Rakshit Shetty: ಮೈಸೂರಿನಿಂದ ದಿಢೀರ್ ಆಗಿ ಲೈವ್ ಬಂದ ರಕ್ಷಿತ್ ಶೆಟ್ಟಿ; ಕಾರಣವೇನು?
ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ದೇಶ, ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದ್ದು, ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಜಪಾನ್‌ನಲ್ಲಿ ಕೂಡ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಸಿನಿಮಾದಲ್ಲಿ ಚಾರ್ಲಿ ಪಾತ್ರ ಮಾಡಿದ್ದ ನಾಯಿ ಈಗ 6 ಮರಿಗಳಿಗೆ ಜನ್ಮ ನೀಡಿದ್ದು, ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲೈವ್‌ಗೆ ಬಂದ ಅವರು, ಮೈಸೂರಿನಲ್ಲಿದ್ದು, ಚಾರ್ಲಿ ಆರು ಮುದ್ದಾದ ಮರಿಗಳಿಗೆ ಜನ್ಮ ನೀಡಿದ್ದು, ಅವನ್ನು ನೋಡಲು ಬಂದಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಈಡೇರಿದ ಚಿತ್ರತಂಡದ ಆಸೆ
ಚಾರ್ಲಿ ಮರಿಗಳಿಗೆ ಜನ್ಮ ನೀಡಬೇಕು ಎನ್ನುವುದು ಆಸೆಯಾಗಿತ್ತು, ಆದರೆ ವಯಸ್ಸಾಗಿದೆ ಎಂದು "777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ 2 ವರ್ಷ ಆಗುತ್ತಾ ಬಂದಿದೆ, ಸಿನಿಮಾ ಬಿಡುಗಡೆಯಾದಾಗಿನಿಂದ ಚಾರ್ಲಿ ತಾಯಿಯಾದರೆ, ಈ ಪ್ರಯಾಣ ಸಾರ್ಥಕವಾಗುತ್ತದೆ ಅನಿಸಿತ್ತು. ಇಡೀ ಸಿನಿಮಾ ತಂಡಕ್ಕೆ ಈ ಆಸೆ ಇತ್ತು."
ನಿರ್ದೇಶಕ ಕಿರಣ್ ರಾಜ್ ಅವರು ಇದನ್ನು ಹೇಳಿದ್ದರು, ನಾನು ಕೂಡ ಚಾರ್ಲಿ ತಾಯಿಯಾಗಲಿ ಎಂದು ತುಂಬಾ ದಿನದಿಂದ ಕಾಯುತ್ತಿದ್ದೆ. ಚಾರ್ಲಿ ಮೈಸೂರಿನಲ್ಲಿ ಪ್ರಮೋದ್ ಜೊತೆ ಇದ್ದು, ನಾನು ಪ್ರಮೋದ್ ಅವರಿಗೆ ಕರೆ ಮಾಡಿದಾಗೆಲ್ಲಾ ಈ ಬಗ್ಗೆ ಕೇಳುತ್ತಿದ್ದೆ, ಆದರೆ ಚಾರ್ಲಿಗೆ ವಯಸ್ಸಾಗಿದೆ ಎಂದು ಹೇಳುತ್ತಿದ್ದರು ಎಂದಿದ್ದಾರೆ.
ಈಗ ಚಾರ್ಲಿ ಆರು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಚಾರ್ಲಿಯನ್ನು ನೋಡಲು ರಕ್ಷಿತ್ ಶೆಟ್ಟಿ ಮೈಸೂರಿನ ಪ್ರಮೋದ್ ಅವರ ಮನೆಗೆ ಭೇಟಿ ಕೊಟ್ಟಿದ್ದು, ಅಲ್ಲಿಂದಲೇ ಲೈವ್ ಮಾಡಿ, ಚಾರ್ಲಿ ಮತ್ತು ಮರಿಗಳನ್ನು ತೋರಿಸಿದ್ದಾರೆ.
ಚಾರ್ಲಿ ಸಿನಿಮಾಗೆ ಸಾಕಷ್ಟು ಪ್ರೀತಿ ಸಿಕ್ಕಿದೆ, ವಿಶೇಷವಾಗಿ ಮಕ್ಕಳು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅವರಿಗೆ ಈ ವಿಚಾರ ತಿಳಿಸಬೇಕು ಎನ್ನಿಸಿತು ಅದಕ್ಕಾಗಿ ಲೈವ್‌ಗೆ ಬಂದೆ ಎಂದು ಹೇಳಿದ್ದಾರೆ.
ರಿಚರ್ಡ್ ಆಂಟನಿಗೆ ಸಿದ್ಧತೆ
ಚಾರ್ಲಿ ಸಿನಿಮಾ ಬಳಿಕ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಟಿಸಿದ್ದ ರಕ್ಷಿತ್ ಶೆಟ್ಟಿ ಸದ್ಯ ತಮ್ಮದೇ ನಿರ್ದೇಶನದ ರಿಚರ್ಡ್ ಆಂಟನಿ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಉಳಿದವರು ಕಂಡಂತೆ ಸಿನಿಮಾದ ಪ್ರೀಕ್ವೆಲ್ ಎಂದು ಹೇಳಲಾಗಿದ್ದು, ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಕೆಜಿಎಫ್, ಕಾಂತಾರದಂತಹ ದೊಡ್ಡ ಸಿನಿಮಾಗೆ ಬಂಡವಾಳ ಹೂಡಿದ್ದ ಹೊಂಬಾಳೆ ಫಿಲಂಸ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದೆ.












Click it and Unblock the Notifications