'ಬದುಕಿದ್ದಾರೆ ಆದ್ರೆ ನಮ್ಮ ಜೊತೆಗಿಲ್ಲ..ಅವರು ವಿಕಲ ಚೇತನ': ತಂದೆ ಬಗ್ಗೆ ಮೌನ ಮುರಿದ ಅಮೃತಾ

ಕನ್ನಡ ಚಿತ್ರರಂಗದ ನಟಿ ಅಮೃತಾ ಅಯ್ಯಂಗಾರ್‌ ಈಗಾಗಲೇ ತಮ್ಮ ವೈಯಕ್ತಿಕ ಜೀವನ ಅದರಲ್ಲೂ ತಮ್ಮ ತಾಯಿ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ತಂದೆ ಬಗ್ಗೆ ಸವಿವರವಾಗಿ ಮಾತನಾಡಿದ್ದು, ತಾಯಿ ತಂದೆಯಿಂದ ದೂರಾಗಿದ್ದೇಕೆ ಎನ್ನುವುದರ ಬಗ್ಗೆ ಕೂಡ ಅಮೃತಾ ಹೇಳಿಕೊಂಡಿದ್ದಾರೆ.

ಗೋಲ್ಡ್‌ ಕ್ಲಾಸ್ ವಿದ್‌ ಮಯೂರ ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅವರು, 'ನಮ್ಮ ತಾಯಿಯನ್ನು ನನ್ನ ಸ್ನೇಹಿತೆಯರೆಲ್ಲಾ ಡಾನ್ ಎಂದು ಕರೆಯುತ್ತಾರೆ. ಅವರು ತುಂಬಾ ಇಂಡಿಪೆಂಡೆಂಟ್ ವುಮೆನ್. ಅವರಿಗಿಂತ ನನಗೆ ಬೇರೆ ಸ್ಫೂರ್ತಿ ಬೇಡ. 28 ವರ್ಷದಿಂದ ಅವರು ಒಬ್ಬೊರೇ ನನ್ನನ್ನು ನೋಡಿಕೊಂಡಿರುವುದು. ನಮ್ಮ ತಂದೆ ಇನ್ನು ಬದುಕಿದ್ದಾರೆ. ಆದರೆ ನಮ್ಮ ಜೊತೆ ಇಲ್ಲ. ನಾನು ಸಿಂಗಲ್ ಪೇರೆಂಟ್ ಕಿಡ್ ಎಂದರು.

Sandalwood Actress Amrutha Iyengar Opens Up About Her Father

19 ವರ್ಷದಿಂದ ಅಮ್ಮ ದುಡಿಯಲು ಆರಂಭಿಸಿದರು. ನಮ್ಮ ತಾಯಿಗೆ ಸತ್ಯ ಮುಚ್ಚಿಟ್ಟು ಮದುವೆ ಮಾಡಿದರು. ಬಳಿಕ ಅವರಿಗೆ ಎಲ್ಲಾ ಗೊತ್ತಾಯ್ತು. ಒಂದು ಸಲ ಈ ಮನುಷ್ಯನ ಜೊತೆ ಇರೋಕೆ ಆಗಲ್ಲ ಅಂತಾ ನಿರ್ಧಾರ ಮಾಡಿದವರು 26 ವರ್ಷಗಳಿಂದ ನಮ್ಮ ತಾಯಿ ನಮ್ಮ ತಂದೆ ಮುಖ ನೋಡಿಲ್ಲ ಎಂದು ಹೇಳಿದರು.

ನಮ್ಮ ತಾಯಿ ಒಂದು ನಿರ್ಧಾರ ತೆಗೆದುಕೊಂಡರೆ ಮುಗೀತು. ಅದನ್ನು ಬದಲಾಯಿಸಲ್ಲ. ನನ್ನ ತಂದೆ-ತಾಯಿ ದೂರಾದಾಗ ನನಗೆ 5 ವರ್ಷ ವಯಸ್ಸು. ನಾನು ನಮ್ಮ ತಂದೆಯನ್ನು ಭೇಟಿ ಮಾಡುತ್ತೇನೆ, ಮಾತನಾಡುತ್ತೇನೆ. ಅಮ್ಮಾನೂ ಅದನ್ನೇ ಹೇಳುತ್ತಾರೆ ನನಗೂ ಅವರಿಗೂ ಸಮಸ್ಯೆ ಇದೆ. ನಿನಗಲ್ಲ. ಹೋಗು ಮಾತಾಡು ಅಂತಾರೆ.

ಈಗಲೂ ನಮ್ಮಮ್ಮ ಬಸ್‌ನಲ್ಲಿ ಓಡಾಡುತ್ತಾರೆ. ಸುಸ್ತಾದರೂ ಒಂದು ಎಳನೀರು ಕುಡಿಯಲ್ಲ. ನನಗಾಗಿ ಒಂದೊಂದು ರೂಪಾಯಿ ಉಳಿಸುತ್ತಾರೆ. ಅವರ ಸಂಪೂರ್ಣ ಜೀವನವನ್ನು ನನಗೆ ಅರ್ಪಿಸಿಬಿಟ್ಟಿದ್ದಾರೆ. 19 ವರ್ಷಕ್ಕೆ ದುಡಿಯಲು ಶುರು ಮಾಡಿ ಇಬ್ಬರೂ ತಂಗೀರು, ಮೂವರು ತಮ್ಮಂದಿರ ಮದುವೆ ಮಾಡಿದ್ದಾರೆ ಎಂದು ತಮ್ಮ ತಾಯಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

Sandalwood Actress Amrutha Iyengar Opens Up About Her Father

ಈಗ ನನಗೆ ಅನಿಸುತ್ತದೆ. ನಾವು ಸ್ಪೂರ್ತಿಗಾಗಿ ಎಲ್ಲೆಲ್ಲೋ ಹುಡುಕುತ್ತೀವಿ. ನಮ್ಮ ತಾಯಿಗಿಂತ ಬೇರೆ ಬೇಕಿಲ್ಲ. ನಮ್ಮ ತಾಯಿ ಮನಸ್ಸು ಮಾಡಿದ್ದರೆ ಬೇರೆ ಮದುವೆ ಆಗಬಹುದಿತ್ತು. ನನಗಾಗಿ ಆ ನಿರ್ಧಾರಕ್ಕೆ ಬರಲಿಲ್ಲ. ನನಗೆ ತಂದೆ ಇಲ್ಲ ಎನ್ನುವ ಕೊರಗು ಇಲ್ಲದಂತೆ ಸಾಕಿದರು. ನಾನು 9 ತರಗತಿಯಲ್ಲಿದ್ದಾಗ ಅಮ್ಮನ ಬಳಿಯೇ ಅಪ್ಪನ ಅಡ್ರೆಸ್ ಪಡೆದು ಪತ್ರ ಬರೆದಿದ್ದೆ. ಬಳಿಕ ಅವರನ್ನು ಭೇಟಿ ಮಾಡಿದೆ. ಅವರು ಮದುವೆ ಆಗಿಲ್ಲ, ಅವರು ವಿಕಲ ಚೇತನ. ಅವರಿಗೆ ನಡೆಯಲು ಆಗುವುದಿಲ್ಲ. ಆದರೆ ಒಳ್ಳೆ ಚಿತ್ರ ಬಿಡಿಸುತ್ತಾರೆ ಎಂದು ತಂದೆ ಬಗ್ಗೆ ಅಮೃತಾ ಭಾವುಕರಾಗಿ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+