Rashmika Mandanna: ನಟಿ ರಶ್ಮಿಕಾಗೆ ಬಾಲಿವುಡ್ ಅಷ್ಟು ಸುಲಭವಾಗಿರಲಿಲ್ಲ: ಇಂದಿರಾ ಕೃಷ್ಣನ್
ನಟಿ ರಶ್ಮಿಕಾ ಮಂದಣ್ಣ ಅವರು ಇವತ್ತು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರಬಹುದು. ಆದರೆ ಅವರು ಬಾಲಿವುಡ್ ಹಿಟ್ ಸಿನಿಮಾ 'ಅನಿಮಲ್' ಒಪ್ಪಿಕೊಂಡಾಗ ಅನೇಕ ರೀತಿಯ ಸವಾಲುಗಳನ್ನು ಎದುರಿಸಿದ್ದಾರೆ. ಹಿಂದಿ ಭಾಷೆ ವಿಚಾರವಾಗಿ, ಚಿತ್ರರಂಗದಲ್ಲಿ ನೆಲೆಯೂರಲು, ತನ್ನನ್ನು ತಾನು ಸಾಬೀತು ಮಾಡಲು ಹೆಚ್ಚಿನ ಶ್ರಮ ಹಾಕಿದ್ದಾರೆ. ಬಾಲಿವುಡ್ ನಟಿ ರಶ್ಮಿಕಾಗೆ ಅಷ್ಟು ಸುಲಭವಾಗಿರಲಿಲ್ಲ ಎಂದು ಸಹ ನಟಿ ಸ್ಮರಿಸಿದ್ದಾರೆ.
ರಶ್ಮಿಕಾ ಅವರ ನಟನೆಯ 'ಅನಿಮಲ್', 'ಚಾವಾ', ತೆಲುಗಿನ 'ಪುಷ್ಪ' ಸರಣಿ ಸಿನಿಮಾಗಳು ಸೇರಿದಂತೆ ಅನೇಕ ಸಿನಿಮಾಗಳು ಹಿಟ್ ಆಗಿವೆ. ಕೆಲವು ಪ್ಲಾಪ್ ಸಹ ಆಗಿವೆ. ಹಿಂದಿಯಲ್ಲಿ ದೊಡ್ಡ ಸ್ಟಾರ್ ನಟ ಅಮೀತಾಬ್ ಬಚ್ಚನ್ ಅವರೊಂದಿಗೂ ನಟಿಸಿದ ಸಿನಿಮಾ 'ಗುಡ್ ಬೈ', 'ಮಿಷನ್ ಮಜ್ನು' ಅಷ್ಟಾಗಿ ಹೆಸರು ತಂಡು ಕೊಡಲಿಲ್ಲ. ನಂತರ 'ಅನಿಮಲ್' ಹಿಟ್ ಆಗಿದ್ದು ರಶ್ಮಿಕಾ ಬಾಲಿವುಡ್‌ನಲ್ಲಿ ನೆಲೆಯೂರುವಂತಾಯಿ. ಈ ಸಿನಿಮಾ ಚಿತ್ರೀಕರಣ ವೇಳೆ ರಶ್ಮಿಕಾ ಹೋರಾಟದ ದಿನಗಳನ್ನು ಸಹ ನಟಿ ನಟಿ ಇಂದಿರಾ ಕೃಷ್ಣನ್ ನೆನೆದಿದ್ದಾರೆ.

