‘ಹಾಸ್ಟೆಲ್ ಬಾಯ್ಸ್’ಗೆ ಹೊಸ ಟೀಚರ್, ರಮ್ಯಾ ಬದಲು ರಶ್ಮಿ ಎಂಟ್ರಿ!

ಕರ್ನಾಟಕದಲ್ಲಿ ರಿಲೀಸ್ ಆಗಿ ಕೋಟಿಕೋಟಿ ಬಾಚಿರುವ ಮತ್ತು ಕನ್ನಡಿಗರ ಹೃದಯ ಗೆದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆಲುಗು ಚಿತ್ರರಂಗದಲ್ಲೂ ಸದ್ದು ಮಾಡಲು ಸಜ್ಜಾಗಿದೆ. ಇದೇ ಹೊತ್ತಲ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಕ್ಕಿದೆ. ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಟೈಟಲ್‌ನಲ್ಲಿ ರಿಲೀಸ್ ಆಗ್ತಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ರಮ್ಯಾ ಬದಲು ರಶ್ಮಿ ಗೌತಮ್ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಸಿನಿ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿರುವ ಚಿತ್ರವನ್ನು 'ಬಾಯ್ಸ್ ಹಾಸ್ಟೆಲ್' ಟೈಟಲ್ ಅಡಿ ತೆಲುಗು ಭಾಷೆಗೆ ಡಬ್ ಮಾಡಲಾಗಿದೆ. ಅಷ್ಟೇ ಅಲ್ಲ ಆಗಸ್ಟ್ 26ಕ್ಕೆ ಚಿತ್ರ ತೆಲುಗು ಪ್ರೇಕ್ಷಕರ ಎದುರು ಭರ್ಜರಿಯಾಗಿ ಎಂಟ್ರಿ ಕೊಡಲಿದೆ. ಹೀಗೆ ಕನ್ನಡದಲ್ಲಿ ಗೆದ್ದಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆಲುಗು ಚಿತ್ರರಂಗದಲ್ಲೂ ಹೊಸ ಹವಾ ಸೃಷ್ಟಿಸಲು ಸಿದ್ಧವಾಗಿದೆ. ಈ ಸಂದರ್ಭದಲ್ಲೇ ಚಿತ್ರತಂಡ ಮತ್ತೊಂದು ಸರ್ಪ್ರೈಸ್ ನೀಡಿದೆ. ಬಹು ವರ್ಷಗಳ ಬಳಿಕ ಬೆಳ್ಳಿ ತೆರೆಗೆ ಕಂಬ್ಯಾಕ್ ಮಾಡಿದ್ದ ರಮ್ಯಾ ಅವರು, ತೆಲುಗು ಭಾಷೆಗೆ ಡಬ್ ಆಗಿರುವ 'ಬಾಯ್ಸ್ ಹಾಸ್ಟೆಲ್'ಗೆ ಚಕ್ಕರ್ ಹಾಕಲಿದ್ದಾರೆ. ರಮ್ಯಾ ಬದಲಿಗೆ ರಶ್ಮಿ ಗೌತಮ್ ಮಿಂಚಲಿದ್ದಾರೆ.

rashmi-gautam-will-play-ramya-role

'ಬಾಯ್ಸ್ ಹಾಸ್ಟೆಲ್' ಟೈಟಲ್ ಸಾಂಗ್ ರಿಲೀಸ್

ತೆಲುಗಿಗೆ ಡಬ್ ಆದ ಬಾಯ್ಸ್ ಹಾಸ್ಟೆಲ್ ಟೈಟಲ್ ಸಾಂಗ್ ರಿಲೀಸ್ ಆಗಿದ್ದು ಯೂಟ್ಯೂಬ್‌ನಲ್ಲಿ ಹಾಡು ಹವಾ ಎಬ್ಬಿಸಿದೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಬಾಕ್ಸ್ ಆಫಿಸ್‌ನಲ್ಲಿ ಕೋಟಿ ಕೋಟಿ ಬಾಚಿ ಸೌಂಡ್ ಮಾಡಿದೆ. ವಿದ್ಯಾರ್ಥಿ ಜೀವನದ ಕಥೆ ಕೆತ್ತಿಕೊಟ್ಟ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಹೌಸ್‌ಫುಲ್ ಪ್ರದರ್ಶನ ಕಂಡು ಖುಷಿ ಕೊಟ್ಟಿತ್ತು. ಕನ್ನಡ ನಾಡಲ್ಲಿ ಧೂಳೆಬ್ಬಿಸಿ, ಸೌಂಡ್ ಮಾಡಿದ್ದ ಹಾಸ್ಟೆಲ್ ಹುಡುಗರು ಬೇರೆ ರಾಜ್ಯದಲ್ಲಿ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆ ತೆಲುಗು ಭಾಷೆಯಲ್ಲೇ ಡಬ್ ಮಾಡಲಾಗಿದ್ದು, ಇನ್ನೇನು ರಿಲೀಸ್ ಆಗಲಿದೆ.

