‘ಟ್ರೋಲ್’ಗೆ ಟ್ರೋಲ್ ಮಾಡಿ ಟ್ರೆಂಡ್ ಆದ ರಿಯಲ್ ಸ್ಟಾರ್!
ನಟ ಉಪೇಂದ್ರ ಅವರ ಹೊಸ ಹಾಡಿನ ಅಬ್ಬರ ಬಲು ಜೋರಾಗಿದೆ. ಕೆಲವು ದಿನದ ಹಿಂದೆ ರಿಲೀಸ್ ಆಗಿದ್ದ 'ಟ್ರೋಲ್ ಸಾಂಗ್' ಬಲು ಸೌಂಡ್ ಮಾಡುತ್ತಿದ್ದು. 'UI' ಸಿನಿಮಾದ 2ನೇ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಅಲ್ಲದೆ ಅಭಿಮಾನಿಗಳು ಕೂಡ ಎಂಜಾಯ್ ಮಾಡ್ತಿದ್ದು, ಪರಭಾಷೆಯಲ್ಲೂ ಈ ಹಾಡು ಮಿಲಿಯನ್ ಮಿಲಿಯನ್ ವೀವ್ಸ್ & ಲೈಕ್ಸ್ ಗಿಟ್ಟಿಸುತ್ತಿದೆ.
ನಟ ಉಪೇಂದ್ರ ಈ ಬಾರಿ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಕಮಾಲ್ ಮಾಡೋಕೆ ಸಜ್ಜಾಗಿದ್ದಾರೆ. ಅದರಲ್ಲೂ, ಒಂದಾದ ನಂತರ ಒಂದು ಸೂಪರ್ ಹಿಟ್ ಸಾಂಗ್‌ನ ರಿಲೀಸ್ ಮಾಡುತ್ತಾ, ಉಪ್ಪಿ ಕನ್ನಡ ನಾಡಿನ ಜನರಿಗೆ ಹೆಜ್ಜೆ ಹೆಜ್ಜೆಗೂ ಸರ್ಪ್ರೈಸ್ ಕೊಡುತ್ತಿದ್ದಾರೆ. ಹೀಗೆ 'ಟ್ರೋಲ್ ಸಾಂಗ್' ರಿಲೀಸ್ ಮಾಡಿ ತಗಡು ಟು ಬೆಳ್ಳುಳ್ಳಿ ಕಬಾಬ್ ಬಗ್ಗೆ ಸಂಪೂರ್ಣ ವಿವರಣೆಯ ನೀಡಿದ್ದರು. ಕೆಲ ದಿನಗಳ ಹಿಂದೆ ತಮ್ಮ 'ಯುಐ' ಸಿನಿಮಾದ ಮೊದಲ ಹಾಡು ಉಪೇಂದ್ರ ರಿಲೀಸ್ ಮಾಡಿದ್ದರು. 'ನಂದು ತುಂಬಾ ದೊಡ್ಡದು.. ಅವನಿಗಿಂತ ನಿಂದು ಚಿಕ್ಕದು..' ಅಂತಾ ಟ್ರೆಂಡ್ ಹುಟ್ಟುಹಾಕಿ ಉಪ್ಪಿ ಗಮನವನ್ನು ಸೆಳೆದಿದ್ದರು. ಈಗ ಟ್ರೋಲ್‌ಗೆ ಟ್ರೋಲ್ ಮಾಡಿದ್ದಾರೆ!

