Rashmika: ಪುರುಷರಿಗೂ ಪಿರಿಯಡ್ಸ್, ಆ ನೋವು ಆಗಬೇಕಂತೆ: ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?
Rashmika Mandanna: ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ತಮ್ಮ ಹೇಳಿಕೆಯಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರ 'ಥಾಮಾ' ಸಿನಿಮಾ ರಿಲೀಸ್ ಆಗಿ ಕಮಾಲ್ ಮಾಡಿತ್ತು. ನವೆಂಬರ್ 07ರಂದು ರಶ್ಮಿಕಾರ 'ದಿ ಗರ್ಲ್‌ಫ್ರೆಂಡ್' ಚಿತ್ರ ಬಿಡುಗಡೆಗೆ ಆಗುತ್ತಿದೆ. ಸದ್ಯ ರಶ್ಮಿಕಾ ಈ ಕಾರಣಕ್ಕೆ ಸುದ್ದಿಯಾಗಿಲ್ಲ. ಬದಲಾಗಿ ಅವರು ಪಿರಿಯಡ್ಸ್ ಕುರಿತು ಶೋವೊಂದರಲ್ಲಿ ಕಾಮೆಂಟ್ ಮಾಡಿ ಮಾತನಾಡಿದ್ದಾರೆ.
"ದಿ ಗರ್ಲ್‌ಫ್ರೆಂಡ್' ಪ್ರಚಾರ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ. ನಟ ಜಗಪತಿ ಬಾಬು ಅವರ ನಡೆಸಿಕೊಡುವ ಟಾಕ್ ಶೋ 'ಜಯಮ್ಮು ನಿಶ್ಚಿತಮುರ ಶೋಕು'ದಲ್ಲಿ ತಮ್ಮ ಚಿತ್ರದ ಪ್ರಚಾರಕ್ಕಾಗಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಸಹಾನುಭೂತಿ ಮತ್ತು ಮಹಿಳೆಯಾಗಿರುವುದರ ಅನುಭವದ ಬಗ್ಗೆ ಕೇಳಿದಾಗ ಒಂದಷ್ಟು ಮಾತನಗಳನ್ನು ಹಂಚಿಕೊಂಡಿದ್ದಾರೆ.

"ನನಗೆ ಪಿರಿಯಡ್ಸ್ ಆದಾಗ, ಇದು ಎಷ್ಟು ಅನಾನುಕೂಲ ತಂದೊಡ್ಡುತ್ತದೆ. ಆಗುವ ಕಷ್ಟದ ಕುರಿತು ಅವರು ಮಾತನಾಡಿದ್ದಾರೆ. ಮಹಿಳೆಯರಂತೆ ಪುರುಷರು ಒಂದು ದಿನ ಈ ಪಿರಿಯಡ್ಸ್ ನೋವು, ಕಷ್ಟ ಪಡೆಯಲು ಸಾಧ್ಯವಾದರೆ, ಮಹಿಳೆಯರು ಏನು ಅನುಭವಿಸುತ್ತಾರೆ ಎಂಬುದನ್ನು ಅವರಿಗೆ ಅರ್ಥವಾಗುತ್ತದೆ. ಅವರು ಹೇಳಿಕೆ ನೀಡುತ್ತಿದ್ದಂತೆ ಆ ವಿಡಿಯೋ ಬೈಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿರಿಯಡ್ಸ್, ಲಿಂಗ, ಸಹಾನುಭೂತಿ ಕುರಿತು ಕೆಲವು ಚರ್ಚೆಗಳು ಹುಟ್ಟುಹಾಕಿವೆ.
ಮಹಿಳೆಯರಿಗೂ ಋತುಚಕ್ರ ಪುರುಷರಿಗೂ ಬರಬೇಕು" ಎಂಬ ರಶ್ಮಿಕಾ ಅವರ ಕಾಮೆಂಟ್ ಆನ್‌ಲೈನ್ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತಗಿದೆ. ಕೆಲವರು ಅವರು ಇಂತಹ ಸಾಮಾನ್ಯವಾಗಿ ಸಂಪೂರ್ಣ ತಮಾಷೆಯಾಗಿ ಹೇಳಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಪ್ರಮಾಣಿಕವಾಗಿ ತಿಳಿಸಿದ್ದಾರೆ ಎಂದಿದ್ದಾರೆ. ಮತ್ತೆ ಕೆಲವು ಅವರ ಹೇಳಿಕೆ ಹಿಂದಿನ ಉದ್ದೇಶ ಪ್ರಶ್ನಿಸಿದರು. ಇಂತಹ ಮಾತುಗಳನ್ನು ಒಪ್ಪುವುದು ಅಥವಾ ಒಪ್ಪದಿರುವುದು ಸಿನಿಮಾ ಹೊರತಾಗಿಯು ಇರುವ ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದರು.
ದಿ ಗರ್ಲ್‌ಫ್ರೆಂಡ್ ಕೆಲವು ಸಿನಿಮಾಗಳಲ್ಲಿ ಬ್ಯೂಸಿ
2025ರ ಒಂದೇ ವರ್ಷದಲ್ಲಿ ರಶ್ಮಿಕಾರ ಐದನೇ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಬಿಡುಗಡೆ ಆಗಲಿದೆ. ಛಾವಾ, ಕುಬೇರ್, ಸಿಕಂದರ್, ಥಾಮಾ ಈಗಾಗಲೇ ಬಿಡುಗಡೆ ಆಗಿವೆ. ಇದೀಗ ನವೆಂಬರ್ 7ರಂದು ಹೊಸ ಸಿನಿಮಾ ಬಿಡುಗಡೆ ಆಗುತ್ತಿದೆ. ರಾಹುಲ್ ರವೀಂದ್ರನ್ ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ ಕೂಡ ನಾಯಕ ನಟರಾಗಿದ್ದು, ಈಗಾಗಲೇ ಟೀಸರ್, ಟ್ರೇಲರ್ ಮತ್ತು ಹಾಡುಗಳು ಅಭಿಮಾನಿಗಳು ಸಾಕಷ್ಟು ಇಷ್ಟವಾಗಿವೆ.
ಇತ್ತೀಚೆಗೆ ನಟಿ ರಶ್ಮಿಕಾ ಸಂಕೀರ್ಣ ಮತ್ತು ಭಾವನಾತ್ಮಕ ಹಾಗೂ ವಿಶೇಷ ಪಾತ್ರಗಳ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಈ ಹಿಂದಿನ ಸಿನಿಮಾಗಳು ಸಾಕ್ಷಿಯಾಗಿವೆ. ಈ ಎಲ್ಲ ಪಾತ್ರಗಳು ಅವರ ಬಬ್ಲಿ ಪಾತ್ರಗಳಿಂದ ದೂರವಿಟ್ಟಿವೆ.












Click it and Unblock the Notifications