Rishab Shetty: ದೈವ ಅಣಕಿಸಿದ್ದ ರಣ್ವೀರ್ ಸಿಂಗ್; ಹೆಸರು ಹೇಳದೆ "ನನಗೆ ಮುಜುಗರ ಆಗುತ್ತೆ" ಎಂದ ರಿಷಬ್
ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ ಸಮಾರಂಭದಲ್ಲಿ ರಣ್ವೀರ್ ಸಿಂಗ್ ದೈವವನ್ನು ಅಣಕಿಸಿ ಕೆಂಗಣ್ಣಿಗೆ ಗುರಿಯಾಗಿದ್ದರು. ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ರಣ್ವೀರ್ ಸಿಂಗ್ ವೇದಿಕೆ ಮೇಲೆ ರಿಷಬ್ ಶೆಟ್ಟಿಯ ಸಿನಿಮಾ 'ಕಾಂತಾರ ಚಾಪ್ಟರ್ 1' ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ದೈವದ ದೃಶ್ಯವನ್ನು ಮಿಮಿಕ್ರಿ ಮಾಡಿ ಕನ್ನಡಿಗರು, ಕರಾವಳಿ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಗ್ಗೆ ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ರಿಷಬ್ ಶೆಟ್ಟಿ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಬಿಹೈಂಡ್ವುಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ 'ಕಾಂತಾರ' ಸಿನಿಮಾ ಮಾಡುವುದು ಎಷ್ಟು ರಿಸ್ಕ್ ಎಂಬುವ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ರಣ್ವೀರ್ ಸಿಂಗ್ ಹೆಸರನ್ನು ತೆಗೆದುಕೊಳ್ಳದೆ, ದೈವವನ್ನು ಅಣಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಕಾಂತಾರ' ಸೀರಿಸ್ ಅನ್ನು ಮಾಡುವಾಗ ಹಿರಿಯರ ಸಲಹೆಯನ್ನು ತೆಗೆದುಕೊಂಡು ದೈವಕ್ಕೆ ಅಪಚಾರ ಆಗದಂತೆ ಸಿನಿಮಾ ಮಾಡಿದ್ದಾಗಿ ರಿಷಬ್ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದಾರೆ.

ಜನರ ಭಾವನೆಗಳಿಗೆ ಧಕ್ಕೆ ಆಗದಂತೆ 'ಕಾಂತಾರ' ಸಿನಿಮಾಗಳಲ್ಲಿ ದೈವವನ್ನು ತೋರಿಸಲಾಗಿದೆ. ಆದರೆ, ಒಮ್ಮೆ ಸಿನಿಮಾ ರಿಲೀಸ್ ಆದ್ಮೇಲೆ ಎಲ್ಲರೂ ದೈವದ ವೇಷ ಧರಿಸಿ ಮಿಮಿಕ್ರಿ ಮಾಡುವುದಕ್ಕೆ ಮುಂದಾಗಿದ್ದಾರೆ. ತಾನು ಹೋದ ಕಡೆಯಲ್ಲೆಲ್ಲ ಇದು ನಡೆದಾಗ ನನಗೆ ಮುಜುಗರವಾಗುತ್ತೆ ಎಂದು ರಿಷಬ್ ಶೆಟ್ಟಿ ಈ ಸಂದರ್ಶನಲ್ಲಿ ಹೇಳಿದ್ದಾರೆ.
"ನನಗೆ ಮುಜಿಗರ ಆಗುವಂತೆ ಮಾಡುತ್ತೆ"
ಬಿಹೈಂಡ್ವುಡ್ ಸಂದರ್ಶನದಲ್ಲಿ ರಣ್ವೀರ್ ಸಿಂಗ್ ಹೆಸರನ್ನು ತೆಗೆದುಕೊಳ್ಳದೆ ಇಂತಹ ಘಟನೆಗಳು ತನಗೆ ಮುಜುಗರ ಆಗುವಂತೆ ಮಾಡುತ್ತೆ ಎಂದಿದ್ದಾರೆ. "ನನಗೆ ಅದು ಮುಜುಗರ ಆಗುವಂತೆ ಮಾಡುತ್ತದೆ. ಇಲ್ಲಿ ಬಹುಪಾಲು ಸಿನಿಮಾ ಹಾಗೂ ಅಭಿನಯಕ್ಕೆ ಸಂಬಂಧಿಸಿದ್ದು, ಅದರಲ್ಲಿ ದೈವದ ಅಂಶವು ಅತೀ ಸೂಕ್ಷ್ಮ ಹಾಗೂ ಪವಿತ್ರವಾದದ್ದು. ಎಲ್ಲಿಗೆ ಹೋದರೂ, ಅವರಿಗೆ ದೈವದ ಅನುಕರಣೆಯನ್ನು ಮಾಡದೆ ಇರುವಂತೆ ಕೇಳಿಕೊಳ್ಳುತ್ತೇನೆ. ಇದು ಜನರ ಭಾವನೆಗಳಲ್ಲಿ ಆಳವಾಗಿ ಉಳಿದುಕೊಂಡಿದೆ" ಎಂದು ರಿಷಬ್ ಶೆಟ್ಟಿ ಸಂದರ್ಶನದಲ್ಲಿ ಹೇಳಿದ್ದಾರೆ.

