Bigg Boss Kannada: ಕಿಚ್ಚ ಸುದೀಪ್ ಅಲ್ಲ ಇನ್ಮುಂದೆ ರಾಕಿಂಗ್ ಸ್ಟಾರ್ ಯಶ್ ಬಿಗ್‌ಬಾಸ್ ಕನ್ನಡ ನಿರೂಪಣೆ...
ರಾಕಿಂಗ್ ಸ್ಟಾರ್ ಯಶ್ & ಕಿಚ್ಚ ಸುದೀಪ್ ಬಗ್ಗೆ ನಿಮಗೆ ಚನ್ನಾಗಿಯೇ ಗೊತ್ತು. ಇಬ್ಬರೂ ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ಸ್. ಹೀಗಿದ್ದಾಗ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮ ಬಿಟ್ಟು ಹೊರಗೆ ಬರಲು ಕಿಚ್ಚ ಸುದೀಪ್ ಅವರು ನಿರ್ಧಾರ ಮಾಡಿದ್ದಾರೆ. ಹೀಗಿದ್ದಾಗಲೇ ಈ ರೀತಿ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮ ಬಿಟ್ಟು ಹೊರಗೆ ಬರುತ್ತಿರುವ ಕಿಚ್ಚ ಸುದೀಪ್ ಅವರ ಜಾಗಕ್ಕೆ, ಕನ್ನಡದ ಕೆಜಿಎಫ್ ಹೀರೋ ರಾಕಿಂಗ್ ಸ್ಟಾರ್ ಯಶ್ ಅವರು ಭರ್ಜರಿಯಾಗಿಯೇ..
ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ಕನ್ನಡಿಗರಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಕಿಚ್ಚ ಸುದೀಪ್ ಅವರೇ ಸತತ 11ನೇ ಆವೃತ್ತಿಯಲ್ಲಿ ನಿರೂಪಣೆ ಹೊಣೆ ಹೊತ್ತು ಕಾರ್ಯಕ್ರಮ ಕೂಡ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತೊಂದು ಕಡೆ ಈ ಸೀಸನ್‌ನ ಬಿಗ್ ಬಾಸ್‌ಗೆ ಭರ್ಜರಿ ಟಿಆರ್‌ಪಿ ಕೂಡ ಸಿಕ್ಕಿದ್ದು, ಪ್ರಸಕ್ತ ವಾರ 9.9 ಅಂಕ ಪಡೆದು ಹೊಸ ಇತಿಹಾಸ ಸೃಷ್ಟಿ ಮಾಡಿದೆ ಕಾರ್ಯಕ್ರಮ. ಇಂತಹ ಸಮಯದಲ್ಲೇ ದಿಢೀರ್ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಬಿಟ್ಟು ಹೋಗುತ್ತಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಈ ಸಮಯದಲ್ಲೇ ಕೆಜಿಎಫ್ ಹೀರೋ ರಾಕಿಂಗ್ ಸ್ಟಾರ್ ಯಶ್ ಅವರು ಸುದೀಪ್ ಅವರ ಜಾಗಕ್ಕೆ...

ರಾಕಿಂಗ್ ಸ್ಟಾರ್ ಯಶ್ ಎಂಟ್ರಿ?
ಕಿಚ್ಚ ಸುದೀಪ್ ಅವರೇ ತಿಳಿಸಿದ ಪ್ರಕಾರ, ಮುಂದಿನ ಸೀಸನ್‌ನಲ್ಲಿ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದಿಲ್ಲ. ಹಿಗಾಗಿಯೇ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹೊಸ ಚರ್ಚೆ ಶುರುವಾಗಿದ್ದು, ಕಿಚ್ಚ ಸುದೀಪ ಅವರ ಜಾಗಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರು ಬರಲಿದ್ದಾರೆ. ಈ ಮೂಲಕ ಮುಂದಿನ ಸೀಸನ್ ಅಂದ್ರೆ ಬಿಗ್ ಬಾಸ್ 12ನೇ ಆವೃತ್ತಿಯಿಂದ, ರಾಕಿಂಗ್ ಸ್ಟಾರ್ ಯಶ್ ಅವರೇ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆಂಬ ಸುದ್ದಿ ಹಬ್ಬಿದೆ.
ದೊಡ್ಡ ಕುತೂಹಲ ಕೂಡ...
ರಾಕಿಂಗ್ ಸ್ಟಾರ್ ಯಶ್ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಿರೂಪಣೆ ಮಾಡುವ ಬಗ್ಗೆ ಇನ್ನು ಯಾವುದೇ ರೀತಿ ಅಧಿಕೃತ ಮಾಹಿತಿಗಳು ಸಿಕ್ಕಿಲ್ಲ. ಹೀಗಾಗಿ ಈಗ ಸೋಷಿಯಲ್ ಮೀಡಿಯಾ ತುಂಬಾ ಹಬ್ಬಿರುವ ಸುದ್ದಿ ಸುಳ್ಳು ಅಥವಾ ವದಂತಿ ಎನ್ನಲಾಗುತ್ತಿದೆ. ಹೀಗಾಗಿ ಈ ಮಾತು ನಿಜವಾಗುತ್ತಾ? ರಾಕಿಂಗ್ ಸ್ಟಾರ್ ಯಶ್ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುತ್ತಾರಾ? ಎಂಬ ಪ್ರಶ್ನೆಯನ್ನ ಜನರು ಕೇಳುತ್ತಿದ್ದಾರೆ. ಈ ಬಗ್ಗೆ ದೊಡ್ಡ ಕುತೂಹಲ ಕೂಡ ಮೂಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಗಳು ಸಿಗುವ ತನಕ ಈ ಸುದ್ದಿ ಗ್ಯಾರಂಟಿ ಇಲ್ಲ.
ಕಿಚ್ಚ ಸುದೀಪ್ ಅಭಿಮಾನಿಗಳು ಈಗ ಬೇಸರಗೊಂಡಿದ್ದು 'ಕನ್ನಡ ಬಿಗ್‌ಬಾಸ್' ಕಾರ್ಯಕ್ರಮ ಇದೀಗ ಎಲ್ಲೆಲ್ಲೂ ಸದ್ದು ಮಾಡ್ತಿದೆ. 'ಬಿಗ್‌ಬಾಸ್' ನಿರೂಪಣೆ ಹೊಣೆಯನ್ನು ಸುದೀಪ್ ಅವರು ಬಿಟ್ಟು ಬಿಡಲು ನಿರ್ಧಾರ ಪ್ರಕಟಿಸಿದ ನಂತರ ತಲ್ಲಣ ಸೃಷ್ಟಿಯಾಗಿದೆ. ಹೀಗಾಗಿ ಮುಂದೆ ಇದು ಎಲ್ಲಿಗೆ ಬಂದು ನಿಲ್ಲುತ್ತೆ? ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನಿರೂಪಣೆ ಮಾಡುವ ಹೊಸ ಸ್ಟಾರ್ ನಟ ಅಥವಾ ನಟಿ ಯಾರು? ಅನ್ನೋ ಪ್ರಶ್ನೆಗಳಿಗೆ ಉತ್ತರ ಮುಂದೆ ಸಿಗಬೇಕಿದೆ.












Click it and Unblock the Notifications