ಡಾರ್ಲಿಂಗ್ ಪ್ರಭಾಸ್‌ರ ‘ಸಲಾರ್’ ನಟನ ಕನ್ನಡ ಸಿನಿಮಾ ಶೂಟಿಂಗ್ ಕಂಪ್ಲೀಟ್!
ಕನ್ನಡಿಗರು ನಿರ್ಮಾಣ ಮಾಡಿದ್ದ ತೆಲುಗು ಸಿನಿಮಾ 'ಸಲಾರ್' ಅಬ್ಬರಿಸಿದ್ದು, ಎಲ್ಲೆಲ್ಲೂ ಅದರದ್ದೇ ಸದ್ದು ಮೊಳಗಿದೆ. ಇದೇ ಸಮಯದಲ್ಲಿ ಸಲಾರ್ ನಟನ ಕನ್ನಡ ಸಿನಿಮಾ ಕೂಡ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಹಾಗಾದ್ರೆ ಯಾರದು ಸಲಾರ್ ನಟ? ಯಾವ ಕನ್ನಡ ಚಿತ್ರ ಮಾಡ್ತಾ ಇದ್ದಾರೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಯೆಸ್ 'ಭುವನಂ ಗಗನಂ' ಟೈಟಲ್ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡಿತ್ತು. ಸಲಾರ್ ಸಿನಿಮಾ ಖ್ಯಾತಿಯ ಪ್ರಮೋದ್ & ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಾ ಇರುವ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿ, ಅದ್ಧೂರಿಯಾಗಿ ಸೆಟ್ ಹಾಕಿ ಕೊನೇ ದಿನ ಚಿತ್ರೀಕರಣ ಮುಗಿಸಲಾಗಿದೆ. ಇದೇ ವೇಳೆ, ಸಿನಿಮಾ ಟೀಂ ಹಲವಾರು ಮಾಹಿತಿ ಹಂಚಿಕೊಂಡಿದೆ.

ಸಲಾರ್ ನಟ ಹೇಳಿದ್ದು ಏನು?
ಕನ್ನಡದ ನಟ ಪ್ರಮೋದ್ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಸಾಧನೆಗೆ ಕಾರಣವಾಗಿದ್ದು ಸಲಾರ್ ಸಿನಿಮಾ. ಹೀಗೆ ನಟ ಪ್ರಮೋದ್ ಮಾತನಾಡ್ತಾ, ನನ್ನ ಭಾಗದ ಶೂಟಿಂಗ್ ಅಕ್ಟೋಬರ್ ತಿಂಗಳಲ್ಲೇ ಮುಗಿದಿತ್ತು. ತುಂಬಾ ಚೆನ್ನಾಗಿ ಮೂಡಿಬಂದಿದ್ದು ಅದ್ಭುತ ಶೂಟಿಂಗ್ ಸೆಟ್ ಹಾಕಿದ್ದಾರೆ. ಈ ಸಿನಿಮಾದ ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಲವರ್ ಬಾಯ್ ಆಗಿ ನಾನು ಕಾಣಿಸಿಕೊಂಡಿಲ್ಲ ಎಂದು ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದ್ದಾರೆ.
ಕರಾವಳಿ ಪ್ರತಿಭೆ ಹೇಳಿದ್ದು ಏನು?
ನಟ ಪೃಥ್ವಿ ಅಂಬರ್, SVC ಫಿಲ್ಮಂಸ್ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಬೇಕು ಎಂದರು. ಒಬ್ಬ ಸ್ಟ್ರಾಂಗ್ ಪ್ರೊಡ್ಯೂಸರ್ ಸಿಗುವುದು ಕಷ್ಟ. ಸಿನಿಮಾ ಕಂಟೆಂಟ್‌ಗೆ ಏನು ಬೇಕೋ ಅದನ್ನು ಮನಸಾರೆ ತುಂಬಾ ಪ್ರೀತಿ ಇಟ್ಟು ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ನನ್ನ ಪಾತ್ರವನ್ನ ನಾನು, ತುಂಬಾ ಖುಷಿಯಿಂದ ನಿರ್ವಹಿಸಿದ್ದೇನೆ. ತುಂಬಾ ಫ್ಯಾಷನೇಟೆಡ್ ಆಗಿ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಇಡೀ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ಸಿನಿಮಾ ಟೀಂ ಹೇಗಿದೆ ನೋಡಿ
ದಿಯಾ ಖ್ಯಾತಿ ಪೃಥ್ವಿ ಅಂಬಾರ್ & ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕರಾಗಿ, ಈ ಸಿನಿಮಾದಲ್ಲಿ ನಟಿಸಿದ್ದಾರೆ. ಭುವನಂ ಗಗನಂ ಸಿನಿಮಾಗೆ ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ರಾಜರು ಎಂಬ ಸಿನಿಮಾ ಮಾಡಿದ್ರು. ಇದೀಗ ಭುವನಂ ಗಗನಂ ಮೂಲಕ ಮತ್ತೊಂದು ಫ್ರೆಶ್ ಕಥೆಯನ್ನು ಹೇಳೋದಿಕ್ಕೆ ಬರ್ತಿದ್ದಾರೆ. ಹಾಗೂ ಈ ಸಿನಿಮಾಗೆ ನಿರ್ಮಾಪಕ ಎಂ ಮುನೇಗೌಡ ಎಸ್‌ವಿಸಿ ಫಿಲ್ಮಂಸ್ ಪ್ರೊಡಕ್ಷನ್ ಅಡಿ, ಭುವನಂ ಗಗನಂಗೆ ಹಣ ಹಾಕಿದ್ದಾರೆ.
ಈ ಸಿನಿಮಾ ಕಥೆ ಹೇಗಿದೆ?
ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರವನ್ನ ಹೊಂದಿದೆ. ನಗರ, ಹಳ್ಳಿ 2 ಬ್ಯಾಕ್ ಡ್ರಾಪ್‌ನಲ್ಲಿ ನಡೆಯುವ ಕಥೆ ಇದಾಗಿದ್ದು, ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿ ರಚೆಲ್ ಡೇವಿಡ್ ನಟಿಸಿದ್ದಾರೆ, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು & ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಮತ್ತೆ ಚೇತನ್ ದುರ್ಗ ತಾರಾಬಳಗದಲ್ಲಿ ಇದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ ಜತೆ ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಈ ಸಿನಿಮಾಗೆ ಇದೆ.
ಒಟ್ನಲ್ಲಿ ಟೈಟಲ್ ಮೂಲಕ ಗಮನ ಸೆಳೆದಿದ್ದ 'ಭುವನಂ ಗಗನಂ' ಈಗ ಶೂಟಿಂಗ್ ಮುಗಿಸಿ, ಬೆಳ್ಳಿತೆರೆ ಮೇಲೂ ಅದೇ ರೀತಿ ಸದ್ದು ಮಾಡಲು ಮುಂದಾಗಿದೆ. ಇನ್ನೇನು ಶೀಘ್ರದಲ್ಲೇ ಈ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಸಾಗಿದ್ದು, ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಬಹುದು ಎನ್ನಲಾಗಿದೆ.












Click it and Unblock the Notifications