ಇದೇ ವೇಳೆ ರಿಷಬ್ ಹಾಗೂ ಸಿನಿಮಾ ತಂಡ ಖುದ್ದಾಗಿ ಮನವಿ ಮಾಡಿಕೊಂಡರೂ ಅನುಕರಣೆ ಮಾಡುವುದು ಹಾಗೂ ಅಣಕಿಸುವುದನ್ನು ನಿಲ್ಲಸದೆ ಇರುವುದಕ್ಕೆ ಬೇಸರವನ್ನು ಹೊರ ಹಾಕಿದ್ದಾರೆ. ಗೋವಾದಲ್ಲಿ ರಣ್ವೀರ್ ಸಿಂಗ್ ದೈವವನ್ನು ಅಣಕಿಸಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಾಗ ರಿಷಬ್ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೀಗ ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಷಮೆ ಕೇಳಿದ್ಧ ರಣ್ವೀರ್ ಸಿಂಗ್
ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಗೋವಾದಲ್ಲಿ ರಣ್ವೀರ್ ಸಿಂಗ್ ದೈವವನ್ನು ಅಣಿಸಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ತುಳುನಾಡಿನ ಜನರು ಹಾಗೂ ದೈವಾರಾಧಕರು ರಿಷಬ್ ಶೆಟ್ಟಿ ವಿರುದ್ಧವೂ ಅಸಮಧಾನ ಹೊರ ಹಾಕಿದ್ದರು. ದೇಶದೆಲ್ಲೆಡೆ ರಣ್ವೀರ್ ಸಿಂಗ್ ದೈವ ಅಣಕಿಸಿದ್ದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ರಿಷಬ್ ಶೆಟ್ಟಿ ಕೂಡ ರಣ್ವೀರ್ ಸಿಂಗ್ಗೆ ಅಣಕಿಸದೇ ಇರುವಂತೆ ಮನವಿ ಮಾಡಿದ್ದರೂ ನಿಲ್ಲಿಸಿರಲಿಲ್ಲ. ವಿವಾದ ಭುಗಿಲೆದ್ದ ಬೆನ್ನಲ್ಲೇ ರಣ್ವೀರ್ ಸಿಂಗ್ ಕ್ಷಮೆಯಾಚಿಸಿದ್ದರು.
"ನನ್ನ ಉದ್ದೇಶ ರಿಷಬ್ ಶೆಟ್ಟಿಯ ಅದ್ಭುತ ಅಭಿನಯವನ್ನು ಹೈಲೈಟ್ ಮಾಡುವುದಾಗಿತ್ತು. ನಾನೊಬ್ಬ ನಟನಾಗಿ ಇಂತಹ ದೃಶ್ಯಗಳಲ್ಲಿ ಪರ್ಫಾಮ್ ಮಾಡುವುದು ಎಷ್ಟು ಕಷ್ಟ ಅನ್ನೋದು ಗೊತ್ತಿದೆ. ಇದು ನನ್ನ ಉದ್ದೇಶವಾಗಿತ್ತು. ನಾನು ಈ ದೇಶದ ಎಲ್ಲಾ ಸಂಸ್ಕೃತಿ, ಆಚಾರ-ವಿಚಾರಗಳನ್ನು ಗೌರವಿಸುತ್ತೇನೆ. ಇದರ ಹೊರತಾಗಿ ನಾನು ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದರೆ, ಕ್ಷಮೆಯಾಚಿಸುತ್ತೇನೆ" ಎಂದು ರಣ್ವೀರ್ ಸಿಂಗ್ ಹೇಳಿದ್ದರು.
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications