ಬಿಗ್ ಬಾಸ್ ಪ್ರೇಮಿಗಳ ಕಥೆ: ರೂಪೇಶ್‌ ಶೆಟ್ಟಿ-ಸಾನ್ಯಾ ಐಯ್ಯರ್ ಮದುವೆ ಯಾವಾಗ?

ಪ್ರತಿಯೊಂದು ಬಿಗ್‌ ಬಾಸ್‌ ಸೀಸನ್‌ ನಲ್ಲಿ ಒಂದೊಂದು ಪ್ರೇಮಕಥೆಯನ್ನ ನೋಡಿದ್ದೇವೆ. ಕೆಲವರಿಗೆ ಬಿಗ್‌ ಬಾಸ್‌ ಮನೆಯೊಳಗೆ ಲವ್‌ ಶುರುವಾಗಿದ್ರೆ, ಇನ್ನೂ ಕೆಲವರಿಗೆ ಬಿಗ್‌ ಬಾಸ್‌ ಮನೆಯಿಂದ ಹೊರಗೆ ಬಂದ್ಮೇಲೆ ಲವ್‌ ಶುರುವಾಗಿರುತ್ತೆ. ಮತ್ತೆ ಕೆಲವರು ಅದು ಕೇವಲ ಫ್ರೆಂಡ್‌ಶಿಪ್ ಅಂತಷ್ಟೇ ಹೇಳಿಕೊಂಡಿದ್ದೂ ಇದೆ. ಇದೀಗ ಇಲ್ಲೊಂದು ಜೋಡಿ ಬಿಗ್ ಬಾಸ್‌ ಮನೆಯೊಳಗೆ ಇಬ್ಬರೂ ಲವ್ ಮಾಡುತ್ತಿದ್ದಾರೆ ಅಂತ ಅನುಮಾನ ಹುಟ್ಟಾಕಿದಂತವರು ಅಂದ್ರೆ. ಅದು, ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್.

ಹೌದು, ಬಿಗ್‌ ಬಾಸ್‌ ಸೀಸನ್‌ 11 ರ ವಿನ್ನರ್‌ ಆಗಿ ಹನುಮಂತ ಕಪ್‌ ಗೆದಿದ್ದಾರೆ. ಅಲ್ಲದೇ ಬಿಗ್‌ ಬಾಸ್‌ 11 ರ ಸೀಸನ್‌ನಲ್ಲೂ ಭವ್ಯ ಹಾಗೂ ತ್ರಿವಿಕ್ರಮ್‌ ನಡುವೆ ಒಳ್ಳೆಯ ಕೆಮಿಸ್ಟ್ರಿ ಇದೆ. ಇಬ್ಬರು ಲವ್‌ ಮಾಡ್ತಿದ್ದಾರೆ ಎನ್ನಲಾಗಿತ್ತು. ಇದೀಗ ನಾವಿಬ್ಬರು ಒಳ್ಳೆಯ ಫ್ರೆಂಡ್ಸ್‌ ಅಷ್ಟೇ ಎಂದು ತ್ರಿವಿಕ್ರಮ್‌ ಹಾಗೂ ಭವ್ಯ ಸ್ಪಷ್ಟನೆ ನೀಡಿದ್ದಾರೆ. ಆದರೆ, ಬಿಗ್‌ ಬಾಸ್‌ 9 ರ ಸೀಸನ್‌ನಲ್ಲಿ ರೂಪೇಶ್‌ ಶೆಟ್ಟಿ ಅವರು ಗೆಲುವು ಸಾಧಿಸಿದ್ರು. ಅಲ್ಲದೇ 9 ಸೀಸನ್‌ ನಲ್ಲಿ ಸಾನ್ಯಾ ಐಯ್ಯರ್ ಹಾಗೂ ರೂಪೇಶ್‌ ಶೆಟ್ಟಿ ಅವರ ಮಧ್ಯ ಲವ್‌ ಇತ್ತು ಎಂದು ಹೇಳಲಾಗಿದೆ.

