ಡಾಲಿಗೆ ಮದುವೆ ಯೋಗ! ಹುಡುಗಿ ಯಾರು, ಹಸೆಮಣೆ ಏರೋದು ಯಾವಾಗ?

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅವರಿಗೆ ಕಂಕಣಭಾಗ್ಯ ಕೂಡಿಬಂದಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಡಾಲಿ ತಮ್ಮ ಮದುವೆಯ ಸುಳಿವು ನೀಡಿದ್ದರು. ಆದರೆ, ಡಾಲಿಯ ಮನದರಸಿ ಯಾರು ಎಂದು ರಿವೀಲ್‌ ಮಾಡಿರಲಿಲ್ಲ. ಸದ್ಯದ ಮಾಹಿತಿ ಪ್ರಕಾರ ಧನಂಜಯ್‌ ಅವರು ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದಾರಂತೆ.

ಹೌದು ಡಾಲಿ ಧನಂಜಯ್‌ ಅವರ ಮದುವೆ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ಯಾಂಡಲ್‌ವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಅಂತಲೇ ಕರೆಸಿಕೊಳ್ತಿದ್ದ ಡಾಲಿ ಅವರಿಗೆ ಕೊನೆಗೆ ಮದುವೆ ಸೆಟ್ಟಾಗಿದೆ ಎನ್ನಲಾಗಿದೆ.

Sandalwood Actor Daali Dhananjay Is Getting Married In February

ಇನ್ನು ಧನಂಜಯ್‌ ಅವರ ಪ್ರೇಯಸಿ ಯಾರು, ಇದು ಲವ್‌ ಮ್ಯಾರೇಜಾ? ಅರೇಂಜ್‌ ಮ್ಯಾರೇಜ್‌ ಎನ್ನುವ ಪ್ರಶ್ನೆಗಳಿಗೂ ಸಹ ಇದೀಗ ಉತ್ತರ ಸಿಕ್ಕಿದೆ. ಸಿನಿಮಾರಂಗದಲ್ಲಿ ಮಿಂಚುತ್ತಿರುವ ಅವರು ವೈದ್ಯೆಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಡಾಲಿ ಮನದರಸಿಯ ಹೆಸರು ಕೂಡ ರಿವೀಲ್‌ ಆಗಿದ್ದು, ಚಿತ್ರದುರ್ಗ ಮೂಲದ ಡಾ.ಧನ್ಯತಾ ಎಂದು ಹೇಳಲಾಗುತ್ತಿದೆ. ಧನು ಹಾಗೂ ಧನ್ಯತಾ ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಬಳಿಕ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ಇವರಿಬ್ಬರ ಲವ್‌ಗೆ ಪೋಷಕರು ಕೂಡ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಈ ಫೆಬ್ರವರಿಯಲ್ಲಿ ಧನಂಜಯ್‌ ಅವರು ಧನ್ಯತಾ ಅವರ ಕೈಹಿಡಿಯಲಿದ್ದಾರಂತೆ.

Sandalwood Actor Daali Dhananjay Is Getting Married In February

ಡಾಲಿ ಕೈ ಹಿಡಿಯುತ್ತಿರುವ ಧನ್ಯತಾ ಅವರು ಗೈನಕಾಲಜಿಸ್ಟ್ ಎನ್ನಲಾಗಿದೆ. ಈಗಾಗಲೇ ಮದುವೆ ತಯಾರಿ ಕೂಡ ಭರ್ಜರಿಯಾಗಿ ಸಾಗಿದ್ದು, ಈ ಜೋಡಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದೆಯಂತೆ.

ಡಾಲಿ ಅವರು ತಮ್ಮ ಕೋಟಿ ಸಿನಿಮಾ ಬಿಡುಗಡೆ ಸಂದರ್ಭದಲ್ಲೂ ತಮ್ಮ ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ವರ್ಷಗಳು ಉರುಳುತ್ತಿವೆ. ಅದು ಗೊತ್ತಾಗುವುದೇ ಇಲ್ಲ. ಸಿನಿಮಾದವರಿಗೆ ವಯಸ್ಸಾಗೋದು ಗೊತ್ತಾಗಲ್ಲ, ಸತ್ತು ಹೋಗೋದೂ ಗೊತ್ತಾಗಲ್ಲ. ಒಂದು ಸಿನಿಮಾ ಮುಗಿಯುವುದರೊಳಗೆ ಎರಡು ವರ್ಷ ಕಳೆದು ಹೋಗುತ್ತೆ. ಹಿಂತಿರುಗಿ ನೋಡಿದಾಗ ಇಷ್ಟು ಬೇಗ ಆಗೋಯ್ತಾ ಅನಿಸುತ್ತೆ ಎಂದಿದ್ದರು.

Sandalwood Actor Daali Dhananjay Is Getting Married In February

ಮದುವೆ ಬಗ್ಗೆ ಎಲ್ಲ ವೇದಿಕೆಯಲ್ಲೂ ನನ್ನ ಕೇಳುತ್ತಾರೆ. ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರೂ ಕೂಡ ಮದುವೆ ಯಾವಾಗ ಅಂತಾರೆ. ಕೋಟಿ ಸಿನಿಮಾ ಚೆನ್ನಾಗಿ ಹಿಟ್‌ ಆದ್ರೆ, ಪಕ್ಕಾ ಮದುವೆ ಆಗ್ತೀನಿ ಎಂದು ನಾನು ಪ್ರಮಾಣ ಮಾಡಿದ್ದೀನಿ ಎಂದು ಡಾಲಿ ಹೇಳಿದ್ದರು.

ಅಲ್ಲದೆ ಇತ್ತೀಚೆಗೂ ಧನಂಜಯ್‌ ತಮ್ಮ ಮದುವೆ ಬಗ್ಗೆ ಮಾತನಾಡಿದ್ದರು. ನಾನು ಇಷ್ಟರಲ್ಲೇ ಮದುವೆ ಆಗ್ತೀನಿ, ನಾನು ಮದುವೆ ಆಗಬೇಕು ಎನ್ನುವುದು ನಮ್ಮ ಅಜ್ಜಿಯ ಆಸೆ. ಹಾಗಾಗಿ ಆದಷ್ಟು ಬೇಗನೇ ನಾನು ಮದುವೆ ಆಗುತ್ತೇನೆ ಎಂದು ಡಾಲಿ ಸುಳಿವು ನೀಡಿದ್ದರು.

ಹಾಗಾಗಿ ಈ ನಟನೊಂದಿಗೆ ಹಸೆಮಣೆ ಏರುವ ಹುಡುಗಿ ಯಾರಿರಬಹುದು? ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಇದೀಗ ಅವರ ಮದುವೆ ಬಗ್ಗೆ ಸದ್ಯಕ್ಕೆ ಇಷ್ಟು ಮಾಹಿತಿ ರಿವೀಲ್‌ ಆಗಿದೆ. ಸ್ಯಾಂಡಲ್‌ವುಡ್‌ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಶೀಘ್ರದಲ್ಲೇ ಧನಂಜಯ್‌ ವೆಡ್ಸ್‌ ಧನ್ಯತಾ ಎನ್ನುವ ಆಮಂತ್ರಣ ಕೊಡಲು ತಯಾರಿ ಮಾಡಿಕೊಂಡಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+