Salaar Trailer: ಸಲಾರ್ ಟ್ರೈಲರ್ ನೋಡಿದವರಿಗೆ ಉಗ್ರಂ ನೆನಪಾಗಿದ್ಯಾಕೆ?

ಭಾರತ ಚಿತ್ರರಂಗದಲ್ಲೇ ಭಾರಿ ನಿರೀಕ್ಷೆ ಮೂಡಿಸಿರುವ ಸಲಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಬಾಹುಬಲಿ 2 ಬಳಿಕ ಆ ಮಟ್ಟದ ಯಶಸ್ಸು ನೋಡಲು ವಿಫಲವಾಗಿದ್ದ ಪ್ರಭಾಸ್‌ ಮಾಸ್‌ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಭಾರಿ ಯಶಸ್ಸು ಕಂಡಿದ್ದ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಈ ಚಿತ್ರವನ್ನು ನೋಡಿದ ಪ್ರಭಾಸ್ ಅಭಿಮಾನಿಗಳು ಭಾರಿ ಖುಷಿಯಾಗಿದ್ದಾರೆ ಟ್ರೈಲರ್ ಬಿಡುಗಡೆಯಾದ ಮೂರು ನಿಮಿಷದಲ್ಲೇ 1 ಲಕ್ಷಕ್ಕೂ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ. ಟ್ರೈಲರ್ ನೋಡಿದರೆ ನಿರ್ಮಾಪಕರು ಹಣವನ್ನು ಧಾರಾಳವಾಗಿ ಖರ್ಚು ಮಾಡಿರುವುದು ತಿಳಿಯುತ್ತದೆ.

 Salaar Trailer: Is Salaar Remake Of Ugram? What Fans Said

ಫೃಥ್ವಿರಾಜ್ ಮತ್ತು ಪ್ರಭಾಸ್ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಸೆಟ್‌ಗಳು,ಆಕ್ಷನ್ ದೃಶ್ಯಗಳು ಅಭಿಮಾನಿಗಳು ಖುಷಿ ಕೊಟ್ಟಿವೆ. ಈ ಚಿತ್ರ ಪ್ರಭಾಸ್‌ಗೆ ಯಶಸ್ಸನ್ನು ತಂದುಕೊಡಲಿದೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಲಾರ್ ಉಗ್ರಂ ರೀಮೇಕಾ?

ಈ ಚಿತ್ರದ ಶೂಟಿಂಗ್ ಶುರುವಾದಾಗಿನಿಂದ ಇದ್ದ ಒಂದು ಕುತೂಹಲ ಇದು ಕನ್ನಡದ ಉಗ್ರಂ ಚಿತ್ರದ ರೀಮೇಕಾ ಎನ್ನುವುದು. ಉಗ್ರಂ ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಚಿತ್ರ. ಮುರಳಿ, ತಿಲಕ್‌ ಸ್ನೇಹಿತರಾಗಿ ಈ ಚಿತ್ರದಲ್ಲಿ ನಟಿಸಿದ್ದರು. ಭರ್ಜರಿ ಆಕ್ಷನ್, ಮಾಸ್ ಡೈಲಾಗ್‌ ಮೂಲಕ ಭಾರಿ ಗಮನ ಸೆಳೆದಿತ್ತು. ಚಂದನವನದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಈ ಸಿನಿಮಾ ಭರ್ಜರಿ ಹಿಟ್ ಆಗಿತ್ತು.

ಈಗ ಸಲಾರ್ ಸಿನಿಮಾ ನೋಡಿದವರಿಗೆ ಉಗ್ರಂ ಚಿತ್ರದ ನೆನಪಾಗಿದೆ. ಕಾರಣ ಎರಡೂ ಚಿತ್ರದ ಕಥೆ ಒಂದೇ ರೀತಿ ಇರುವುದು. ಆದರೆ ಸಲಾರ್ ಹೆಚ್ಚಿನ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಕಥೆಯಲ್ಲಿ ಸ್ಪಲ್ಪ ಬದಲಾವಣೆ ಮಾಡಲಾಗಿದೆ. ಉಗ್ರಂ ಸಿನಿಮಾ ನೋಡಿದ ಅಭಿಮಾನಿಗಳಿಗೆ ಸಲಾರ್ ಚಿತ್ರದ ಟ್ರೈಲರ್ ನೋಡಿದಾಗ ಇದು ಪಕ್ಕಾ ಉಗ್ರಂ ಕಥೆ ಅನಿಸದೇ ಇರದು.

ಕೆಜಿಎಫ್‌ಗೆ ಸಂಬಂಧವಿಲ್ಲ

ಇನ್ನು ಕೆಲವು ಅಭಿಮಾನಿಗಳು ಸಲಾರ್ ನಲ್ಲಿ ಯಶ್ ಇರಲಿದ್ದಾರೆ, ಕೆಜಿಎಫ್ 2 ಮತ್ತು ಸಲಾರ್ ಗೆ ಸಂಬಂಧವಿದೆ, ಇದು ನೀಲ್ ಯೂನಿವರ್ಸ್ ಎಂದು ಹೇಳಿದ್ದರು. ಆದರೆ, ಪ್ರಶಾಂತ್ ನೀಲ್ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದು ಕೆಜಿಎಫ್‌ಗೆ ಇದಕ್ಕೆ ಸಂಬಂಧವಿಲ್ಲ ಎಂದಿದ್ದರು. ಈ ಮೂಲಕ ಸಲಾರ್ ಎರಡು ಭಾಗಗಳಲ್ಲಿ ಬರಲಿದ್ದು, ಕೆಜಿಎಫ್ ಜೊತೆ ಸಂಬಂಧವಿಲ್ಲ ಎನ್ನುವುದು ಖಚಿತವಾಗಿದೆ.

ಸಲಾರ್ ಚಿತ್ರಕ್ಕಾಗಿ ಪ್ರಬಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಡಿಸೆಂಬರ್ 22ರಂದು ಸಿನಿಮಾ ತೆರೆಗೆ ಬರಲಿದೆ. ಪ್ರಭಾಸ್ ಜೊತೆ ಶೃತಿ ಹಾಸನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದು, ಹೊಂಬಾಳೆ ಫಿಲಂಸ್‌ ಬಂಡವಾಳ ಹೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+