬರ್‌ನಲ್ಲಿ ಉದ್ಯಮಿ ಯಶಸ್ ಅವರನ್ನು ಅದಿತಿ ಮದುವೆ ಆದರು. ಹೀಗೆ ಅದಿತಿ ಪ್ರಭುದೇವ ಜೋಡಿ ಅದ್ಧೂರಿಯಾಗಿ ಮದುವೆಯಾಗಿ ಕೋಟ್ಯಂತರ ಅಭಿಮಾನಿಗಳ, ಆಶೀರ್ವಾದ ಪಡೆದಿತ್ತು. ಮದುವೆಗೆ ಕೂಡ ಲಕ್ಷಾಂತರ ಜನ ಬಂದು ಹರಸಿದ್ದರು.

ನಟಿಯ ಜೀವನ ಕೂಡ ಆನಂದವಾಗಿ ಸಾಗಿದೆ. ಇನ್ನು ಬೆಂಗಳೂರಿನಲ್ಲೇ ಉದ್ಯಮಿ ಯಶಸ್ ಜೊತೆಗೆ, ಅದಿತಿ ಅವರು ವಾಸ ಮಾಡುತ್ತಿದ್ದಾರೆ. ಇದೀಗ ಅವರ ಸೀಮಂತ ಶಾಸ್ತ್ರ ಕೂಡ ಸಂಭ್ರಮ & ಸಡಗರದಿಂದ ಬೆಂಗಳೂರಿನಲ್ಲಿ ನೆರವೇರಿದೆ.
ಹಸಿರು ಸೀರೆಯಲ್ಲಿ ಅದಿತಿ ಮಿಂಚಿಂಗ್
ತನ್ನ ಪತಿಯ ಜೊತೆ ಅದಿತಿ ಅವರ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಇನ್ನು ಈ ಫೋಟೋ ಈಗ ವೈರಲ್ ಆಗುತ್ತಿವೆ. ನಟಿ ಅದಿತಿ ಪ್ರಭುದೇವ ಅವರು ಹಸಿರು ಬಣ್ಣದ ಸೀರೆ, ಉಟ್ಟು ಸೀಮಂತ ಶಾಸ್ತ್ರದಲ್ಲಿ ಕಂಗೊಳಿಸಿದರು. ಜನವರಿ 1, 2024ರಂದು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಅದಿತಿ ಪ್ರಭುದೇವ ಅವರು ಪೋಸ್ಟ್ ಒಂದನ್ನ ಹಂಚಿಕೊಂಡಿದ್ದರು. ಇದಾದ ನಂತರ ಅದಿತಿ ಅವರ ಫ್ಯಾನ್ಸ್ ಕೂಡ ತಮ್ಮ ನೆಚ್ಚಿನ ನಟಿಗೆ ವಿಶ್ ಮಾಡಿದ್ದರು. ಈಗ ಅದಿತಿ ಅವರ ಸೀಮಂತ ಶಾಸ್ತ್ರ ಸಂಭ್ರಮದಿಂದ ನಡೆದಿದೆ.

ಅದಿತಿ ಸೀರೆ ಫುಲ್ ವೈರಲ್!
ಸೋಷಿಯಲ್ ಮೀಡಿಯಾದಲ್ಲಿ ಅದಿತಿ ಅವರ ಸೀಮಂತ ಶಾಸ್ತ್ರದ ಸೀರೆಯ ಕಾಂಬಿನೇಷನ್ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ, ಹಸಿರು & ಕೆಂಪು ಕಾಂಬಿನೇಷನ್ ಸೀರೆಯಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದು. ಬಿಳಿ ಬಣ್ಣದ ಶೇರ್ವಾನಿಯಲ್ಲಿ ಯಶಸ್ ಕಾಣಿಸಿಕೊಂಡಿದ್ದಾರೆ ಹಾಗೇ ಈ ಮುದ್ದಾದ ಜೋಡಿಗೆ ಜನರು ಕೂಡ ಮನಸ್ಸು ತುಂಬಿ ಹಾರೈಸಿದ್ದಾರೆ. ಹಾಗೂ, ತಮ್ಮ ನೆಚ್ಚಿನ ನಟಿ ಅದಿತಿ ಪ್ರಭುದೇವ ಅವರ ಜೀವನ ಹೀಗೆ ನೂರು ಕಾಲ ಸುಖವಾಗಿರಲಿ ಅಂತಾ ಜನರು ಹಾರೈಸಿದ್ದಾರೆ.
2017ರಲ್ಲಿ ಧೈರ್ಯಂ ಸಿನಿಮಾ ಮೂಲಕ ನಟಿ ಅದಿತಿ ಪ್ರಭುದೇವ ಅವರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು, ಆ ಬಳಿಕ ಬಾಜಾರ್, ಆಪರೇಷನ್ ನಕ್ಷತ್ರ, ಓಲ್ಡ್ ಮಾಂಕ್, ತೋತಾಪುರಿ ಸೇರಿದಂತೆ ಥ್ರಿಪಲ್ ರೈಡಿಂಗ್, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿ ಗುಡ್ಡ, ತೋತಾಪುರಿ ಚಾಪ್ಟರ್ 2 ಸಿನಿಮಾಗಳಲ್ಲಿ ಮಿಂಚಿದ್ದರು. ಇದೀಗ ಅದಿತಿ ಅವರು, ಮೊದಲ ಮಗುವಿಗಾಗಿ ನಿರೀಕ್ಷೆಯಲ್ಲಿ ಇದ್ದು. ಅದಿತಿ ಸೀಮಂತ ಕಾರ್ಯ ಕೂಡ ಅದ್ಧೂರಿಯಾಗಿ ನಡೆದಿದೆ.












Click it and Unblock the Notifications