Roopesh Shetty Clarification About His Marriage With Sanya Iyer

ಬಿಗ್ ಬಾಸ್ ಮನೆಯೊಳಗೆ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಇಬ್ಬರ ಕೆಮಿಸ್ಟ್ರಿ ಇಂತಹದ್ದೊಂದು ಗುಮಾನಿಯನ್ನು ಹುಟ್ಟಾಕಿದ್ದು ನಿಜ. ಆದರೆ, ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಈ ಜೋಡಿ ತಮ್ಮ ಲವ್ ಸ್ಟೋರಿ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಮದುವೆ ಬಗ್ಗೆ ಅಂತೂ ಎಲ್ಲೂ ಮಾತಾಡಿಲ್ಲ. ಸಾನ್ಯಾ ಐಯ್ಯರ್‌ ಬರ್ತಡೆ ಸಂಭ್ರಮದಲ್ಲಿ ಮಾತ್ರ ರೂಪೇಶ್‌ ಶೆಟ್ಟಿ ಅವರು ಕಾಣಿಸಿಕೊಂಡಿದ್ದು, ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ಮಾಡಿತ್ತು.

ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ರೂಪೇಶ್ ಶೆಟ್ಟಿ 'ಅಧಿಪತ್ರ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಇದೇ ಫೆಬ್ರವರಿ 7ರಂದು ಬಿಡುಗಡೆಯಾಗುತ್ತಿದೆ. 'ಅಧಿಪತ್ರ' ಸಿನಿಮಾದ ಪ್ರಚಾರದಲ್ಲಿರುವ ರೂಪೇಶ್‌ ಶೆಟ್ಟಿಯವರು ಸಾನ್ಯಾ ಐಯ್ಯರ್ ಜೊತೆ ಮದುವೆ ಯಾವಾಗ? ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೂ ಆ ಬಾಂಧವ್ಯ ಹಾಗೇ ಮುಂದುವರೆದಿದೆಯಾ? ಇಬ್ಬರೂ ಮದುವೆ ಆಗುತ್ತಾರಾ? ಎಲ್ಲಿವರೆ ಬಂದಿದೆ ಇಬ್ಬರ ಲವ್ ಸ್ಟೋರಿ ಅನ್ನೋದನ್ನು ಓಪನ್ ಆಗಿ ಹೇಳಿದ್ದಾರೆ.

ಜಾಹ್ನವಿ ಚಾನೆಲ್ ಯೂಟ್ಯೂಬ್ ಚಾನೆಲ್‌ಗೆ ನೀಡದ ಸಂದರ್ಶನದಲ್ಲಿ ರೂಪೇಶ್‌ ಶೆಟ್ಟಿ ತಮ್ಮ ಲವ್ ಸ್ಟೋರಿ, ಸಾನ್ಯಾ ಐಯ್ಯರ್ ಹಾಗೂ ಮದುವೆ ಬಗ್ಗೆ ಓಪನ್ ಆಗಿ ಮಾಡಿದ್ದಾರೆ. ನಿಮ್ಮ ಹಾಗೂ ಸಾನ್ಯಾ ಮದುವೆ ಯಾವಾಗ? ಎಂದು ನೇರವಾಗಿ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ರೂಪೇಶ್‌ ಶೆಟ್ಟಿ ನೀವೇನು ಡೈರೆಕ್ಟ್ ಆಗಿ ಮದುವೆಗೆ ಬಂದುಬಿಟ್ರಿ. ಆ ತರಹದ ವಿಚಾರನೇ ಇಲ್ಲ. ನಾವು ತುಂಬಾನೇ ಒಳ್ಳೆಯ ಫ್ರೆಂಡ್ಸ್ ಆಗಿದ್ದೇವೆ. ಹೊರಗೆ ಬಂದ್ಮೇಲೂ ತುಂಬಾ ಒಳ್ಳೆ ಸ್ನೇಹಿತರಾಗಿದ್ದೇವೆ. ಕಾಲ್ ಮಾಡುತ್ತೇವೆ, ಮಾತಾಡುತ್ತೇವೆ. ಮೊನ್ನೆ ಅವರ ಸಿನಿಮಾ ರಿಲೀಸ್‌ ಇದ್ದಾಗ ಬರ್ತ್‌ಡೇ ದಿನಾನೂ ಊರಿಂದ ಬಂದಿದ್ದೇನೆ. ಆತರ ಎಫರ್ಟ್ಸ್ ಇದ್ದೇ ಇರುತ್ತೆ. ಯಾಕಂದ್ರೆ ಫ್ರೆಂಡ್‌ ಅಂದ್ಮೇಲೆ ಫ್ರೆಂಡ್. ಅದು ಮದುವೆವರೆಗೂ ಹೋಗುವಂತಹ ಫ್ರೆಂಡ್‌ಶಿಫ್ ಅಲ್ಲ ಅನ್ನೋ ಕ್ಲಾರಿಟಿ ನಮಗೆ ಇದೆ ಎಂದಿದ್ದಾರೆ.