ಈ ಚಿತ್ರಕ್ಕೆ ನಗುವೇ ಭೂಷಣ!

ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ಫಲವಾಗಿ ಹಾಸ್ಟೆಲ್ ಹುಡುಗರು ತೆರೆಯ ಮೇಲೆ ಅಬ್ಬರಿಸಿದೆ. ಈ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಈಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಬಾಯ್ಸ್ ಹಾಸ್ಟೆಲ್ ಟೈಲಟ್ ನಡಿ ತೆಲುಗು ಭಾಷೆಗೆ ಡಬ್ ಆಗ್ತಿರೋದು ಖುಷಿ ವಿಚಾರ ಅಂತಾ ಸಿನಿಮಾ ತಂಡ ಸಂತಸ ಹಂಚಿಕೊಂಡಿದೆ. ಈಗಾಗಲೇ ಸಾಕಷ್ಟು ಕನ್ನಡಿಗರ ಚಿತ್ರಗಳು ತೆಲುಗು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದ್ದಲ್ಲದೆ ಸದ್ದು ಮಾಡಿದ್ದವು.

rashmi-gautam-will-play-ramya-role

ರಿಷಬ್, ಪವನ್, ಶೈನ್ ಶೆಟ್ಟಿ ಸಾಥ್

ಚಾಯ್ ಬಿಸ್ಕೆಟ್ ಫಿಲ್ಮ್ಸ್ & ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಶೀರ್ಷಿಕೆಯಲ್ಲಿ ಚಿತ್ರವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡುತ್ತಿವೆ. ಕನ್ನಡದಲ್ಲಿ ಈ ಚಿತ್ರವನ್ನ ನಟ ರಕ್ಷಿತ್ ಶೆಟ್ಟಿ ತಮ್ಮ ಪರವಃ ಪಿಕ್ಚರ್ಸ್ ಬ್ಯಾನರ್‌ ಅಡಿ ಪ್ರೆಸೆಂಟ್ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿದ ಈ ಪ್ರತಿಭಾನ್ವಿತರ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ & ಇನ್ನಿತರರು ಸಾಥ್ ಕೊಟ್ಟಿದ್ದರು. ಆದರೆ ಇದೀಗ ಮತ್ತೆ ಸರ್ಪ್ರೈಸ್ ನೀಡಿದೆ ಚಿತ್ರತಂಡ.

ಗುಲ್ಮೊಹರ್ ಫಿಲ್ಮ್ಸ್ ಹಾಗೂ ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಇದೀಗ ತೆಲುಗು ಸಿನಿಮಾ ಪ್ರೇಕ್ಷಕರು ಅವರದ್ದೇ ಭಾಷೆಯಲ್ಲಿ ಚಿತ್ರ ಕಣ್ತುಂಬಿಕೊಳ್ಳಲಿದ್ದಾರೆ. ರಮ್ಯಾ ಬದಲು ರಶ್ಮಿ ಪಾತ್ರ ನಿರ್ವಹಿಸಲಿದ್ದು, ಈಗಾಗಲೇ ಮೊದಲ ಹಾಡು ಸದ್ದು ಮಾಡುತ್ತಿದೆ. ಇನ್ನೇನು ಕೆಲ ದಿನಗಳಲ್ಲಿ ಈ ಸಿನಿಮಾ ಆಂಧ್ರ ಮತ್ತು ತೆಲಂಗಾಣದ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+