ಸೋಷಿಯಲ್ ಮೀಡಿಯಾ ಫುಲ್ ಹಾವಳಿ!
ಉಪೇಂದ್ರ ಅವರು ತಮ್ಮ ಹೊಸ ಸಿನಿಮಾದ ಹೊಸ ಹಾಡು ರಿಲೀಸ್ ಮಾಡಿದ ನಂತರದಲ್ಲಿ ಎಲ್ಲೆಲ್ಲೂ ಹಾವಳಿ ಇಟ್ಟಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರು ಈ ಹಾಡನ್ನು, ಹಾಗೂ ಹಾಡಿನ ಸಾಹಿತ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಮೊದನಿಂದ ಹೀಗೆ ಉಪ್ಪಿ, ತಮ್ಮ ಹಾಡುಗಳ ಮೂಲಕ ಸದ್ದು ಮಾಡ್ತಿದ್ದಾರೆ. ಸ್ಪೆಷಲ್ ಸ್ಪೆಷಲ್ ಹಾಡುಗಳನ್ನು ನೀಡಿ ಸದಾ ಟ್ರೆಂಡ್ ಆಗಿ ಉಳಿಯುವ ಸಾಂಗ್ಸ್ ಕ್ರಿಯೇಟ್ ಮಾಡುತ್ತಾರೆ ಉಪ್ಪಿ. ಈಗಲೂ ಅಷ್ಟೇ ಅದೇ ರೀತಿಯಾಗಿ ಟ್ರೆಂಡಿಂಗ್ ಸಾಂಗ್ ಹುಟ್ಟುಹಾಕಿದ್ದಾರೆ.
'ಟ್ರೋಲ್ ಸಾಂಗ್' ಹಾಡಿನ ಲಿರಿಕ್ಸ್
ಉಪೇಂದ್ರ ಅವರೇ ನಿರ್ದೇಶನ & ನಟನೆ ಮಾಡಿದ್ದ ಉಪೇಂದ್ರ ಸಿನಿಮಾದ ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್, ಒನ್ ಮೋರ್ ಒನ್ ಮೋರ್ ಅನ್ನಬೇಕು.. ಹೆಂಗ್ ಪುಂಗ್ಲಿ... ಆಲ್ ರೈಟ್ ಮುಂದಕ್ಕೋಗೋಣ... ಸೇರಿದಂತೆ ಜೋಡೆತ್ತು... ಇದು ರಾಜ್ಯವೇ ಖುಷಿಪಡುವ ಸುದ್ದಿ... ನಾ ಡ್ರೈವರಾ, ನನ್ನ ಲವರಾ.. ಹೇ ತಗಡು, ಗುಮ್ಮಿಸಿಕೊಳ್ತೀಯಾ... ಕಂಜಾಜುಲೆಷನ್ಸ್ ಬ್ರದರ್.. ನಾನು ನಂದಿನಿ ಪಿಜಿಯಲ್ಲಿ ಇರ್ತಿನಿ.. ಡೋಲೋ 650 ಮಾತ್ರೆ ಬಿಸಿ ರಾಗಿಹಿಟ್ಟು... ಈ ಎಲ್ಲಾ ಟ್ರೋಲ್‌ಗಳು ಇದೀಗ ಉಪ್ಪಿ ಅವರ ಬಹು ನಿರೀಕ್ಷಿತ ಯುಐ (UI) ಸಿನಿಮಾ ಹಾಡಲ್ಲಿ ಫುಲ್ ಟ್ರೋಲ್ ಆಗಿವೆ.

ಹೀಗೆ ಉಪೇಂದ್ರ ಅವರು ಮತ್ತೊಮ್ಮೆ ಭಾರತೀಯ ಸಿನಿಮಾ ರಂಗದಲ್ಲಿ ಹವಾ ಎಬ್ಬಿಸಿದ್ದು, ಇನ್ನೇನು ಕೆಲವೇ ದಿನದಲ್ಲಿ ಯುಐ (UI) ಸಿನಿಮಾ ಕೂಡ ರಿಲೀಸ್ ಆಗಲಿದೆ. ಹಾಗೇ ಚಿತ್ರ ಬಿಡುಗಡೆ ಮಾಡಲು ಬೇಕಾಗಿರುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಟ್ರೇಲರ್ ಕೂಡ ರಿಲೀಸ್ ಆಗುವ ನಿರೀಕ್ಷೆ ಇದೆ.












Click it and Unblock the Notifications