Bigg Boss Kannada: ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಮಾತುಗಳು ಬರೀ ಸೊಂಟದ ಕೆಳಗೆ: ರಂಜಿತ್
Bigg Boss Kannada: ಬಿಗ್ ಬಸ್ ಕನ್ನಡ 11 ಸೀಸನ್‌ನಲ್ಲಿ ಅವಾಚ್ಯ ಶಬ್ಧಗಳನ್ನು ಬಳಸಿದ್ದಕ್ಕೆ ಲಾಯರ್ ಕೆ.ಎನ್.ಜಗದೀಶ್ ಅವರನ್ನು ದೊಡ್ಮನೆಯಿಂದ ಹೊರಹಾಕಲಾಯಿತು. ಇನ್ನು ಜದೀಶ್ ಅವರನ್ನು ತಳ್ಳಿದ್ದ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ಪರ್ಧಿ ರಂಜಿತ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಬಿಗ್ ಬಸ್ ಕನ್ನಡ 11 ಸೀಸನ್ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದ ಕಾರಣಕ್ಕೆ ಲಾಯರ್ ಕೆ.ಎನ್.ಜಗದೀಶ್ ಅವರನ್ನು ದೊಡ್ಮನೆಯಿಂದ ಹೊರಹಾಕಲಾಯಿತು. ಬಳಿಕ ಅವರೇ ಸ್ವತಃ ಬಿಗ್ ಬಾಸ್, ಕಿಚ್ಚ ಸುದೀಪ್ ಹಾಗೂ ಎಲ್ಲಾ ಸ್ಪರ್ಧಿಗಳಿಗೆ ಕ್ಷಮೆ ಕೇಳಿದರು.

ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್, ಲಾಯರ್ ಜಗದೀಶ್ ಪರವಾಗಿ ಮಾತನಾಡಿದ್ದರು. ಲಾಯರ್ ಜಗದೀಶ್ ಅನ್ನು ಇತರೆ ಸ್ಪರ್ಧಿಗಳು ಪ್ರವೋಕ್ ಮಾಡಿದ್ದರಿಂದಲೇ ಆ ವ್ಯಕ್ತಿ ಗರಂ ಆಗಿದ್ದರು. ಜಗದೀಶ್ ಪ್ರವೋಕ್ ಆಗಲು ಸ್ಪರ್ಧಿಗಳೇ ಕಾರಣ ಎಂದು ಅಲ್ಲಿರುವ ಸ್ಪರ್ಧಿಗಳೇ ಬಾಯಿಬಿಟ್ರು. ಈ ವೇಳೆ ಸುದೀಪ್ ಅವರು ಜಗದೀಶ್ ಪರ ನಿಲ್ಲದೇ ಇರುವುದಕ್ಕೆ ಕೆಲ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಲಾಯರ್ ಜಗದೀಶ್ ಅವರನ್ನು ತಳ್ಳಿದ ಆರೋಪದ ಮೇಲೆ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮತ್ತೊಬ್ಬ ಸ್ಪರ್ಧಿ ರಂಜಿತ್ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ರಂಜಿತ್ ಅವರು, "ಜಗದೀಶ್ ಮೇಲೆ ನಾನು ಯಾವುದೇ ಹಲ್ಲೆ ಮಾಡಿಲ್ಲ. ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯಾದಾಗ ರಕ್ಷಣೆಗೆ ನಿಂತೆ ಅಷ್ಟೇ," ಎಂದು ತಮ್ಮ ವರ್ತನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಜಗದೀಶ್ ಬಗ್ಗೆ ಬಿಗ್‌ಬಾಸ್‌ನಿಂದ ಹೊರಬಿದ್ದ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, "ಜಗದೀಶ್ ಮಾಡಿದ ಕೆಲಸಗಳನ್ನು ಟಿವಿಯಲ್ಲಿ ತೋರಿಸಲು, ಪ್ರಸಾರ ಮಾಡಲು ಸಾಧ್ಯವೇ ಇಲ್ಲ. ಹೆಣ್ಣು ಮಕ್ಕಳು ಸ್ನಾನ ಮಾಡಲು ಬಳಸುತ್ತಿದ್ದ ಬ್ರಶ್ ಅನ್ನು ತೆಗೆದುಕೊಂಡು ಅದರಲ್ಲಿ ಟಾಯ್ಲೆಟ್ ಕ್ಲೀನ್ ಮಾಡುತ್ತಿದ್ದ. ಕೆಟ್ಟ ಕೆಟ್ಟ ಪದಗಳು ಅಂದರೆ ಬರೀ ಸೊಂಟದ ಕೆಳಗಿನ ಭಾಷೆಯನ್ನು ಮಾತನಾಡುತ್ತಿದ್ದರು. ಅದನ್ನೆಲ್ಲ ನಾವು ಪ್ರತಿದಿನ ಕೇಳಿಸಿಕೊಂಡಿದ್ದೇವೆ," ಎಂದು ಹೇಳಿದರು.
