ರಂಗಾಯಣ ರಘು ತಮ್ಮದೇ ಕಾಮಿಡಿ ನೋಡಿ ತಾವೇ ನಕ್ಕಿದ್ದು ಯಾಕೆ?

ರಂಗಾಯಣ ರಘು ಅವರು ಕನ್ನಡ ಸಿನಿಮಾ ರಂಗದ ಕಾಮಿಡಿ ಕಿಂಗ್, ಯಾಕಂದ್ರೆ ಹಿರಿಯ ನಟ ರಂಗಾಯಣ ರಘು ಕನ್ನಡ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಾರೆ. ತಮ್ಮ ಕಾಮಿಡಿ & ಪಂಚಿಂಗ್ ಡೈಲಾಗ್ ಮೂಲಕ ಕನ್ನಡಿಗರ ಮನಸ್ಸು ಸೆಳೆದಿದ್ದಾರೆ. ಹೀಗಿದ್ದಾಗ ಇಂಟರ್ನೆಟ್ ಪೂರ್ತಿ ರಂಗಾಯಣ ರಘು ಅವರ ಕಾಮಿಡಿ ವಿಡಿಯೋಗಳೇ ತುಂಬಿ ಹೋಗಿವೆ. ಇನ್ನು ಆ ವಿಡಿಯೋಗಳನ್ನ ಸ್ವತಃ ರಂಗಾಯಣ ರಘು ಅವರೇ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.

ಅಷ್ಟಕ್ಕೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಅಭಿಯನದ ಮೂಲಕ ಛಾಪು ಮೂಡಿಸಿದ ರಂಗಾಯಣ ರಘು ನೂರಾರು ಸಿನಿಮಾದಲ್ಲಿ ಮಿಂಚಿದ್ದಾರೆ. ಅದ್ರಲ್ಲೂ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳಲ್ಲಿ ರಂಗಾಯಣ ರಘು ಅವರ ಪೋಷಕ ಪಾತ್ರ ನೋಡುವುದೇ ಒಂದು ಹಬ್ಬ. ಪೋಷಕ ಪಾತ್ರಕ್ಕೆ ಜೀವ ತುಂಬುತ್ತಾ ಕನ್ನಡ ಸಿನಿ ಪ್ರೇಕ್ಷಕರನ್ನ ರಂಜಿಸುತ್ತಿದ್ದ ರಂಗಾಯಣ ರಘು ಅವರು ಫುಲ್ ಟೈಂ ಹೀರೋ ಆಗ್ತಿದ್ದಾರೆ. ಅವರ ಸಿನಿಮಾ 'ಶಾಖಾಹಾರಿ' ಇನ್ನೇನು ರಿಲೀಸ್ ಆಗಲು ರೆಡಿಯಾಗುತ್ತಿದೆ. ಆದರೆ ಇದೇ ಸಮಯದಲ್ಲಿ ರಂಗಾಯಣ ರಘು ಅವರು ತಮ್ಮದೇ ಕಾಮಿಡಿ ವಿಡಿಯೋ ನೋಡಿ ನಕ್ಕಿದ್ದಾರೆ!

Sandalwood Actor Rangayana Raghu Is Watched His Memes And Reacted Like This

ಟ್ರೋಲ್ ನೋಡಿ ಬಿದ್ದು ನಕ್ಕರು!

ಇದು ಸೋಷಿಯಲ್ ಮೀಡಿಯಾ ಜಮಾನ, ಇಲ್ಲಿ ಏನೇ ನಡೆಯಲಿ ಮೊದಲು ಬರುವುದು ಸೋಷಿಯಲ್ ಮೀಡಿಯಾದಲ್ಲಿ. ಹೀಗಾಗಿಯೇ ಸೋಷಿಯಲ್ ಮೀಡಿಯಾ ಮಂದಿ ಕೂಡ, ಟ್ರೋಲ್ಸ್ & ರೋಸ್ಟ್ ಅಂತಾ ಸಖತ್ ಎಂಜಾಯ್ ಮಾಡುತ್ತಾರೆ. ಹೀಗೆ ಮೀಮ್ಸ್ ಕೂಡ ಈ ಜಮಾನದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಅದ್ರಲ್ಲೂ ನಟ ರಂಗಾಯಣ ರಘು ಅವರ ಬಗ್ಗೆ ಸಿಕ್ಕಾಪಟ್ಟೆ ಮೀಮ್ಸ್ ಮಾಡಲಾಗುತ್ತದೆ. ಇದೀಗ ಅದೇ ರೀತಿಯ ಮೀಮ್ಸ್ ಅಂದ್ರೆ ಟ್ರೋಲ್ಸ್ ಪ್ರತಿರೂಪ ನೋಡಿ ರಂಗಾಯಣ ರಘು ಅವರು ಬಿದ್ದು ಬಿದ್ದು ನಕ್ಕಿದ್ದಾರೆ.

