ಕನ್ನಡಿಗರ ತೆಲುಗು ಸಿನಿಮಾ ಸಲಾರ್ ಅಬ್ಬರಕ್ಕೆ ದಾಖಲೆ ಧೂಳ್!
ಕನ್ನಡ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಕೂಡ ಶೇಕ್ ಆಗುತ್ತಿದೆ. ಕನ್ನಡದಲ್ಲಿ ಕಾಂತಾರ ಮತ್ತು ಕೆಜಿಎಫ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಹೀಗೆ ಈ ಎರಡೂ ಸಿನಿಮಾಗೆ ದುಡ್ಡು ಅಂದ್ರೆ ಬಂಡವಾಳ ಹೂಡಿದ್ದ 'ಹೊಂಬಾಳೆ' ಸಂಸ್ಥೆ, ತೆಲುಗು ಸಿನಿಮಾ ಸಲಾರ್ ನಿರ್ಮಾಣ ಮಾಡಿದೆ. ಹೀಗಿದ್ದಾಗ ಸಲಾರ್ ಕೂಡ ನೂರಾರು ಕೋಟಿ ರೂಪಾಯಿ ಸಂಪಾದನೆ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ. ಅದರಲ್ಲೂ 1000 ಕೋಟಿ ಕ್ಲಬ್ ಮೇಲೆ ಕಣ್ಣಿಟ್ಟು ಮುಂದೆ ನುಗ್ಗುತ್ತಿದೆ.
ಮೊದಲ ದಿನವೇ 175 ಕೋಟಿ ರೂಪಾಯಿ ಬಾಚಿದ್ದ ಈ ಸಿನಿಮಾ ಜಗತ್ತಿನಾದ್ಯಂತ ಖದರ್ ತೋರಿಸುತ್ತಿದೆ. ಅದರಲ್ಲೂ ವಿದೇಶದಲ್ಲಿ 'ಸಲಾರ್' ಸಿನಿಮಾ ನೋಡುತ್ತಿರುವ ಅಭಿಮಾನಿ ಬಳಗ ಫುಲ್ ಖುಷ್ ಆಗಿದೆ. ಪ್ರಭಾಸ್ ಅವರ ಗೆಲುವಿಗೆ ಅಂತಾ ಇಷ್ಟು ದಿನಗಳ ಕಾಲ ಕಾದು ಕೂತಿದ್ದ ಫ್ಯಾನ್ಸ್‌ಗೆ ಕ್ರಿಸ್‌ಮಸ್ ಉಡುಗೊರೆ ಸಿಕ್ಕಿದೆ. ಸಾಲು ಸಾಲು ಸೋಲುಗಳಿಂದ ಭಾರಿ, ಅಂದ್ರೆ ಭಾರಿ ಹಿನ್ನಡೆ ಅನುಭವಿಸಿದ್ದ ಬಾಹುಬಲಿ ಪ್ರಭಾಸ್ ಈಗ ಕಂಬ್ಯಾಕ್ ಮಾಡಿದ್ದಾರೆ. ಹಾಗಾದರೆ ಈ ಸಿನಿಮಾ ಬಿಡುಗಡೆ ಆದ 5 ದಿನದಲ್ಲಿ ಗಳಿಸಿದ ಹಣ ಎಷ್ಟು ನೂರು ಕೋಟಿ ಗೊತ್ತಾ? ಮುಂದೆ ಓದಿ.

ಕನ್ನಡಿಗರ ಅಬ್ಬರ ಬಲು ಜೋರು!
ಸಲಾರ್ ತೆಲುಗು ಸಿನಿಮಾ ಆಗಿದ್ದರು ಕೂಡ, ಕನ್ನಡ ನಟರ ದಂಡೇ ಸಿನಿಮಾದಲ್ಲಿ ಅಬ್ಬರಿಸಿದೆ. ಕೆಜಿಎಫ್ ಪಾರ್ಟ್ 1 ಮೂಲಕ, ವಿಲನ್ ಅಂದ್ರೆ ಹಿಂಗೆ ಇರಬೇಕು ಅನ್ನೋ ಭಯ ಹುಟ್ಟಿಸಿದ್ದ ಗರುಡ ಖ್ಯಾತಿ ರಾಮಚಂದ್ರ ರಾಜು ಸಲಾರ್ ಸಿನಿಮಾದಲ್ಲೂ ವಿಲನ್ ಆಗಿ ಮತ್ತೆ ಮಿಂಚಿದ್ದಾರೆ. ಪೋಷಕ ನಟ ರವಿ ಭಟ್, ನಟ ಪ್ರಮೋದ್, ಭಜರಂಗಿ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದ ಮಧು ಗುರುಸ್ವಾಮಿ ಈ ಸಿನಿಮಾದಲ್ಲಿ ಇದ್ದಾರೆ. ಹೀಗಾಗಿ ಕರ್ನಾಟಕವೂ ಸೇರಿದಂತೆ ಸಲಾರ್ ಸಿನಿಮಾ ಜಗತ್ತಿನಾದ್ಯಂತ ಸುಮಾರು 450 ರಿಂದ 490 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ.
ಮೊದಲ ದಿನವೇ 175 ಕೋಟಿ!
ಸಲಾರ್ ಸಿನಿಮಾ ಮೊದಲ ದಿನ ಬರೋಬ್ಬರಿ 175 ಕೋಟಿ ರೂಪಾಯಿ ಸಂಪಾದನೆ ಮಾಡಿತ್ತು. ಜಗತ್ತಿನಾದ್ಯಂತ ಹತ್ತಾರು ಸಾವಿರ ಸಿನಿಮಾ ಮಂದಿರದಲ್ಲಿ ರಿಲೀಸ್ ಆಗಿದ್ದ 'ಸಲಾರ್' ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡಿತ್ತು. ಈ ಮೂಲಕ ಹೊಸ ದಾಖಲೆಯನ್ನ ಬರೆದಿತ್ತು. ಪ್ರಭಾಸ್ ವೃತ್ತಿ ಜೀವನದಲ್ಲಿ ಮೊದಲ ದಿನವೇ ಇಷ್ಟು ದೊಡ್ಡ ಮೊತ್ತ ಗಳಿಸಿದ್ದ 2ನೇ ಸಿನಿಮಾ ಇದಾಗಿದೆ. ಯಾಕಂದ್ರೆ ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂ. ಸಂಪಾದನೆ ಮಾಡಿತ್ತು. ಹೀಗೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿರುವ 'ಸಲಾರ್' ಇನ್ನೇನು ಹೊಸ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ.

