Rashmika Mandanna: ರಶ್ಮಿಕಾ ಮಂದಣ್ಣ ಎದುರಲ್ಲೇ ಜಾಕೆಟ್ ಬಿಚ್ಚಿ ಬಿಗಿಯಾಗಿ ತಬ್ಬಿಕೊಂಡ ಅಲ್ಲು ಅರ್ಜುನ್! ವಿಡಿಯೋ ವೈರಲ್
ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾಗಳ ಮೂಲಕ 'ನ್ಯಾಷನಲ್ ಕ್ರಷ್' ಆಗಿದ್ದು, ಬಾಲಿವುಡ್ & ಟಾಲಿವುಡ್ ಇಂಡಸ್ಟ್ರಿಯಲ್ಲಿ ಸಖತ್ ಹಾಟ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಕಾಲ್‌ಶೀಟ್ ಪಡೆಯಲು ನಿರ್ಮಾಪಕರು ರಶ್ಮಿಕಾ ಮನೆ ಮುಂದೆ ಸಾಲಾಗಿ ಕಾಯುವ ಸ್ಥಿತಿ ಇದೆ. ಹೀಗಿದ್ದಾಗ ವಿಡಿಯೋ ಒಂದು ಫುಲ್ ವೈರಲ್ ಆಗುತ್ತಿದ್ದು, ರಶ್ಮಿಕಾ ಮಂದಣ್ಣ ಎದುರಲ್ಲೇ ಜಾಕೆಟ್ ಬಿಚ್ಚಿ ಬಿಗಿಯಾಗಿ ತಬ್ಬಿಕೊಂಡ ಅಲ್ಲು ಅರ್ಜುನ್ ಏನ್ ಮಾಡಿದ್ರು ಗೊತ್ತಾ?
ಹೌದು, ರಶ್ಮಿಕಾ ಮಂದಣ್ಣ ಅವರು ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹೀಗೆ ಬಂದ ರಶ್ಮಿಕಾ ಅವರು ಮುಂದೆ 'ಗೀತ ಗೋವಿಂದಂ' ಸಿನಿಮಾ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಹವಾ ಎಬ್ಬಿದಸಿರು. ಆ ನಂತರ ನಟಿ ರಶ್ಮಿಕಾ ಮಂದಣ್ಣಗೆ ಕನ್ನಡ ಸಿನಿಮಾಗಳ ಮೇಲೆ ಇಂಟ್ರೆಸ್ಟ್ ಹೋಗಿದೆ ಅಂತಾನೇ ಸೋಷಿಯಲ್ ಮೀಡಿಯಾ ಮಂದಿ ಕಮೆಂಟ್ ಮಾಡುತ್ತಾರೆ. ಆದ್ರೆ ಇದಕ್ಕೆಲ್ಲಾ ಕೇರ್ ಮಾಡದ ರಶ್ಮಿಕಾ ಮಂದಣ್ಣ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಿದ್ದಾಗ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ & ರಶ್ಮಿಕಾ ಮಂದಣ್ಣ ಅವರ ಕಾಂಬಿನೇಷನ್ ಅಲ್ಲಿ 'ಪುಷ್ಪ-1' ಸೂಪರ್ ಹಿಟ್ ಆಗಿದೆ. ಇದೀಗ 'ಪುಷ್ಪ-2' ಬರುತ್ತಿದ್ದು, ಇದೇ ಸಮಯದಲ್ಲಿ ಅಲ್ಲು ಅರ್ಜುನ್ & ರಶ್ಮಿಕಾ ಮಂದಣ್ಣ ವಿಡಿಯೋ ಸಂಚಲನ ಎಬ್ಬಿಸಿದೆ.

ರಶ್ಮಿಕಾ ಮಂದಣ್ಣ ಎದುರಲ್ಲೇ ಜಾಕೆಟ್...
