ಹಾರ್ಪಿಕ್ ಹಾಕುವುದು..ವಾಶ್ ರೂಂ ತೊಳೆಯುವುದು ನಾನೇ: ನಟ ಗಣೇಶ್
ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ನಟ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಈ ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಟೀಸರ್ ಪೋಸ್ಟರ್‌ನಲ್ಲಿ ಗಣೇಶ್ ನೆಲ ಒರೆಸುವ ಮೋಪ್ ಹಿಡಿದಿರುವುದನ್ನು ನೋಡಬಹುದು.
ಈ ಬಗ್ಗೆ ಗೋಲ್ಡನ್ ಸ್ಟಾರ್ ನಟ ಗಣೇಶ್ ಮಾತನಾಡಿದ್ದು, ತಮ್ಮ ರಿಯಲ್ ಲೈಫ್‌ನಲ್ಲೂ ಸ್ವಚ್ಛತೆಗೆ ಅವರು ನೀಡುವ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ. ಮಿರ್ಚಿ ಕನ್ನಡ ಸಂದರ್ಶನದಲ್ಲಿ ಮಾತನಾಡಿದ ಗಣೇಶ್ ನನ್ನ ಕಬೋರ್ಡ್, ವಾಶ್ ರೂಮ್‌ಗಳನ್ನು ನಾನೇ ಸ್ವಚ್ಛ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ನಾನು ಈಗಲೂ ಮನೆ ಕೆಲಸಗಳನ್ನು ಮಾಡುತ್ತೇನೆ. ನನ್ನ ಬಟ್ಟೆಗಳನ್ನು ಯಾರೂ ಮಡಚಲ್ಲ. ಮಡಚಲು ನಾನು ಬಿಡುವುದೂ ಇಲ್ಲ. ನನಗೆ ನಿರ್ದಿಷ್ಟವಾದ ಕ್ರಮವಿದೆ. ಅದೇ ಕ್ರಮದಲ್ಲಿ ನನ್ನ ಬಟ್ಟೆಗಳನ್ನು ಮಡಚಿಡಬೇಕು. ಆ ಕ್ರಮವನ್ನು ಯಾರಾದರೂ ತೆಗೆದರೆ ನನಗೆ ಸಿಟ್ಟು ಬರುತ್ತದೆ. ನನಗೆ ಆಗಲ್ಲ ಅದು. ಹೀಗಾಗಿ ನನ್ನ ಬಟ್ಟೆ ಒಗೆದ ಮೇಲೆ ಹೇಗೆ ಬೇಕೋ ಹಾಗೆ ತಂದು ಇಟ್ಟಿರುತ್ತಾರೆ. ಆಮೇಲೆ ನಾನೇ ಅದನ್ನು ಮಡಚಿ ಬೀರುವಿನಲ್ಲಿ ಇಡುತ್ತೇನೆ.
ನಾನು ಬ್ಯಾಚುಲರ್ ಇರುವಾಗಿನಿಂದಲೂ ನನಗೆ ಬಟ್ಟೆ ಸರಿಯಾಗಿ ಇರಬೇಕು. ಯಾಕೆಂದರೆ ನಾವು ಹಾಕುವ ಬಟ್ಟೆ ಒಳ್ಳೆ ಮರ್ಯಾದೆ ಕೊಡುತ್ತದೆ. ನೀವು ಹಾಕಿರುವ ಬಟ್ಟೆ ಮೇಲೆ ಜನ ನಿಮ್ಮನ್ನು ಜಡ್ಜ್ ಮಾಡುತ್ತಾರೆ. ಸಿಂಪಲ್ ಆಗಿರಬಹುದು, ಡಿಸೈನರ್ ಆಗಿರಬಹುದು ಆದರೆ ಬಟ್ಟೆ ಮನುಷ್ಯನನ್ನು ತೋರಿಸುತ್ತದೆ.
ಬ್ರಾಂಡ್ ಬಟ್ಟೆಗಳನ್ನೇ ಹಾಕಿಕೊಳ್ಳಬೇಕು ಅಂತೆನಿಲ್ಲಾ..ನೀವೇ ಬ್ರಾಂಡ್ ಆದರೆ ಬ್ರಾಂಡೆಂಡ್ ಬಟ್ಟೆಗಳು ಬೇಕು ಅಂತಿಲ್ಲ. ನೀವು ಯಾವ ಬಟ್ಟೆ ಬೇಕಾದರೂ ಹಾಕಿಕೊಂಡು ಹೋಗಬಹುದು. ಆದರೆ ನೀವು ಯಾವ ಬಟ್ಟೆ ಹಾಕಿಕೊಂಡರೂ ಸಹ ಅದಕ್ಕೆ ಕೊಡುವ ಮರ್ಯಾದೆ ನಾವು ಕೊಡಬೇಕು.