ಸ್ಪೆಷಲ್ ವಿಡಿಯೋದಲ್ಲಿ ಫುಲ್ ನಗು!

ಅಷ್ಟಕ್ಕು ಕೆಆರ್‌ಜಿ ಸ್ಟುಡಿಯೋಸ್ ಯುಟ್ಯೂಬ್ ಚಾನೆಲ್ ಅಲ್ಲಿ ಹಾಕಿರುವ ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗೇ ನಟ ರಂಗಾಯಣ ರಘು ಅವರ ಈ ನಗುವನ್ನ ನೋಡಿ ಪ್ರೇಕ್ಷಕರು ಕೂಡ ಮತ್ತಷ್ಟು ಎಂಜಾಯ್ ಮಾಡಿದ್ದಾರೆ. ಅಲ್ಲದೆ ರಂಗಾಯಣ ರಘು ಹೀರೋ ಆಗಿ ನಟಿಸಿರುವ 'ಶಾಖಾಹಾರಿ' ಸಿನಿಮಾ ನೋಡಲು ಕನ್ನಡಿಗರು ಕಾಯುತ್ತಿದ್ದು, ಇದೀಗ ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ.

ಡಿಫರೆಂಟ್ ನಟ ರಂಗಾಯಣ ರಘು

ಒಟ್ನಲ್ಲಿ ಕನ್ನಡ ಸಿನಿ ರಂಗಕ್ಕೆ ಇನ್ನೇನು 100 ವರ್ಷ ತುಂಬಲಿದೆ. ಹೀಗೆ ಸೆಂಚ್ಯುರಿ ಹೊಸ್ತಿಲಲ್ಲಿ ಇರುವ ಚಂದನವನದ ಅಂಗಳದಲ್ಲಿ ನೂರಾರು ಪೋಷಕ ನಟರು ಮಿಂಚಿದ್ದಾರೆ. ಆದರೂ ಈ ಎಲ್ಲಾ ನಟರಿಗಿಂತ ಪೋಷಕ ಪಾತ್ರದಲ್ಲಿ ತುಂಬಾನೆ ಡಿಫರೆಂಟ್ ಅನಿಸೋದು ರಂಗಾಯಣ ರಘು ಅವರು. ಇಷ್ಟುದಿನ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದ ಈ ರಂಗಾಯಣ ರಘು ಅವರು ಇದೀಗ ಹೀರೋ ಆಗಲು ಸಿದ್ಧರಾಗಿದ್ದಾರೆ. ಅವರ ಸಿನಿಮಾ ಭವಿಷ್ಯ ಈ ಮೂಲಕ ಮತ್ತಷ್ಟು ಉಜ್ವಲ ಆಗಲಿ ಅನ್ನೋದೆ ಅಭಿಮಾನಿಗಳ ಆಶಯ.

Sandalwood Actor Rangayana Raghu Is Watched His Memes And Reacted Like This

ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಶಾಖಾಹಾರಿ' ಸಿನಿಮಾ ಗಮನವನ್ನೂ ಸೆಳೆಯುತ್ತಿದೆ. ಹಿಂದೆ ಯೋಗರಾಜ್ ಭಟ್ ಅವರು ಈ ಸಿನಿಮಾ ಟೈಟಲ್ ಪೋಸ್ಟರ್ ಅನಾವರಣ ಮಾಡಿದ್ದರು. ಶಾಖಾಹಾರಿ ಸಿನಿಮಾದ ರಂಗಾಯಣ ರಘು ಅವರ ಪಾತ್ರವನ್ನು ಈಗಾಗಲೇ ಜನ ಟ್ರೇಲರ್ ಮೂಲಕ ಕಣ್ತುಂಬಿಕೊಂಡಿದ್ದಾರೆ. ಹೀಗೆ ಸಿನಿ ರಸಿಕರಲ್ಲಿ ಕುತೂಹಲ ಡಬಲ್ ಆಗಿದೆ. ಸಂದೀಪ್ ಸುಂಕದ್ ಶಾಖಾಹಾರಿ ಚಿತ್ರದ ಸೂತ್ರಧಾರ. ಈಗಾಗಲೇ, ಕೆಲ ಕಿರುಚಿತ್ರ ನಿರ್ದೇಶಿಸಿದ ಅವರಿಗೆ, ಇದು ಮೊದಲನೇ ಸಿನಿಮಾ. ಹೀಗಾಗಿಯೇ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹಾಗೇ ಇನ್ನೇನು ಈ ಸಿನಿಮಾ ರಿಲೀಸ್‌ಗೂ ಸಿದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+