Samantha: ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ ಸಮಂತಾ?

ಸಮಂತಾ ರುತ್ ಪ್ರಭು ಅವರ ಮಾಜಿ ಪತಿ, ನಟ ನಾಗಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಪತಿ ನಿಶ್ಚಿತಾರ್ಥದ ಬಗ್ಗೆ ಸಮಂತಾ ಇದುವರೆಗೂ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲವಾದರೂ, ಇನ್‌ಸ್ಟಾಗ್ರಾಂನಲ್ಲಿ ಪರೋಕ್ಷವಾಗಿ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಶಾಂತಿ ಮತ್ತು ಮೌನದ ವಸ್ತುಸಂಗ್ರಹಾಲಯ (The museum of peace and quiet) ಎನ್ನುವ ಬರಹವಿರುವ ಟೀಶರ್ಟ್ ಧರಿಸಿರುವ ಫೋಟೊ ಹಂಚಿಕೊಂಡಿದ್ದಾರೆ.

ಇದೆಲ್ಲದರ ನಡುವೆ ನಟಿ ಸಮಂತಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಗುಸು ಗುಸು ಕೂಡ ಶುರುವಾಗಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಜ್‌ ನಿಡಿಮೋರು ಜೊತೆ ಸಮಂತಾ ಹೆಸರು ಕೇಳಿ ಬಂದಿದೆ. ಇಬ್ಬರು ಕೂಡ ಪ್ರೀತಿಸುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Samantha Ruth Prabhu and Raj Nidimoru New Love Blooms

ಪ್ರೈಮ್‌ನಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ದಿ ಫ್ಯಾಮಿಲಿ ನಿರ್ದೇಶಕರ ರಾಜ್‌ ಮತ್ತು ಡಿಕೆ. ರಾಜ್ ನಿಡಿಮೋರು ಸದ್ಯ ದಿ ಫ್ಯಾಮಿಲಿ ಮ್ಯಾನ್ ಸರಣಿಯ 3ನೇ ಆವೃತ್ತಿ ಮತ್ತು ಸಿಟಾಡೆಲ್: ಹನಿ ಬನ್ನಿ ಸರಣಿಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಈ ಎರಡೂ ವೆಬ್ ಸಿರೀಸ್‌ನಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ದಿ ಫ್ಯಾಮಿಲಿ ಫ್ಯಾನ್‌ ಸರಣಿಯ 2ನೇ ಸೀಸನ್‌ನಲ್ಲಿ ಸಮಂತಾ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದರು. ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ

ಇಬ್ಬರ ನಡುವೆ ಏನೋ ಇದೆ ಎನ್ನುವ ವದಂತಿಗಳು ಮೊದಲು ರೆಡ್ಡಿಟ್‌ನಲ್ಲಿ ಕಾಣಿಸಿಕೊಂಡವು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತ್ವರಿತವಾಗಿ ಗಮನ ಸೆಳೆದವು. ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ಸಮಂತಾ ನಟಿಸಿರುವ ಬಹು ನಿರೀಕ್ಷಿತ ಸರಣಿಯಾದ ಸಿಟಾಡೆಲ್: ಹನಿ ಬನ್ನಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಸಮಂತಾ ಮತ್ತು ರಾಜ್ ನಡುವೆ ಸ್ನೇಹವಾಗಿದ್ದು ಇಬ್ಬರು ಪ್ರೀತಿಸುತ್ತಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ರಾಜ್ ನಿಡಿಮೋರು ಮತ್ತು ಅವರ ಜೊತೆಗಾರ ಕೃಷ್ಣ ಡಿ.ಕೆ., ತಮ್ಮ ವಿಶಿಷ್ಟವಾದ ಕಥೆ ಹೇಳುವಿಕೆ ಮತ್ತು ಭಾರತೀಯ ಸಿನಿಮಾ ಮತ್ತು ವೆಬ್ ಕಂಟೆಂಟ್‌ಗೆ ಹೊಸತನ ತಂದುಕೊಟ್ಟವರು. ದಿ ಫ್ಯಾಮಿಲಿ ಮ್ಯಾನ್‌ ವೆಬ್‌ ಸಿರೀಸ್‌ ಇವರಿಬ್ಬರಿಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟಿತು.

ವದಂತಿಗಳ ಪ್ರಕಾರ, ಸಿಟಾಡೆಲ್: ಹನಿ ಬನ್ನಿ ನಿರ್ಮಾಣದ ಸಮಯದಲ್ಲಿ ಸಮಂತಾ ಮತ್ತು ರಾಜ್ ಅವರ ನಡುವೆ ಬಾಂಧವ್ಯ ಗಟ್ಟಿಯಾಗಿದೆ ಎನ್ನಲಾಗಿದೆ. ರಾಜ್ ನಿಡಿಮೋರು ಈಗಾಗಲೇ ವಿವಾಹವಾಗಿದೆ, ಈಗ ಸಮಂತಾ ಅವರ ಜೊತೆ ಇರಲು ತಮ್ಮ ಪತ್ನಿಗೆ ವಿಚ್ಛೇದನ ಕೊಡಲಿದ್ದಾರೆ ಎನ್ನುವ ಊಹಾಪೋಹಗಳು ಕೂಡ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿವೆ.

ಸಮಂತಾ ಅಭಿಮಾನಿಗಳಿಗೆ ಶಾಕ್!

ಈ ವಿಚಾರವಾಗಿ ಸಮಂತಾ ಅಭಿಮಾನಿಗಳಲ್ಲೇ ಒಮ್ಮತದ ಅಭಿಪ್ರಾಯವಿಲ್ಲ. 021 ರಲ್ಲಿ ನಾಗ ಚೈತನ್ಯದಿಂದ ಬೇರ್ಪಟ್ಟ ನಂತರ ಅವರು ಮತ್ತೊಬ್ಬರನ್ನು ಪ್ರೀತಿಸುತ್ತಿರುವುದಕ್ಕೆ ಸಂತಸಪಟ್ಟರೆ, ಇನ್ನೂ ಕೆಲವರು ಇದು ಸುಳ್ಳು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನ ಪಡೆದುಕೊಂಡಿದ್ದು ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಈ ಜೋಡಿಯು ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾಗಿತ್ತು. ವಿಚ್ಛೇದನದ ಬಳಿಕ ಸಮಂತಾ ಸಿನಿ ಬದುಕಿನತ್ತ ಗಮನಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+