ತೆಲುಗು ಸಿನಿಮಾ ಇಂಡಸ್ಟ್ರಿಗೆ ರಶ್ಮಿಕಾ ಮಂದಣ್ಣ ಮನೆಮಗಳು ಎಂಬಂತೆ ಆಗಿದ್ದಾರೆ. ಯಾಕಂದ್ರೆ ವರ್ಷಕ್ಕೆ ಏನಿಲ್ಲ ಅಂದ್ರೂ ಸಾಲು ಸಾಲು ತೆಲುಗು ಸಿನಿಮಾ ಮಾಡುತ್ತಾರೆ ನಟಿ ರಶ್ಮಿಕಾ ಮಂದಣ್ಣ ಅವರು. ಹೀಗಿದ್ದಾಗಲೇ ನಟ ಅಲ್ಲು ಅರ್ಜುನ್ ಅವರು ರಶ್ಮಿಕಾ ಮಂದಣ್ಣ ಎದುರಲ್ಲೇ ಜಾಕೆಟ್ ಬಿಚ್ಚಿ ಬಿಗಿಯಾಗಿ ತಬ್ಬಿಕೊಂಡು ಡಾನ್ಸ್ ಮಾಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋ ಸೋಷಿಯಲ್ ಮೀಡಿಯಾ ತುಂಬ ವೈರಲ್ ಆಗುತ್ತಿದೆ. ಹಾಗಾದ್ರೆ ಅಲ್ಲು ಅರ್ಜುನ್ ದಿಢೀರ್ ಜಾಕೆಟ್ ಜಿಪ್ ಬಿಚ್ಚಿ ರಶ್ಮಿಕಾ ಅವರನ್ನು ಅಪ್ಪಿಕೊಂಡಿದ್ದು ಯಾಕೆ?
ವೈರಲ್ ವಿಡಿಯೋ ಕಥೆ ಏನು?
ಅಷ್ಟಕ್ಕೂ ಈಗ ವೈರಲ್ ಆಗುತ್ತಿರುವ ವಿಡಿಯೋ 'ಪುಷ್ಪ-2' ಸಿನಿಮಾ ಶೂಟಿಂಗ್ ಸಮಯದಲ್ಲಿ ತೆಗೆದಿದ್ದು ಎನ್ನಲಾಗಿದೆ. ಶೂಟಿಂಗ್ ಸಮಯದಲ್ಲಿ ಸಾಂಗ್ ಒಂದಕ್ಕೆ ರಿಹರ್ಸಲ್ ಮಾಡುವಾಗಲೇ ರಶ್ಮಿಕಾ ಮಂದಣ್ಣ ಅವರ ಎದುರಲ್ಲಿ ನಟ ಅಲ್ಲು ಅರ್ಜುನ್ ತಮ್ಮ ಜಾಕೆಟ್ ಜಿಪ್ ತೆಗೆದು ನಟಿ ರಶ್ಮಿಕಾ ಮಂದಣ್ಣ ಅವರನ್ನ ತಬ್ಬಿಕೊಂಡು ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಲ್ಲೂ ಫುಲ್ ವೈರಲ್ ಆಗುತ್ತಿದ್ದು, 'ಪುಷ್ಪ-2' ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
'ಪುಷ್ಪ-2' ಯಾವಾಗ ರಿಲೀಸ್ ಆಗುತ್ತೆ?
2024ರ ಡಿಸೆಂಬರ್ 06 'ಪುಷ್ಪ-2' ತೆರೆಗೆ ಅಪ್ಪಳಿಸಲಿದ್ದು, ಈ ಬಾರಿಯೂ ಸಖತ್ ಸದ್ದು ಮಾಡುವ ನಿರೀಕ್ಷೆ ಹುಟ್ಟುಹಾಕಿದೆ. ಸುಮಾರು 200 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ 'ಪುಷ್ಪ-1' 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. 'ಪುಷ್ಪ-1' ಭರ್ಜರಿ ಯಶಸ್ಸಿನ ಬಳಿಕ ಪುಷ್ಪ-2 ಕಣ್ತುಂಬಿಕೊಳ್ಳಲು ಅಲ್ಲು ಅರ್ಜುನ್ ಫ್ಯಾನ್ಸ್ ಕಾಯುತ್ತಿದ್ದಾರೆ. ಹೀಗಾಗಿ 'ಪುಷ್ಪ-2' ರಿಲೀಸ್ ಡೇಟ್ ಘೋಷಣೆ ಮಾಡಲಾಗಿತ್ತು. ಈಗ ವಿಡಿಯೋ ಒಂದು ಹಲ್‌ಚಲ್ ಎಬ್ಬಿಸಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳ ಜೊತೆಗೆ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಕೂಡ ಭರ್ಜರಿ ಸುದ್ದಿಯು ಈ ಮೂಲಕ ಸಿಕ್ಕಂತಾಗಿದೆ.












Click it and Unblock the Notifications