‘ಬಿಸಿ-ಬಿಸಿ Ice-Cream’ ಅಬ್ಬರ, ಅರವಿಂದ್ ಐಯ್ಯರ್ & ಸಿರಿ ಮಿಂಚಿಂಗ್!
ಕನ್ನಡ ಸಿನಿಮಾ ರಂಗಕ್ಕೆ 2024 ಸಿಕ್ಕಾಪಟ್ಟೆ ಕಲರ್‌ಫುಲ್ ಆಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಹೀಗೆ ಹೊಸ ವರ್ಷಕ್ಕೆ ಕಾಲಿಟ್ಟ ಘಳಿಗೆಯಲ್ಲಿ ಹೊಸ ಹೊಸ ಸಿನಿಮಾಗಳ ಫಸ್ಟ್ ಲುಕ್ ಮತ್ತು ಟೀಸರ್ ಹಾಗೂ ಟ್ರೇಲರ್ ರಿಲೀಸ್ ಆಗಿವೆ. ಇದೇ ರೀತಿ 'ಬಿಸಿ-ಬಿಸಿ Ice-Cream' ಕಥೆಯನ್ನ ಕನ್ನಡಿಗರ ಎದುರು ಹೇಳೋದಿಕ್ಕೆ ಸಿದ್ದವಾಗ್ತಿದ್ದಾರೆ ಅರವಿಂದ್ ಶಾಸ್ತ್ರಿ! ಹಾಗಿದ್ರೆ ಏನಿದು ಹೊಸ ಕಥೆ? 'ಬಿಸಿ-ಬಿಸಿ Ice-Cream' ಕಥೆ ಏನು? ಬನ್ನಿ ತಿಳಿಯೋಣ.
ಅಂದಹಾಗೆ ಅರವಿಂದ್ ಶಾಸ್ತ್ರಿ ತಮ್ಮ ವಿಭಿನ್ನ ಟೈಟಲ್ ಮೂಲಕ ಕನ್ನಡಿಗರ ಗಮನ ಸೆಳೆದು, ಮಿಂಚಿದ್ದಾರೆ. ಹಿಂದೆ ಕಹಿ & ಅಳಿದು ಉಳಿದವರು ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಶಾಸ್ತ್ರಿ ಅವರು ಹೊಸ ಕಥೆಗೆ ಸಿದ್ಧವಾಗಿದ್ದಾರೆ. 'ಬಿಸಿ-ಬಿಸಿ Ice-Cream' ಗೆ ಕಥೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆ ಸಂಕಲನ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ಹೊಸ ವರ್ಷಕ್ಕೆ ಟೈಟಲ್ ರಿವೀಲ್ ಮಾಡಿರುವ ಸಿನಿಮಾ ತಂಡವು, ಈಗಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಬಿಡುಗಡೆ ತಯಾರಿ ಕೂಡ ಮಾಡಿಕೊಂಡಿದೆ.

ಏನಿದು ಐಸ್ ಕ್ರೀಂ ಕಥೆ?
ಕನ್ನಡ ಸಿನಿಮಾ ರಂಗದಲ್ಲಿ 2023 ರಲ್ಲಿ ವಿಭಿನ್ನ ಕಥೆಯನ್ನ ಮತ್ತು ಡಿಫರೆಂಟ್ ಡಿಫರೆಂಟ್ ಟೈಟಲ್‌ನ ಒಳಗೊಂಡಿದ್ದ ಸಿನಿಮಾಗಳು ರಿಲೀಸ್ ಆಗಿ ಸದ್ದು ಮಾಡಿದ್ದವು. ಅದೇ ರೀತಿ ಇದೀಗ 2024 ರಲ್ಲೂ ಇಂತಹ ಸ್ಪೆಷಲ್ ಸಿನಿಮಾಗಳು ಬರಲು ಸಜ್ಜಾಗಿವೆ. ಇನ್ನ ಈ ಐಸ್ ಕ್ರೀಂ ಕಥೆಗೆ ಬರೋದಾದ್ರೆ ಐಸ್ ಕ್ರೀಂ ಬಿಸಿ ಬಿಸಿಯಾಗಿ ಇರುತ್ತಾ? ಇಲ್ಲ ಇಲ್ಲ ಈ ಸಿನಿಮಾದ ಕಥೆಗೆ, ಸೂಕ್ತ ಎನ್ನುವ ಕಾರಣಕ್ಕೆ ಅರವಿಂದ್ ಈ ಟೈಟಲ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ, ಈ ಚಿತ್ರದಲ್ಲಿ ಅರವಿಂದ್ ಐಯ್ಯರ್ & ಸಿರಿ ರವಿಕುಮಾರ್ ಜೋಡಿಯಾಗಿ ನಟಿಸುತ್ತಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವುದು ಗಮನ ಸೆಳೆದಿದೆ. ಈ ಮೂಲಕ ಮತ್ತೊಂದು, ವಿಭಿನ್ನವಾದ ಸಿನಿಮಾ ಕೊಡಲು ಈ ತಂಡ ಸಿದ್ಧವಾಗಿದೆ.
4 ವರ್ಷದ ಬಳಿಕ ಕಂಬ್ಯಾಕ್!
ಅಷ್ಟಕ್ಕೂ ಅರವಿಂದ್ ಶಾಸ್ತ್ರಿ ಒಂದು ಗ್ಯಾಪ್ ನಂತರ ಈಗ ಮತ್ತೆ ಕಂಬ್ಯಾಕ್ ಮಾಡ್ತಿದ್ದಾರೆ. 4 ವರ್ಷದ ನಂತರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅರವಿಂದ್ ಶಾಸ್ತ್ರಿ, ಒಂದೊಳ್ಳೆ ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕ ಪ್ರಭು ಎದುರು ಹಾಜರಾಗುತ್ತಿದ್ದಾರೆ. ಇನ್ನ ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಈ ಚಿತ್ರಕ್ಕೆ ಇದ್ದು. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷರ ಭಾರಧ್ವಾಜ್ 'ಬಿಸಿ-ಬಿಸಿ Ice-Cream' ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು ಸುತ್ತಮುತ್ತ ಶೂಟ್ ನಡೆಸಲಾಗಿದೆ, ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ ಈ ಸಿನಿಮಾ.












Click it and Unblock the Notifications