Soujanya: 'ಸೌಜನ್ಯ' ಕಥೆ ಹೇಳಲು ಹೊರಟ ನಟಿ ಹರ್ಷಿಕಾ ಪೂಣಚ್ಚ

ಸೋಶಿಯಲ್‌ ಮೀಡಿಯಾದಲ್ಲಿ ಈಗ ಎಲ್ಲೆಡೆ ಜಸ್ಟೀಸ್‌ ಫಾರ್‌ ಸೌಜನ್ಯ ಅಭಿಯಾನ ಜೋರಾಗಿದೆ. ಹಲವು ಮಂದಿ ಈ ವಿಚಾರದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಕೂಡ ಸೌಜನ್ಯ ವಿಚಾರವಾಗಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಮದುವೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಚಿತ್ರರಂಗದಿಂದ ತುಸು ಬ್ರೇಕ್‌ ಪಡೆದಿದ್ದ ಹರ್ಷಿಕಾ ಅವರು ಇದೀಗ ನಿರ್ದೇಶನದತ್ತ ಮುಖ ಮಾಡಿದ್ದಾರೆ. ನೈಜ ಘಟನೆಯಾಧಾರಿತ ಸಿನಿಮಾವೊಂದಕ್ಕೆ ಆಕ್ಷನ್‌ ಕಟ್‌ ಹೇಳಲು ರೆಡಿಯಾಗಿದ್ದು, ಈ ಸಿನಿಮಾಗೆ "ಚಿ:ಸೌಜನ್ಯ" ಎಂದು ಟೈಟಲ್‌ ಇಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ.

ಸ್ಯಾಂಡಲ್‌ವುಡ್‌ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹರ್ಷಿಕಾ ಅವರು ಇದೀಗ ನಿರ್ದೇಶಕಿಯಾಗಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನಕ್ಕೆ ನೈಜ ಘಟನೆ ಆಧಾರಿತ ಹಾಗೂ ಕ್ರೈಂ ಥ್ರಿಲ್ಲರ್‌ ಕಥೆಗೆ ಕೈಹಾಕಿದ್ದಾರೆ. ಈ ಸಿನಿಮಾದ ಪೋಸ್ಟರ್‌ ಹಂಚಿಕೊಂಡಿರುವ ಅವರು "ಹೊಸ ಆರಂಭಗಳು, ನನ್ನ ಮೊದಲ ನಿರ್ದೇಶನಕ್ಕೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು ಎಂದು ಹರ್ಷಿಕಾ ಕೇಳಿಕೊಂಡಿದ್ದಾರೆ.

Sandalwood Actress Harshika Poonacha Announces Directorial Debut With Soujanya

ಇನ್ನು ಈ ಚಿತ್ರಕ್ಕೆ "ಚಿ:ಸೌಜನ್ಯ" ಎಂದು ಹೆಸರಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣವು ಸಖತ್‌ ಸದ್ದು ಮಾಡುತ್ತಿದೆ. ಎಲ್ಲೆಡೆ ಸೌಜನ್ಯಗೆ ನ್ಯಾಯ ಬೇಕು ಎನ್ನುವ ಘೋಷಣೆಗಳು ಕೇಳಿಬರುತ್ತಿವೆ. ಯೂಟ್ಯೂಬ್‌ನಲ್ಲಿ ಇತ್ತೀಚೆಗೆ ಈ ಕೇಸ್‌ಗೆ ಸಂಬಂಧಿಸಿದ ವಿಡಿಯೋ ಕೂಡ ಸಂಚಲನ ಸೃಷ್ಟಿಸಿರುವುದು ಗೊತ್ತೇ ಇದೆ. ಈ ಬೆಳವಣಿಗೆ ನಡುವೆಯೇ ಹರ್ಷಿಕಾ ಅವರು ಈ ಸಿನಿಮಾ ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಈ ಸಿನಿಮಾದ ಟೈಟಲ್‌ನಲ್ಲೂ ಸೌಜನ್ಯ ಹೆಸರಿರುವುದರಿಂದ ಅದೇ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

Sandalwood Actress Harshika Poonacha Announces Directorial Debut With Soujanya

ಈ ಸಿನಿಮಾದ ಪೋಸ್ಟರ್‌ನಲ್ಲಿ ಹೆಣ್ಣುಮಗುವಿನ ಮೇಲಿನ ದೌರ್ಜನ್ಯ ಚಿತ್ರಣವಾಗಿದೆ. ಇದರಲ್ಲೇ ಜನರಲ್ಲೇ ಬಾಯಿಮುಚ್ಚಿಕೊಂಡಿರುವ ಚಿತ್ರಗಳೂ ಇವೆ. ಹಾಗಾಗಿ ಧರ್ಮಸ್ಥಳದ ಸೌಜನ್ಯ ಕಥೆಯನ್ನೇ ಹರ್ಷಿಕಾ ಪೂಣಚ್ಚ ಹೇಳಲು ಹೊರಟಿದ್ದಾರೆ. ಈ ಪೋಸ್ಟರ್‌ ಕೂಡ ಈ ನೈಜ ಘಟನೆಗೆ ಹೋಲುವಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. "ಚಿ:ಸೌಜನ್ಯ-ಒಂದು ಹೆಣ್ಣಿನ ಕಥೆ" ಎಂಬ ಪೋಸ್ಟರ್‌ ಎಲ್ಲೆಡೆ ವೈರಲ್‌ ಕೂಡ ಆಗುತ್ತಿದೆ.

ಹರ್ಷಿಕಾ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ನಟ ಕಿಶೋರ್ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಇಬ್ಬರು ಹೀರೋಯಿನ್‌ಗಳು ಕೂಡ ಇದ್ದಾರೆ. ವಿಲನ್ ಪಾತ್ರಗಳಲ್ಲಿ ಉಗ್ರಂ ಮಂಜು, ಕಾಕ್ರೊಚ್ ಸುದೀ ಸೇರಿದಂತೆ ಹಲವರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Sandalwood Actress Harshika Poonacha Announces Directorial Debut With Soujanya

ಹರ್ಷಿಕಾ ಪತಿ ನಿರ್ಮಾಪಕ ಭುವನ್‌ ಪೊನ್ನಣ್ಣ ಹಾಗೂ ಮಧುಸ್ವಾಮಿ, ಗಣೇಶ್‌ ಮಹದೇವ್‌ ಅವರು ಜೊತೆಗೂಡಿ ಈ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಕಂಸಾಳೆ ಫಿಲ್ಮ್ಸ್‌ ಹಾಗೂ ಭುವನಂ ಎಂಟರ್‌ಟೈನ್‌ಮೆಂಟ್‌ ಅಡಿಯಲ್ಲಿ ಈ ಸಿನಿಮಾ ತೆರೆಕಾಣಲಿದೆ. ಹಾಗಾಗಿ ಆದಷ್ಟು ಬೇಗ ಈ ಸಿನಿಮಾ ನೋಡಬೇಕು ಎಂದು ಜನ ಕಾತರದಿಂದ ಕಾದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+