"ಹೊರಗಡೆ ಜನರು ಜಗದೀಶ್ ಹಿರೋ ಎಂದು ಹೇಳುತ್ತಿದ್ದಾರೆ. ಆದರೆ, ಅವರಿಗೆ ಸರಿಯಾಗಿ ಜಗದೀಶ್ ಅವರ ಬಗ್ಗೆ ಗೊತ್ತಿಲ್ಲ. ಒಳಗೆ ಜಗದೀಶ್ ಅವರು ಏನೇನೋ ಮಾತನಾಡಿದ್ದರು. ಆತ ಈಗ ಮಾಡಿರುವುದು ತೋರಿಸಿದರೆ ಸಾಕು ಜನ ಆತನನ್ನು ವಿಲನ್ ಮಾಡುತ್ತಾರೆ. ಬೇಕೆಂದೆ ಬಂದು ಟಾಸ್ಕ್‌ಗಳನ್ನು ಫೇಲ್ ಮಾಡುತ್ತಿದ್ದ. ನನಗೆ ಸಿಗದೇ ಇರುವುದು ನಿಮಗ್ಯಾರಿಗೂ ಸಿಗಬಾರದೆಂದು ಓಪನ್ ಆಗಿ ಹೇಳುತ್ತಿದ್ದರು. ರಾತ್ರಿ ಇದ್ದಕ್ಕಿದ್ದಂತೆ ಎದ್ದು ಓಡಾಡುವುದು. ಉದ್ದೇಶಪೂರ್ವಕವಾಗಿ ಮತ್ತೊಬ್ಬರಿಗೆ ಕೊಡುವುದು ಮಾಡುತ್ತಿದ್ದ," ಎಂದು ಹೇಳಿದ್ದಾರೆ.
"ಇನ್ನು ಶೋ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡುತ್ತುದ್ದರು. ಏ ಡೈರೆಕ್ಟರ್ ಬಾರೋ ಇಲ್ಲಿ. ಶೋ ಮುಚ್ಚಿಸಿ ಹಾಕುತ್ತೇನೆ, ಹಾಳು ಮಾಡುತ್ತೇನೆ ಎಂದೆಲ್ಲ ಹೇಳುತ್ತಿದ್ದರು. ಅಲ್ಲದೆ, ನಮ್ಮ ನಟನಾ ವೃತ್ತಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಅವರು ಮಾಡಿರುವ ಎಷ್ಟೋ ವಿಷಯಗಳನ್ನು, ಆಡಿರುವ ಮಾತುಗಳನ್ನು ಬಿಗ್ ಬಾಸ್ ತೋರಿಸಿಲ್ಲ. ತೋರಿಸಲು ಆಗದಷ್ಟು ಕೆಟ್ಟ ಕೃತ್ಯಗಳನ್ನು ಆವರು ಮಾಡಿದ್ದಾರೆ," ಎಂದು ಹೇಳಿದ್ದಾರೆ.












Click it and Unblock the Notifications