ಜಸ್ಪ್ರಿತ್ ಬುಮ್ರಾಗೆ ಕ್ಷಮೆ ಕೇಳಿದ ತೆಲುಗು ಸ್ಟಾರ್ ರಾಮ್ ಚರಣ್, ಪೆದ್ದಿ ನಟ ಮಾಡಿದ ಎಡವಟ್ಟೇನು?
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ "ಪೆದ್ದಿ" (Peddi) ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಭೋಪಾಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ನಾಯಕಿ ಜಾನ್ವಿ ಕಪೂರ್ ಸೇರಿದಂತೆ ಚಿತ್ರತಂಡ ಭಾಗವಹಿಸಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ರಾಮ್ ಚರಣ್ ಭಾರತೀಯ ಕ್ರಿಕೆಟಿಗರ ಬಗ್ಗೆ ಆಡಿದ ಮಾತುಗಳು ಮತ್ತು ಅವರಿಂದ ಆದ ಒಂದು ಸಣ್ಣ ಎಡವಟ್ಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಸಂವಾದದ ವೇಳೆ ರಾಮ್ ಚರಣ್ ಅವರಿಗೆ ಭಾರತದ ಪ್ರಮುಖ ಕ್ರಿಕೆಟಿಗರನ್ನು ಕೆಲವೇ ಪದಗಳಲ್ಲಿ ವರ್ಣಿಸಲು ಕೋರಲಾಯಿತು. ಈ ವೇಳೆ ಅವರು ಆಕರ್ಷಕ ಉತ್ತರಗಳನ್ನು ನೀಡಿದರು. ಸಚಿನ್ ತೆಂಡೂಲ್ಕರ್ ಅವರನ್ನು ಲಾಂಗ್ ಲೆಜೆಂಡರಿ ರನ್ ಎಂದು ಕರೆದರು. ಇನ್ನು ಎಂ.ಎಸ್.ಧೋನಿ ಅವರನ್ನ ಕಾಮ್ ಆಂಡ್ ಕೂಲ್, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರನ್ನ ಎಲ್ಲರ ಪ್ರೀತಿಯ ನಾಯಕ ಎಂದರೆ, ವಿರಾಟ್ ಕೊಹ್ಲಿ ಅವರನ್ನ ಫೈರ್ ಎಂದು ರಾಮ್‌ಚರಣ್ ವರ್ಣಿಸಿದರು.

ಜಸ್ಪ್ರಿತ್ ಬುಮ್ರಾ ವಿಷಯದಲ್ಲಿ ಎಡವಟ್ಟು
ಭಾರತದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಬಗ್ಗೆ ಮಾತನಾಡುವಾಗ ರಾಮ್ ಚರಣ್, "ನಾನು ಬುಮ್ರಾ ಅವರ ಬಹುದೊಡ್ಡ ಅಭಿಮಾನಿ" ಎಂದು ಹೇಳುತ್ತಾ, ಅತಿಯಾದ ಉತ್ಸಾಹ ಮತ್ತು ಗದ್ದಲದ ನಡುವೆ ಕ್ರಿಕೆಟ್‌ಗೆ ಬದಲಾಗಿ ಫುಟ್‌ಬಾಲ್ ಆಟದ ಹೆಸರನ್ನು ಪ್ರಸ್ತಾಪಿಸಿ ಆಟಗಾರರನ್ನು ಅದಕ್ಕೆ ಹೋಲಿಸಿ ಗೊಂದಲ ಮಾಡಿಕೊಂಡರು. ಈ ವಿಡಿಯೋ ತುಣುಕು ಕ್ಷಣಾರ್ಧದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ನಟ, ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಕ್ಷಮೆಯಾಚಿಸಿದ್ದಾರೆ.
Uff… I’m genuinely so forgetful with names sometimes.
— Ram Charan (@AlwaysRamCharan) May 23, 2026
Apologies to @Jaspritbumrah93 Ji for the mix-up - it was a genuine human error in the middle of all the excitement and the crowd 🙏🏼
I truly respect you and I am a huge fan of your game. You make every Indian feel proud when…
"ನನಗೆ ಕೆಲವೊಮ್ಮೆ ಹೆಸರುಗಳು ಮತ್ತು ವಿಷಯಗಳು ಮರೆತುಹೋಗುತ್ತವೆ. ಜಸ್ಪ್ರಿತ್ ಬುಮ್ರಾ ಅವರೇ, ಆ ಗದ್ದಲ ಮತ್ತು ತೀವ್ರ ಉತ್ಸಾಹದ ನಡುವೆ ಈ ತಪ್ಪು ಸಂಭವಿಸಿದೆ. ದಯವಿಟ್ಟು ಕ್ಷಮಿಸಿ. ನಿಮ್ಮ ಆಟದ ಬಗ್ಗೆ ನನಗೆ ಅಪಾರ ಗೌರವವಿದೆ. ನಿಮ್ಮ ಪ್ರದರ್ಶನದ ಮೂಲಕ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡುತ್ತೀರಿ, ನಿಮ್ಮ ಬಗ್ಗೆ ಹೆಮ್ಮೆಯಿದೆ" ಎಂದು ರಾಮ್‌ಚರಣ್ ಕ್ಷಮೆ ಕೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ಪರ ಆಡುತ್ತಿರುವ ಜಸ್ಪ್ರಿತ್ ಬುಮ್ರಾ ಅವರಿಗೆ ಈ ಬಾರಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಕಳೆದ ಟಿ20 ವಿಶ್ವಕಪ್‌ನಿಂದಲೂ ಬುಮ್ರಾ ಅವರು ಸಣ್ಣಪುಟ್ಟ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನ ಅವರಿಗೆ ಹೆಚ್ಚಿನ ವಿಶ್ರಾಂತಿ ನೀಡಲಾಗಿತ್ತು. ಆರಂಭಿಕ ಕೆಲವು ಪಂದ್ಯಗಳಲ್ಲಿ ಬುಮ್ರಾ ತಮ್ಮ ಹಳೆಯ ಲಯಕ್ಕೆ ಮರಳಲು ತೀವ್ರ ಶ್ರಮಪಟ್ಟರು. ಇದರಿಂದಾಗಿ ಅವರ ಬೌಲಿಂಗ್ ವೇಗ ಮತ್ತು ನಿಖರತೆ ಸ್ವಲ್ಪ ಮಟ್ಟಿಗೆ ಕುಂಠಿತಗೊಂಡಿತ್ತು.
— Uppi_ECF⚡ (@uppi_m13218) May 23, 2026
ಬುಮ್ರಾ ತಮ್ಮ ಫಿಟ್‌ನೆಸ್, ನೋ-ಬಾಲ್ ನಿಯಂತ್ರಣ ಮತ್ತು ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಬಗ್ಗೆ ಟೂರ್ನಿಯುದ್ದಕ್ಕೂ ಕಷ್ಟಪಟ್ಟಿದ್ದಾರೆ. ಕೊನೆಯ ಕೆಲವು ಪಂದ್ಯಗಳಲ್ಲಿ ಅವರು ತಮ್ಮ ಹಳೆಯ ವೇಗ ಹಾಗೂ ಯಾರ್ಕರ್‌ಗಳನ್ನು ಮರಳಿ ಪಡೆದಿದ್ದು, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಬುಮ್ರಾ ಅವರ ಫಿಟ್‌ನೆಸ್ ಬಗ್ಗೆ ಯಾವುದೇ ಆತಂಕವಿಲ್ಲ, ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ತಂಡ ಹೇಳಿದೆ.













Click it and Unblock the Notifications