ಕನ್ನಡದ ಸಿನಿಮಾ ಮೂಲಕ ತೆರಳಿದ ನಟಿ ರಶ್ಮಿಕಾ ಇಂದು ಬಹುಭಾಷಾ ಪ್ಯಾನ್ ಇಂಡಿಯಾ ನಟಿ. ಬಹುಬೇಡಿಕೆಯ ನಟಿಯಾಗಿದ್ದಾರೆ. 'ಅನಿಮಲ್' ಸಿನಿಮಾದ ಸಮಯದಲ್ಲಿ ರಶ್ಮಿಕಾ ಮಂದಣ್ಣ ಹಿಂದಿ ಭಾಷೆಯ ಸಂಭಾಷಣೆ, ಶೂಟಿಂಗ್ ವೇಳೆ ಸಾಕಷ್ಟು ಶ್ರಮಿಸಿದ್ದಾರೆ. ಮೂಲಕ ಹಿಂದಿ, ಬಾಲಿವುಡ್ ಅಲ್ಲದಿದ್ದರೂ ಅವರು ಕರಗತ ಮಾಡಿಕೊಂಡರು ಎಂದಿದ್ದಾರೆ.
'ಅನಿಮಲ್' ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಅವರ ತಾಯಿಯಾಗಿ ಇಂದಿರಾ ಅವರು ನಟಿಸಿದ್ದಾರೆ. ಈ ಇಬ್ಬರು ಯುವ ನಟರು ಉತ್ತಮ ವ್ಯಕ್ತಿತ್ವ ಮತ್ತು ವೃತ್ತಿಪರತೆ ಹೊಂದಿದವರೇ ಆಗಿದ್ದಾರೆ. ಹಿಂದಿ ಅಷ್ಟಾಗಿ ಬಾರದ ನಟಿ ರಶ್ಮಿಕಾ ಶೂಟಿಂಗ್ ಆರಂಭದಲ್ಲಿ ರಶ್ಮಿಕಾ ತನ್ನೊಂದಿಗೆ ತಾನು ಸಾಕಷ್ಟು ಹೋರಾಟ ಮಾಡಬೇಕಾಯಿತು. ಪ್ರಾಮಾಣಿಕತೆ ಮತ್ತು ಕಲಿಯುವ ಇಚ್ಛೆಯಿಂದ ಎದುರಾದ ಸವಾಲುಗಳನ್ನು ಅವರು ಜಯಿಸಿದರು ಎಂದು ಇಂದಿರಾ ಅವರು ತಿಳಿಸಿದ್ದಾರೆ.
ನಟ ರಣಬೀರ್ ಅವರು ಅತ್ಯಂತ ಆತ್ಮೀಯರು. ಅವರ ಜೊತೆಗಿನ ಸಂಭಾಷಣೆ, ಮಾತುಕತೆಯನ್ನು ಬಣ್ಣಿಸಿದರು. ಅವರೀಗ ರಾಮಾಯಣ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ಅವರೊಂದಿಗೆ ರಶ್ಮಿಕಾ ವ್ಯಕ್ತಿತ್ವ, ಪ್ರೀತಿಯಿಂದ ಮಾತನಾಡಿಸುವ ಬಗೆ ಎಲ್ಲವು ಇಷ್ಟವಾಯಿತು. ಇವರಿಬ್ಬರು ಅನಿಮಲ್‌ಗೆ ಆಧಾರಸ್ಥಂಭವಾಗಿದ್ದು, ಪ್ರಾಮಾಣಿಕ ವ್ಯಕ್ತಿ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.

ರಶ್ಮಿಕಾ ಹಿಂದಿ ನಿರ್ವಹಿಸಿದ್ದು ಹೇಗೆ?
ಕಲಿಯಲು ಉತ್ಸುಕವಾಗಿದ್ದ ನಟಿ ರಶ್ಮಿಕಾ ಸದಾ ಸಕಾರಾತ್ಮಕ ವ್ಯಕ್ತಿ. ನಟ ರಣಬೀರ್, ರಶ್ಮಿಕಾ ಮತ್ತು ಸ್ವತಃ ಈ ತ್ರಿವಳಿ ಬ್ರಹ್ಮಾಂಡ ಮತ್ತು ಅಭಿವ್ಯಕ್ತಿಯ ಬಗ್ಗೆ ಆಗಾಗ್ಗೆ ಸಂಭಾಷಣೆ ನಡೆಸುತ್ತಿದ್ದೆ. ಈ ವೇಳೆ 'ಅನಿಮಲ್'ನಲ್ಲಿ ಹಿಂದಿ ಭಾಷೆ ಬಳಕೆ, ಡೈಲಾಗ್ ಡೆಲಿವರಿಗೆ ಕಷ್ಟ ಎದುರಿಸಿದ್ದ ನಟಿ ರಶ್ಮಿಕಾ ತುಂಬ ಹಾರ್ಡ್ ವರ್ಕ್ ಮಾಡಿದರು. ಹಿಂದಿ ಕಳಿದು ಎದುರಾದ ಎಲ್ಲ ಸವಾಲಗನ್ನು ನಿರ್ವಹಿಸಿದರು ಎಂದು ಇಂದಿರಾ ಅವರು ಹೇಳಿದರು.
'ಅನಿಮಲ್' ಸಿನಿಮಾ 2023 ರಲ್ಲಿ ತೆರೆಗೆ ಬಂದು ಬ್ಲಾಕ್ ಬಸ್ಟರ್ ಹಿಟ್ ಆಯ್ತು. ರಶ್ಮಿಕಾಗೆ ಬಾಲಿವುಡ್‌ನಲ್ಲಿ ನೆಲೆಯೂರುವಂತೆ ಮಾಡಿತು. ಈ ಆಕ್ಷನ್ ಡ್ರಾಮಾ ಚಿತ್ರಕ್ಕೆ ಸಂದೀಪ್ ರೆಡ್ಡಿ ವಂಗಾ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾಗ ಟಿ-ಸೀರೀಸ್ ಫಿಲ್ಮ್ಸ್, ಭದ್ರಕಾಳಿ ಪಿಕ್ಚರ್ಸ್ ಮತ್ತು ಸಿನೆ1 ಸ್ಟುಡಿಯೋಸ್ ನಿರ್ಮಿಸಿವೆ. ಇದರಲ್ಲಿ ರಣಬೀರ್ ಕಪೂರ್, ರಶ್ಮಿಕಾ, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ತ್ರಿಪ್ತಿ ದಿಮ್ರಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.












Click it and Unblock the Notifications