RCB Prabhas: ಡಾರ್ಲಿಂಗ್ ಪ್ರಭಾಸ್ ಕೈಯಲ್ಲಿ RCB ಜೆರ್ಸಿ?
ನಟ ಡಾರ್ಲಿಂಗ್ ಪ್ರಭಾಸ್ ಅವರಿಗೆ ಈಗ ಭರ್ಜರಿ ಖುಷಿ, ಭರ್ಜರಿ ಸಂಭ್ರಮ. ಅದರಲ್ಲೂ ಸಂಕ್ರಾಂತಿ ಹಬ್ಬಕ್ಕೆ ಸಲಾರ್ ಗೆಲುವು ಡಬಲ್ ಖುಷಿ ಕೊಟ್ಟಿದೆ. ಹಲವು ವರ್ಷಗಳ ನಂತರ ಈ ನಟನ ಮುಖದಲ್ಲಿ ಮುಗುಳು ನಗೆ ಕೂಡ ಮೂಡಿದೆ. ಹೀಗಿದ್ದಾಗ ಸಲಾರ್ ಸಿನಿಮಾ ಟೀಂ ಭರ್ಜರಿಯಾಗಿ ಸಂಭ್ರಮಾಚರಣೆ ನಡೆಸಿದೆ. ಆದರೆ ಈ ಸಮಯದಲ್ಲಿ ನಟ ಪ್ರಭಾಸ್ ಅವರ ಕೈಯಲ್ಲಿ ಆರ್‌ಸಿಬಿ ಜರ್ಸಿ ಕೂಡ ಪ್ರತ್ಯಕ್ಷವಾಗಿದೆ!
ಸಲಾರ್ ರಿಲೀಸ್ ಆಗಿ 4ನೇ ವಾರಕ್ಕೆ ಎಂಟ್ರಿ ಕೊಟ್ಟರೂ ಅಬ್ಬರ ಮಾತ್ರ ಸ್ವಲ್ಪವು ಕಮ್ಮಿ ಆಗ್ತಿಲ್ಲ. ಈಗಲೂ ಸಲಾರ್ ಅಬ್ಬರಿಸುತ್ತ ಇದ್ದು ಫ್ಯಾನ್ಸ್ ಕೂಡ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಕೋಟಿ ಕೋಟಿ ಗಳಿಸುತ್ತಿರುವ ಸಲಾರ್‌ಗೆ ಯಾವುದೇ ಅಡ್ಡಿ ಎದುರಾಗಿಲ್ಲ. ಈಗಾಗಲೇ, ಈ ಸಿನಿಮಾ ಥಿಯೇಟರ್ ಸ್ಕ್ರೀನ್ ಮೇಲೆ ಕಣ್ತುಂಬಿಕೊಂಡಿದ್ದ ಅಭಿಮಾನಿ ಬಳಗ, ಮತ್ತೆ ಮತ್ತೆ ಸಿನಿಮಾ ನೋಡುತ್ತಿದೆ. ಹೀಗಾಗಿ ಸಲಾರ್ ತನ್ನ ಗಳಿಕೆಯಲ್ಲಿ ಕೂಡ ಹೊಸ ಹೊಸ ದಾಖಲೆ ಬರೆಯುತ್ತಿದೆ. ಆದರೆ ಇದೇ ಸಮಯದಲ್ಲಿ ನಟ ಡಾರ್ಲಿಂಗ್ ಪ್ರಭಾಸ್ ಆರ್‌ಸಿಬಿ ತಂಡಕ್ಕೂ ಸಪೋರ್ಟ್ ಮಾಡ್ತಾರಾ? ಎಂಬ ಪ್ರಶ್ನೆ ಮೂಡಿದೆ.