ಇನ್ನೂ ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಅವರು, ಅವರ ಕೆಲಸದಲ್ಲಿ ಬ್ಯುಸಿ ಇದ್ದಾರೆ. ತಾನು ತನ್ನ ಕೆಲಸದಲ್ಲಿ ಬ್ಯುಸಿ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮಧ್ಯದಲ್ಲಿ ಯಾವಾಗಲಾದರೂ ಫೋನ್ ಮಾಡಿ ಮಾತಾಡೋದು, ಭೇಟಿಯಾಗೋದು ಇರುತ್ತೆ. ಇದು ಕೇವಲ ಪ್ಯೂರ್ ಫ್ರೆಂಡ್‌ಶಿಫ್. ಇದರಲ್ಲಿ ಮದುವೆ ಎಲ್ಲ ಡೌಟ್ ಎಂದು ರೂಪೇಶ್‌ ಶೆಟ್ಟಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ಇರುವಾಗಲೂ ನಿಜವಾದ ಸ್ನೇಹವೇ ಇತ್ತು. ಬಿಗ್‌ಬಾಸ್ ಮನೆಯೊಳಗೆ ಹೋದಾಗ ಯಾರಾದರೂ ಬೇಕಾಗುತ್ತಾರೆ. ಒಳ್ಳೆಯ ಕನೆಕ್ಷನ್ ಸಿಕ್ಕಿದರೆ, ಅದು ಒಳ್ಳೆಯ ಗಿಫ್ಟ್ ಅಂತ ಅನಿಸುತ್ತೆ. ಹೊರಗಡೆ ಬಂದಾಗ ಆ ಫ್ರೆಂಡ್‌ಶಿಪ್ ಹಾಗೇ ಇರುತ್ತೆ. ಒಳಗಡೆ ಕಂಡಿದ್ದು ಲವ್ ಅಂತಾನೇ ಹೇಳುವುದಕ್ಕೆ ಆಗಲ್ಲ. ಒಳಗಡೆ ಇರುವ ಫ್ರೆಂಡ್‌ಶಿಪ್‌ ಕೂಡ ಲವ್ ತರ ಕಾಣಬಹುದು. ಲವ್ ಅಂದರೆ ಅದೊಂತರ ಕಮಿಟ್ಮೆಂಟ್ ಅಲ್ವಾ? ಅದಕ್ಕೆ ಹಲವು ಹಂತಗಳು ಇರುತ್ತವೆ. ಸದ್ಯ ಲವ್ ಇಲ್ಲ ಅನ್ನೋದು ಸತ್ಯ. ಫ್ರೆಂಡ್‌ಶಿಪ್ ಆದ್ಮೇಲೆ ಲವ್ ಆಗಬಹುದು ಅದು ಒಳ್ಳೆಯ ಪ್ರಶ್ನೆ ಎಂದು ಕೊನೆಗೂ ಗೊಂದಲದ ಮಾತುಗಳನ್ನ ರೂಪೇಶ್‌ ಶೆಟ್ಟಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+