ರಾಜಕಾರಣಿಗಳು ಬಿಳಿ ಶರ್ಟ್ ಹಾಕಿಕೊಂಡು ಇರುತ್ತಾರೆ. ಹಾಗಂತ ನಾವು ಕ್ಲಿಯರ್ ಅಂತಲ್ಲಾ. ಒಬ್ಬೊಬ್ಬರದು ಒಂದೊಂದು ಬಟ್ಟೆ ಕ್ರಮ ಇರುತ್ತದೆ. ಹೀಗಾಗಿ ಬಟ್ಟೆಗೆ ನಾವು ಗೌರವ ಕೊಡಬೇಕಾಗುತ್ತದೆ. ನನ್ನ ಕಬೋರ್ಡ್‌ನಾ ನಾನೇ ಕ್ಲೀನ್ ಮಾಡುವುದು. ನನ್ನ ಬಾತ್ರೂಮ್‌ನ ನಾನೇ ತೊಳೆಯುವುದು. ನಾನೇ ಹಾರ್ಪಿಕ್ ಹಾಕುವುದು, ನಾನೇ ವಾಶ್ ಮಾಡುವುದು.
ಶನಿವಾರ ನಾನು ಬೇಗ ಬಂದರೆ ಮನೆಗೆ ನನ್ನ ಬಾತ್ರೂಮ್‌ನ ಕ್ಲೀನ್ ಮಾಡಿಕೊಳ್ಳುತ್ತೇನೆ. ನನಗೆ ಎಲ್ಲಾ ಕ್ಲೀನ್ ಇರಬೇಕು. ಸಿಂಕ್ ಎಲ್ಲಾ ನೀಟಾಗಿ ಇರಬೇಕು. ಗ್ಲಾಸ್ ಎಲ್ಲಾ ಕ್ಲೀನ್ ಆಗಿರಬೇಕು. ಬ್ಯಾಚುಲರ್ ಇರುವಾಗಲೂ ಹಳೆ ಟೀ-ಶರ್ಟ್ ತೆಗೆದುಕೊಂಡು ಚೆನ್ನಾಗಿ ರೂಮ್‌ನೆಲ್ಲಾ ಒರೆಸುತ್ತಿದೆ.
ನನ್ನ ಕಬೋರ್ಡ್, ಬಟ್ಟೆ, ಬಟ್ಟೆಗೆ ಇಸ್ತ್ರಿ, ಶೂಟಿಂಗ್ ಬಟ್ಟೆಗಳನ್ನು ಲೋಕೆಶನ್ ಅಲ್ಲಿ ಇಸ್ತ್ರಿ ಮಡುತ್ತಾರೆ. ಅದನ್ನು ಬಿಟ್ಟು ನಾನು ಹಾಕಿಕೊಳ್ಳುವ ಬಟ್ಟೆಗಳನ್ನು ನಾನೇ ಬೆಳಿಗ್ಗೆ ಎದ್ದು ಇಸ್ತ್ರಿ ಮಾಡಿಕೊಳ್ಳುತ್ತೇನೆ. ಹೆಂಡತಿನೇ ಎಲ್ಲಾ ಮಾಡಬೇಕು ಎನ್ನುವ ಯೋಚನೆಯಲ್ಲಿ ಇಲ್ಲ ನಾನು. ನನ್ನ ಕೆಲಸವನ್ನು ನಾನು ಮಾಡಿಕೊಳ್ಳುತ್ತೇನೆ. ಅವರ ಕೆಲಸವನ್ನು ಅವರು ಮಾಡಿಕೊಳ್ಳುತ್ತಾರೆ. ನನ್ನ ಕಬೋರ್ಡ್, ವಾಶ್ ರೂಮ್‌ಗಳನ್ನು ನಾನೇ ಸ್ವಚ್ಛ ಮಾಡಿಕೊಳ್ಳುತ್ತೇನೆ ಎಂದು ನಟ ಗಣೇಶ್ ತಮ್ಮ ಜೀವನ ಶೈಲಿ ಬಗ್ಗೆ ವಿವರಿಸಿದ್ದಾರೆ.












Click it and Unblock the Notifications