ಪ್ರಭಾಸ್ ಕೈಯಲ್ಲಿ ಆರ್‌ಸಿಬಿ ಜೆರ್ಸಿ?
ಹೊಂಬಾಳೆ ದೊಡ್ಡ ಸವಾಲು ಗೆದ್ದು ಬೀಗಿದೆ. ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ನೀಡಿರುವ, ಕನ್ನಡಿಗರೇ ಕಟ್ಟಿ ಬೆಳೆಸಿದ 'ಹೊಂಬಾಳೆ ಫಿಲ್ಮ್ಸ್' ಮತ್ತೊಂದು ಸಾಧನೆ ಮಾಡಿದೆ. ಡಾರ್ಲಿಂಗ್ ಪ್ರಭಾಸ್ ಅವರಿಗೆ ಸಲಾರ್ ಸಿನಿಮಾ ನಿರ್ಮಾಣ ಮಾಡಿದ್ದ ಹೊಂಬಾಳೆಗೆ ಈಗ ಭರ್ಜರಿ ಜಯ ಸಿಕ್ಕಿದೆ. ಹೀಗಾಗಿಯೇ ಎಲ್ಲರೂ ಸೇರಿ, ಸಂಭ್ರಮಾಚಾರಣೆ ಮಾಡಿದ್ದಾರೆ. ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ಈ ಸಮಯದಲ್ಲಿ ನಟ ಪ್ರಭಾಸ್ ಅವರ ಕೈಯಲ್ಲಿ ಕನ್ನಡಿಗರ ಹೆಮ್ಮೆಯ ಐಪಿಎಲ್ ತಂಡ, ಆರ್‌ಸಿಬಿ ಟೀಂನ ಜೆರ್ಸಿ ಕೂಡ ಕಂಡು ಬಂದಿದೆ! ಅದು ಹೇಗೆ ಗೊತ್ತಾ?
ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ..
'ಸಲಾರ್' ದೊಡ್ಡ ಮಟ್ಟದಲ್ಲಿ ಗೆಲುವು ಕಂಡ ಹಿನ್ನೆಲೆಯಲ್ಲಿ ಹೊಂಬಾಳೆ ಸಂಸ್ಥೆ ಇದೀಗ ಸಿನಿಮಾ ತಂಡದ ಜೊತೆಗೆ ಸಂಭ್ರಮಾಚರಣೆ ನಡೆಸಿದೆ. ಇನ್ನು ಈ ವೇಳೆ ನಟ ಪ್ರಭಾಸ್‌ಗು ಆಹ್ವಾನ ನೀಡಲಾಗಿತ್ತು. ಹೀಗೆ ಸಮಾರಂಭಕ್ಕೆ ಬಂದು ಎಂಜಾಯ್ ಮಾಡಿದ ನಟ ಪ್ರಭಾಸ್ ಅವರು, ಕೊನೆಯಲ್ಲಿ ಒಂದು ಭರ್ಜರಿ ಗಿಫ್ಟ್ ಕೂಡ ಪಡೆದಿದ್ದಾರೆ. ಅದು ಏನಂದ್ರೆ ಇದೀಗ ಪ್ರಭಾಸ್ ಅವರಿಗೆ ವಿಶೇಷವಾಗಿ ಜೆರ್ಸಿ ಒಂದನ್ನು ಗಿಫ್ಟ್ ಮಾಡಲಾಗಿದ್ದು, ಅದು ಆರ್‌ಸಿಬಿ ತಂಡದ ಜೆರ್ಸಿ ಎನ್ನಲಾಗಿದೆ. ಈ ಮೂಲಕ ಬೆಂಗಳೂರು ತಂಡದ ಫ್ಯಾನ್ಸ್‌ಗೆ ಖುಷಿ ಕೂಡ ಹೆಚ್ಚಾಗಿದೆ.
ಡಾರ್ಲಿಂಗ್‌ಗೆ ಸಿಕ್ಕಿದೆ ಭರ್ಜರಿ ಜಯ
ಪ್ರಭಾಸ್ ಅಂದ್ರೆ ಮಾಸ್, ಪ್ರಭಾಸ್ ಅಂದ್ರೆ ಕ್ಲಾಸ್ ಹೀಗೆ ಎಲ್ಲಾ ರೀತಿ ಪಾತ್ರಗಳಿಗೆ ನಟ ಪ್ರಭಾಸ್ ಹೊಂದಿಕೊಳ್ಳುತ್ತಾರೆ. ಆದರೆ ಬಾಹುಬಲಿ ಬಳಿಕ ಸಾಲು ಸಾಲು ಸೋಲು ನಟ ಪ್ರಭಾಸ್ ಅವರ ಬೆನ್ನು ಹತ್ತಿದ್ದವು. 'ರಾಧೆ ಶ್ಯಾಮ್' & 'ಆದಿಪುರುಷ್' ಸೋಲು ಪ್ರಭಾಸ್ ಅವರನ್ನ ಸಖತ್ ಕಂಗೆಡಿಸಿ, ಅಭಿಮಾನಿಗಳಲ್ಲೂ ಆತಂಕ ಹುಟ್ಟಿಸಿದ್ದವು. ಇದೇ ಕಾರಣಕ್ಕೆ 'ಸಲಾರ್' ಸಿನಿಮಾ ಮೇಲೆ ಕೋಟ್ಯಂತರ ಫ್ಯಾನ್ಸ್ ನಂಬಿಕೆಯ ಇಟ್ಟು ಕಾಯುತ್ತಿದ್ದರು. ಆ ನಿರೀಕ್ಷೆ ಸುಳ್ಳಾಗದೆ ಈಗ ನಿಜವಾಗಿ, ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬಂದಿದೆ.

ಹೀಗೆ ಸಲಾರ್ ಗೆಲುವಿನ ವೇಳೆ ಆರ್‌ಸಿಬಿ ಅಭಿಮಾನಿಗಳಿಗೆ ಕೂಡ ಖುಷಿಯೋ ಖುಷಿ ಅಂತ ಹೇಳಬಹುದು. ಯಾಕಂದ್ರೆ ನಟ ಡಾರ್ಲಿಂಗ್ ಪ್ರಭಾಸ್ ಅವರ ಕೈಯಲ್ಲಿ ಆರ್‌ಸಿಬಿಯ ಜೆರ್ಸಿ ನೋಡಿ ಫ್ಯಾನ್ಸ್ ಸಂಭ್ರಮ ಪಟ್ಟಿದ್ದಾರೆ. ಮತ್ತೊಂದು ಕಡೆ ಆರ್‌ಸಿಬಿ ತಂಡ & ಹೊಂಬಾಳೆ ಸಂಸ್ಥೆ ಜೊತೆಗೂಡಿ ಕೆಲಸ ಮಾಡುತ್ತಿವೆ. ಈ ಸಮಯದಲ್ಲೇ ಡಾರ್ಲಿಂಗ್ ಪ್ರಭಾಸ್ ಕೈಯಲ್ಲಿ ಆರ್‌ಸಿಬಿ ಜೆರ್ಸಿ ಕಂಡಿರುವುದು ಕುತೂಹಲ ಡಬಲ್ ಮಾಡಿದೆ.












Click it and Unblock the Notifications