Ramya: ರಕ್ಷಿತಾ ತಮ್ಮನ ಮದುವೆಯಲ್ಲಿ ರಮ್ಯಾ; ನಿಮಗೆ ವಯಸ್ಸೇ ಆಗಲ್ವಾ ಎಂದ ಫ್ಯಾನ್ಸ್!
ರಮ್ಯ ಮತ್ತ ರಕ್ಷಿತಾ ಒಂದೇ ಸಮಯದಲ್ಲಿ ಚಂದನವನಕ್ಕೆ ಕಾಲಿಟ್ಟವರು. ಇಬ್ಬರೂ ಚಿತ್ರರಂಗದ ಬಹುಬೇಡಿಕೆಯ ನಟಿಯರಾಗಿದ್ದವರು. ರಕ್ಷಿತಾ ಪ್ರೇಮ್‌ರನ್ನು ಮದುವೆಯಾದ ಬಳಿಕ ಚಿತ್ರರಂಗವನ್ನು ತೊರೆದರೆ, ರಮ್ಯಾ ರಾಜಕೀಯ ಸೇರಿದ ಬಳಿಕ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಬಿಟ್ಟರು. ಇಬ್ಬರೂ ಒಂದೇ ಕಾಲದಲ್ಲಿ ಉತ್ತುಂಗದಲ್ಲಿದ್ದಾಗ, ಇಬ್ಬರ ನಡುವೆ ಪೈಪೋಟಿಯಿತ್ತು, ಆದರೆ ಈಗ ಇಬ್ಬರೂ ಉತ್ತಮ ಸ್ನೇಹಿತೆಯರು.
ರಕ್ಷಿತಾ ತಮ್ಮ ರಾಣಾ ಮದುವೆಗೆ ಮೋಹಕ ತಾರೆ ರಮ್ಯಾ ಆಗಮಿಸಿದ್ದರು. ರಮ್ಯಾರನ್ನು ನೋಡಿದ ಅಭಿಮಾನಿಗಳು ಮಾತ್ರ ಫುಲ್ ಖುಷಿಯಾಗಿದ್ದಾರೆ. ಮೋಹಕ ತಾರೆಯ ಅಂದ ನೋಡಿದ ಫ್ಯಾನ್ಸ್ ರಮ್ಯಾ ನಿಮಗೆ ವಯಸ್ಸೇ ಆಗಲ್ವಾ ಎಂದು ಕೇಳಿದ್ದಾರೆ.

ರಮ್ಯಾಗೆ ಈಗ 42 ವರ್ಷ, ಆದರೆ ಅವರನ್ನು ನೋಡಿದರೆ ಅಷ್ಟೊಂದು ವಯಸ್ಸಾಗುತ್ತದೇ ಎಂದು ಹೇಳುವುದೇ ಕಷ್ಟ. ದಿನೇ ದಿನೇ ನಿಮಗೆ ವಯಸ್ಸು ಕಡಿಮೆಯಾಗುತ್ತಿದೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಣಾ ಮದುವೆಯಲ್ಲಿ ರಕ್ಷಿತಾ ಮಿಂಚು
ರಕ್ಷಿತಾ ಸಹೋದರ ರಾಣಾ ಮದುವೆಗೆ ರಮ್ಯಾ ಆಗಮಿಸಿದ್ದು ನೆರೆದಿದ್ದವರ ಗಮನ ಸೆಳೆದರು. ಅವರು ಮದುವೆಗೆ ಬಂದಿದ್ದ ವಿಡಿಯೋಗಳು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಮ್ಯಾರನ್ನು ಕಪ್ಪು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಸಖತ್ ಮೆಚ್ಚಿಕೊಂಡಿದ್ದಾರೆ. ರಮ್ಯಾ ಅಂದ ಒಂಚೂರು ಕಡಿಮೆಯಾಗಿಲ್ಲ ಅದಕ್ಕೆ ಅವರನ್ನು ಸ್ಯಾಂಡಲ್‌ವುಡ್ ಕ್ವೀನ್ ಎನ್ನುವುದು ಎಂದು ಹಾಡಿಹೊಗಳಿದ್ದಾರೆ.
ರಮ್ಯಾರನ್ನು ತಬ್ಬಿಕೊಂಡು ರಕ್ಷಿತಾ ಬರಮಾಡಿಕೊಂಡಿದ್ದಾರೆ. ದಂಪತಿಗಳಿಗೆ ಶುಭ ಹಾರೈಸಿದ ರಮ್ಯಾ ನಂತರ ಅಭಿಮಾನಿಗಳ ಜೊತೆ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ. ನಗು ನಗುತ್ತಲೇ ಎಲ್ಲರನ್ನೂ ಮಾತಾಡಿಸುವ ವಿಡಿಯೋಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.
ಇದೇ ಮದುವೆಗೆ ನಟ ದರ್ಶನ್ ಕೂಡ ಆಗಮಿಸಿದ್ದರು. ಆದರೆ ರಮ್ಯಾ ಮತ್ತು ದರ್ಶನ್ ಮುಖಾಮುಖಿಯಾಗಿಲ್ಲ. ಇಬ್ಬರು ಬಂದು ಹೋಗಿರುವ ಸಮಯ ಬೇರೆ ಬೇರೆ ಇರಬಹುದು ಅಥವಾ ಇಬ್ಬರೂ ಅಂತರ ಕಾಯ್ದುಕೊಂಡಿರಬಹುದು.
ರಮ್ಯಾ ಸಿನಿಮಾ ಮಾಡಲ್ವ?
ರಮ್ಯಾ ಮತ್ತೆ ಸಿನಿಮಾ ಮಾಡಲ್ವ ಎನ್ನುವ ವಿಚಾರ ಚರ್ಚೆಯಾಗುತ್ತಲೇ ಇರುತ್ತದೆ. ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗೆ ರಮ್ಯಾ ನಾಯಕಿ ಎನ್ನಲಾಗಿತ್ತು, ಆದರೆ ಅವರು ಸಿನಿಮಾ ನಿರ್ಮಾಣ ಮಾಡಿದರು, ಪಾತ್ರ ಮಾಡುವುದರಿಂದ ಹಿಂದೆ ಸರಿದರು. ಬಳಿಕ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ಅಭಿನಯಿಸಬೇಕಿತ್ತು, ಆರಂಭದಲ್ಲಿ ಒಪ್ಪಿಕೊಂಡಿದ್ದ ಅವರು ಬಳಿಕ ಸಿನಿಮಾದಿಂದ ಹಿಂದೆ ಸರಿದರು. ಅವರ ಜಾಗಕ್ಕೆ ಐಶ್ವರ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.












Click it and Unblock the Notifications