ಮತ್ತೆ ಪ್ರಶಾಂತ್ ನೀಲ್ ಕಮಾಲ್
ಡೈರೆಕ್ಟರ್ ಪ್ರಶಾಂತ್ ನೀಲ್ 8 ವರ್ಷದ ಹಿಂದೆ ಹೊಂಬಾಳೆ ಸಂಸ್ಥೆ ಜೊತೆಗೆ ಕೈಜೋಡಿಸಿದ್ದರು. ಹೀಗೆ ಬಂದ ಪ್ರಶಾಂತ್ ನೀಲ್ ಅವರನ್ನು ಹೊಂಬಾಳೆ ಬಿಟ್ಟುಕೊಡುವ ಲಕ್ಷಣವೇ ಕಾಣುತ್ತಿಲ್ಲ. ಯಾಕೆ ಗೊತ್ತಾ? ಇಂತಹ ಅತ್ಯದ್ಭುತ ನಿರ್ದೇಶಕನ ಜೊತೆಗೆ ಸಾಲು ಸಾಲು ಸಿನಿಮಾಗೆ ಒಪ್ಪಂದ ಮಾಡಿಕೊಳ್ಳುತ್ತಿದೆ ಹೊಂಬಾಳೆ ಸಂಸ್ಥೆ. ಈಗ ಸಲಾರ್ ಕೂಡ ಪ್ರಶಾಂತ್ ನೀಲ್ + ಹೊಂಬಾಳೆ ಕಾಂಬೋದಲ್ಲಿ ಮೂಡಿ ಬಂದಿದೆ. ಅಲ್ಲದೆ ಬಾಕ್ಸ್ ಆಫಿಸ್ ಸೇರಿ ಎಲ್ಲೆಲ್ಲೂ ದೊಡ್ಡ ಕಮಾಲ್ ಮಾಡಿದೆ.
ಒಟ್ನಲ್ಲಿ ಸಲಾರ್ ಸಿನಿಮಾ ಅಬ್ಬರಿಸಿ ಬೊಬ್ಬಿರಿದಿದೆ, ಇದು ಮತ್ತೊಮ್ಮೆ ದಕ್ಷಿಣ ಭಾರತದ ಸಿನಿಮಾಗಳ ಗತ್ತು ಏನು ಅನ್ನೋದನ್ನ ಸಲಾರ್ ತೋರಿಸಿಕೊಟ್ಟಿದೆ. ಅದ್ರಲ್ಲೂ ಕನ್ನಡಿಗರೇ ಸೇರಿ ನಿರ್ಮಿಸಿರುವ ತೆಲುಗು ಸಿನಿಮಾ ಇದಾಗಿದೆ. ಈ ಮೂಲಕ ಪ್ರಶಸ್ತಿಗಳ ಮೇಲೆ ಕೂಡ, ಸಲಾರ್ ಸಿನಿಮಾ ಕಣ್ಣಿಟ್ಟಿದೆ. ಯಾಕಂದ್ರೆ ಈಗಾಗಲೇ ಬಾಕ್ಸ್ ಆಫಿಸ್‌ನಲ್ಲಿ ದಾಖಲೆ ಧೂಳ್ ಮಾಡಿರುವ ಸಲಾರ್, ಪ್ರಶಸ್ತಿಗಳನ್ನೂ ಬಾಚುವುದು ಪಕ್ಕಾ ಅಂತಿದ್ದಾರೆ ಫ್ಯಾನ್ಸ್.












Click it and Unblock the Notifications