Actor Darshan: ದರ್ಶನ್ ಬಿಡುಗಡೆಗಾಗಿ ಒಂದಾಗ್ತಿದೆ ಕನ್ನಡ ಚಿತ್ರರಂಗ! ಕೈ ಜೋಡಿಸ್ತಾರಾ ಸುದೀಪ್, ಯಶ್‌?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬಿಡುಗಡೆ ಯಾವಾಗ ಎನ್ನುವುದು ಯಾರಿಗೂ ಗೊತ್ತಿಲ್ಲ. ಪೊಲೀಸರ ಬಳಿ ಬಲವಾದ ಸಾಕ್ಷಿಗಳಿವೆ ಎನ್ನಲಾಗಿದ್ದು, ಪವಿತ್ರಾ ಗೌಡ, ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಎಲ್ಲಾ ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿದ್ದಾರೆ ಎನ್ನಲಾಗಿದೆ. ದರ್ಶನ್‌ರನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಅಭಿಮಾನಿಗಳು, ಕುಟುಂಬದವರು ದೇವರ ಮೊರೆ ಹೋಗಿದ್ದಾರೆ.

ಇದೀಗ ದರ್ಶನ್‌ರ ಬಿಡುಗಡೆಗೆ ಪ್ರಾರ್ಥಿಸಲು ಸ್ಯಾಂಡಲ್‌ವುಡ್‌ ಕಲಾವಿದರ ನೇತೃತ್ವದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತಿದೆ. ಮೂಲಗಳ ಪ್ರಕಾರ ಆಗಸ್ಟ್ 14ರಂದು ಬೆಂಗಳೂರಿನಲ್ಲಿರುವ ಕಲಾವಿದರ ಸಂಘದ ಕಚೇರಿಯಲ್ಲಿ ವಿಶೇಷ ಪೂರ್ಣಾಹುತಿ ಹೋಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಕಲಾವಿದರಿಗು ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.

Rockline Venkatesh and Doddanna doinh thist Release Darshan from Parappana Agrahara Jail

ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ಈ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಸ್ಯಾಂಡಲ್‌ವುಡ್‌ನ ಹಿರಿಯ ನಟ ಶಿವರಾಜ್‌ಕುಮಾರ್, ಉಪೇಂದ್ರ, ಸುದೀಪ್ ಮತ್ತು ಯಶ್‌ ಅವರಿಗೂ ಆಹ್ವಾನ ನೀಡಲಾಗಿದೆ. ಪೂಜೆಯಲ್ಲಿ ಇವರು ಭಾಗವಹಿಸುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

ಅನೇಕ ಕಲಾವಿದರು ಭಾಗಿ

ಚಂದನವನದಲ್ಲಿ ನಟ ದರ್ಶನ್‌ಗೆ ಸಾಕಷ್ಟು ಆತ್ಮೀಯರು ಇದ್ದಾರೆ. ಅನೇಕ ಕಲಾವಿದರು ಈ ಯಾಗದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಧನ್ವೀರ್, ವಿನೋದ್ ಪ್ರಭಾಕರ್ ಸೇರಿದಂತೆ ಅನೇಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾ ಮಾಡುತ್ತಾ ಸಿನಿಮಾ ಕಲಾವಿದರು, ಚಿತ್ರಮಂದಿರಗಳಿಗೆ ಜೀವ ತುಂಬುತ್ತಿದ್ದ ದರ್ಶನ್‌ ಜೈಲು ಪಾಲಾಗಿದ್ದಾರೆ. ಇನ್ನೂ ಕೆಲವು ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿದ್ದಾರೆ. ದೊಡ್ಡ ನಟರು ವರ್ಷಕ್ಕೆ ಕನಿಷ್ಠ ಎರಡು ಸಿನಿಮಾ ಮಾಡಬೇಕು ಎಂದು ಚಿತ್ರಮಂದಿರಗಳ ಮಾಲೀಕರು ಕೂಡ ಮನವಿ ಮಾಡಿಕೊಂಡಿದ್ದರು. ಈಗ ದರ್ಶನ್ ಜೈಲು ಸೇರಿದ್ದರಿಂದ ಚಿತ್ರರಂಗಕ್ಕೆ ಕೂಡ ದೊಡ್ಡ ಹೊಡೆತವಾಗಿದೆ.

ಈ ವರ್ಷದ ಮೊದಲಾರ್ಧದಲ್ಲಿ ಕನ್ನಡ ಸಿನಿಮಾಗಳು ಯಾವೂ ಅಷ್ಟಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ. ಇನ್ನಾದರೂ ಕನ್ನಡ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣಲಿ ಎನ್ನುವುದು ಕೂಡ ಪೂಜೆ ಮಾಡಿಸಲು ಮತ್ತೊಂದು ಕಾರಣವಾಗಿರಬಹುದು.

ದರ್ಶನ್‌ ಅವರು ಬೇಗ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಪತ್ನಿ ವಿಜಯಲಕ್ಷ್ಮಿ ಕೂಡ ದೇವರ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಕೊಲ್ಲೂರಿನಲ್ಲಿ ಯಾಗ ಕೂಡ ಮಾಡಿಸಿದ್ದರು. ಅಭಿಮಾನಿಗಳು ಕೂಡ ದರ್ಶನ್‌ರ ಫೋಟೊಗಳನ್ನು ದೇವಸ್ಥಾನದಲ್ಲಿಟ್ಟು ಪೂಜೆ ಮಾಡಿಸುತ್ತಿದ್ದು, ನಟನ ಬಿಡುಗಡೆಗೆ ಪ್ರಾರ್ಥನೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+