Ramya:ರಮ್ಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಮತ್ತೆ ಸಿನಿಮಾ ಮಾಡ್ತಾರಂತೆ ಮೋಹಕ ತಾರೆ
ಬೆಂಗಳೂರು, ಫೆಬ್ರವರಿ 12: ಮಾಜಿ ಸಂಸದೆ ಹಾಗೂ ಸಾಂಡಲ್ ವುಡ್ ನಟಿ ರಮ್ಯಾ ಅವರು ನಟನೆಯಿಂದ ದೂರ ಉಳಿದು ಬರೋಬ್ಬರಿ ಹತ್ತು ವರ್ಷಗಳೇ ಕಳೆದಿವೆ. ಇದೀಗ ನಟಿ ರಮ್ಯಾ ಅವರು ಚಿತ್ರ ರಂಗಕ್ಕೆ ಮತ್ತೆ ಕಂಬ್ಯಾಕ್ ಆಗಲಿದ್ದಾರೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಯಾವ ಸಿನಿಮಾ ಮಾಡುತ್ತಾರೆ. ಯಾವಾಗ ಸಿನಿಮಾ ರಂಗಕ್ಕೆ ಕಂಬ್ಯಾಕ್ ಆಗುತ್ತಾರೆ? ಎಂತಹ ಕಥೆಯನ್ನ ಇಷ್ಟ ಪಡುತ್ತಾರೆ ಎನ್ನುವ ಮಾಹಿತಿಯನ್ನ ಖಾಸಗಿ ಸುದ್ದಿ ವಾಹಿನಿಯಲ್ಲಿ ನಟಿ ರಮ್ಯಾ ಅವರು ಹಂಚಿಕೊಂಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ ನಟಿ ರಮ್ಯಾ ಅವರು ಮಾತನಾಡಿದ್ದು, ನಾನು ನಟನೆಯಿಂದ ದೂರ ಉಳಿದು 10 ವರ್ಷಗಳ ಮೇಲೆ ಆಗಿದೆ. ಈಗ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ. ಮಾಡಿದ್ದೇ ಮಾಡೋಕೆ ನನಗೆ ಬೇಸರ. ಹೀಗಾಗಿ, ಒಳ್ಳೆಯ ಸ್ಕ್ರಿಪ್ಟ್ಗಾಗಿ ಕಾಯುತ್ತಾ ಇದ್ದೇನೆ. ಸಿಕ್ಕರೆ ನಟನೆ ಮಾಡುತ್ತೇನೆ ಎಂದು ರಮ್ಯಾ ಅವರು ತಿಳಿಸಿದ್ದಾರೆ. ನನ್ನನ್ನ ಅಭಿಮಾನಿಗಳು ಇಷ್ಟ ಪಡುವುದನ್ನ ನೋಡಿದರೇ ಫಸ್ಟ್ ಆಫ್ ಅಲ್ ಖುಷಿಯಾಗುತ್ತದೆ. ನಾನು ಸಿನಿಮಾ ಇಂಡಸ್ಟ್ರಿ ಬಿಟ್ಟು 10 ವರ್ಷವಾಗಿದೆ. ಆದ್ರೂ ಕೂಡ ನನಗೆ ಅಷ್ಟೊಂದು ಪ್ರೀತಿ ತೋರಿಸುತ್ತಾರೆ.ಐ ಆಮ್ ವೆರಿ ಗ್ರೇಟ್ ಫುಲ್ ಹಾಗೂ ದೇವರ ದಯದಿಂದ ನನಗೆ ಎಲ್ಲಾ ತುಂಬಾ ಪ್ರೀತಿ ತೋರಿಸುತ್ತಿದಾರೆ.

ಸಿನಿಮಾದಲ್ಲಿ ನನಗೆ ಒಳ್ಳೆಯ ಪಾತ್ರ ಸಿಕ್ಕಿದ್ರೆ ನಾನು ಖಂಡಿತವಾಗ್ಲೂ ಮಾಡುತ್ತೇನೆ. ಇಂಟರೆಸ್ಟಿಂಗ್ ಕಥೆ ಬಂತು ಅಂದ್ರೆ ನಾನು ಖಂಡಿತವಾಗಿಯೂ ಸಿನಿಮಾ ಮಾಡುತ್ತೇನೆ. ನನಗೆ ಮಾಡದ್ದೆ ಮಾಡಬೇಕು ಅಂತ ನನಗೂ ಇಷ್ಟ ಇಲ್ಲ. ಇಂಟರೆಸ್ಟಿಂಗ್ ಇದ್ದರೆ ಖಂಡಿತ ಮಾಡುತ್ತೇನೆ. ನಾನು ಮತ್ತೆ ಸಟ್ಟಿಗೆ ಹೋಗಿ ಮತ್ತೆ ನಾನು ಆಕ್ಟ್ ಮಾಡಬೇಕು ಅಂದ್ರೆ ಆಡಿಯನ್ಸ್ ಸಹ ಏನಾದರೂ ಒಂದು ಇಂಟರೆಸ್ಟಿಂಗ್ ಆಗಿ ಹಾಗೂ ಡಿಫರೆಂಟ್ ಆಗಿ ನೋಡ್ಬೇಕು ಎನ್ನುವ ಆಸೆ ಇರುತ್ತದೆ. ನನಗೂ ಕೂಡ ಹಾಗೇ ಅನಿಸಬೇಕು. ಸಿನಿಮಾಗೆ ಬರ್ಬೇಕು ಅಂತ ನಾನು ಯಾವುದೇ ಡಯಟ್ ಮಾಡುತ್ತಿಲ್ಲ. ಸಿನಿಮಾದ ಬಗ್ಗೆ ಯಾವುದೇ ಪ್ಲಾನ್ ಇಲ್ಲ. ಒಳ್ಳೆಯ ಕಥೆ ಸಿಕ್ಕಿದ್ರೆ ಖಂಡಿತ ಮಾಡುತ್ತೇನೆ ಎಂದು ಮೋಹಕತಾರೆ ನಟಿ ರಮ್ಯಾ ಹೇಳಿದರು.
ನಟಿ ರಮ್ಯಾ ಅವರು ಇತ್ತೀಚೆಗೆ ಸ್ಯಾಂಡಲ್ವುಡ್ಗೆ ಸಂಬಂಧಿಸಿದ ಹಲವು ಇವೆಂಟ್, ಫಂಕ್ಷನ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಆಗಾಗ ಮಾಧ್ಯಮದ ಮುಂದೆಯೂ ಮಾತನಾಡುತ್ತಾರೆ. ಇತ್ತೀಚೆಗೆ ರಕ್ಷಿತಾ ಸಹೋದರನ ಮದುವೆಯಲ್ಲಿಯೂ ನಟಿ ಭಾಗಿಯಾಗಿದ್ದರು. ಈ ವೇಳೆ ರಕ್ಷಿತಾ ಗೆ ಕೈಗೆ ಹಾಕಿಕೊಂಡಿರುವ ಉಂಗುರದ ಬಗ್ಗೆ ತಿಳಿಸಿದ್ದಾರೆ. ಈ ದೃಶ್ಯವನ್ನ ಕಂಡ ಅಭಿಮಾನಿಗಳು ನಟಿ ರಮ್ಯಾ ಅವರ ಮದುವೆ ಫಿಕ್ಸ್ ಆಯ್ತಾ ಎಂದು ಪ್ರಶ್ನಿಸುತ್ತಿದ್ದಾರೆ.












Click it and Unblock the Notifications